More

    ಹಣವಿಲ್ಲದಿದ್ದರೆ ಚಿಂತೆ ಬೇಡ, ಕಾನೂನು ಸೇವೆಯ ಸಹಾಯ ಪಡೆಯಿರಿ…

    ಪ್ರಶ್ನೆ: ನಾನು ಜೂನ್ 15 2020 ರಂದು ಮದುವೆ ಆಗಿದ್ದೇನೆ, ಮದುವೆ ಆಗಿ 3ತಿಂಗಳಿಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ಆದ್ದರಿಂದ ನನ್ನ ಬಲಭಾಗದ ಕೈ, ಭುಜ – ಮುಂಗೈವರೆಗೂ ಶಸ್ತ್ರ ಚಿಕಿತ್ಸೆ ಆಗಿದೆ. ಕೈ ಚಲನೆ ಮಾಡಲು ಮತ್ತೆ 2 ಸಣ್ಣ ಶಸ್ತ್ರ ಚಿಕಿತ್ಸೆ ಆಗಬೇಕಿದೆ. ಎಲ್ಲವನ್ನೂ ಅಮ್ಮನೇ ನೋಡಿಕೊಳ್ಳುತ್ತಿದ್ದಾರೆ.

    ನನಗೆ 14 ವರ್ಷದವಳಿದ್ದಾಗಲಿಂದಲು ಮೂರ್ಛೆ ರೋಗ ಇದೆ. ಇನ್ನೂ ಗುಣ ಆಗಿಲ್ಲ.ಈ ಕಾರಣದಿಂದಾಗಿ ನನಗೆ ಮಗು ಆಗಲ್ಲ ಹಾಗೂ ಆಜೀವ ಚಿಕಿತ್ಸೆ ತಾವೇ ಕೊಡಿಸಬೇಕು ಎನ್ನುವ ಕಾರಣಕ್ಕೆ ವಿಚ್ಛೇದನ ಕೊಡು ಎಂದು ಗಂಡನ ಮನೆಯಲ್ಲಿ ಹಿಂಸಿಸುತ್ತಿದ್ದಾರೆ. ಗಂಡ ಕೂಡ ಅಪ್ಪ- ಅಮ್ಮನ ಮಾತನ್ನು ಕೇಳುತ್ತಿದ್ದಾರೆ. ಈಗ ಅಮ್ಮನ ಮನೆಗೆ ಕಳುಹಿಸಿದ್ದಾರೆ.
    ಅವರು ಸಮಾಜದ ಮುಂದೆ ತುಂಬಾ ಒಳ್ಳೆಯವರೆಂದು ತೋರಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ. ಈಗ ನಾನು ಏನು ಮಾಡಲಿ? ವಕೀಲರ ಸಂಪರ್ಕಿಸಲು ನನ್ನ ಬಳಿ ಹಣವಿಲ್ಲ. ಮದುವೆಗೆ ಆಗಿರುವ ಸಾಲ ಇನ್ನೂ ಒಂದೂವರೆ ಲಕ್ಷ ಬಾಕಿ ಇದೆ. ಹೇಗೆ ತೀರಿಸಲಿ? ಜೀವನದ ಮುಂದಿನ ದಾರಿ ದಯವಿಟ್ಟು ತಿಳಿಸಿ.

    ಉತ್ತರ: ನಿಮ್ಮ ಪತಿ ನಿಮ್ಮ ಜೊತೆ ದಾಂಪತ್ಯ ಜೀವನ ನಡೆಸಬೇಕು ಎಂದು ಬಯಸಿದರೆ, ನೀವು ದಾಂಪತ್ಯ ಜೀವನದ ಪೂರ್ವ ಹಕ್ಕುಗಳ ಪುನರ್‌ ಸ್ಥಾಪನೆಗೆ /ರೆಸ್ಟಿಟ್ಯೂಷನ್‌ ಆಫ್‌ ಕಾಂಜುಗಲ್‌ ರೈಟ್ಸ್‌ಗೆ ಪ್ರಕರಣ ದಾಖಲಿಸಿ.

    ನಿಮಗೆ ಇಷ್ಟವಿಲ್ಲದಿದ್ದರೆ ವಿಚ್ಛೇದನಕ್ಕೆ ಒಪ್ಪಿಕೊಳ್ಳಬೇಡಿ. ನಿಮ್ಮ ಜಿಲ್ಲೆಯ ಕಾನೂನು ಸೇವಾ ಕೇಂದ್ರದಲ್ಲಿ ನಿಮಗೆ ಉಚಿತ ಕಾನೂನು ಸೇವೆ ಕೊಡಿಸಬೇಕೆಂದು ಅರ್ಜಿ ಕೊಡಿ. ಕಾನೂನು ಸೇವಾ ಕೇಂದ್ರದವರೇ ವಕೀಲರನ್ನು ಗೊತ್ತುಮಾಡಿಕೊಡುತ್ತಾರೆ. ಎಲ್ಲ ಖರ್ಚನ್ನೂ ಅವರೇ ಭರಿಸುತ್ತಾರೆ. ನಿಮಗೆ ಒಂದು ನಯಾ ಪೈಸೆಯ ಖರ್ಚೂ ಆಗುವುದಿಲ್ಲ.

    ನಿಮ್ಮ ವೈದ್ಯಕೀಯ ಖರ್ಚುಗಳನ್ನು ನಿಮ್ಮ ಪತಿಯೇ ನಿಭಾಯಿಸಬೇಕು ಎಂದು ಆದೇಶ ಮಾಡಿ ಎಂದು ಕೇಳಿಕೊಂಡು ಒಂದು ಅರ್ಜಿಯನ್ನೂ ನೀವು ನ್ಯಾಯಾಲಯಕ್ಕೆ ಸಲ್ಲಿಸಬಹುದು. ಆದರೆ ಮದುವೆಗೆ ನೀವು ಮಾಡಿದ ಖರ್ಚು ಕೊಡಬೇಕೆಂದು ಕೇಳಲಾಗುವುದಿಲ್ಲ.

    ಡಿವೋರ್ಸ್‌ ಆದರೂ ಪತ್ನಿಯ ಆಸ್ತಿಯಲ್ಲಿ ಹಕ್ಕು ಸಿಗುತ್ತಾ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts