

ಇದೀಗ ವೈರಲ್ ವಿಡಿಯೋಗಳ ಸುಗ್ಗಿ. ಹುಟ್ಟಿನಿಂದ ಹಿಡಿದು ಸಾಯುವವರೆಗಿನ ದೃಶ್ಯಗಳೆಲ್ಲವೂ ವಿಡಿಯೋದಲ್ಲಿಯೇ ಸಿಗುವ ಕಾಲ ಇದಾಗಿದೆ. ಅಪಘಾತ ಸಂಭವಿಸಲಿ, ಹಿಂಸಾಚಾರವೇ ಆಗಲಿ ಇಲ್ಲವೇ ಖುಷಿಯ ಕ್ಷಣಗಳೇ ಆಗಲಿ ಸ್ಮಾರ್ಟ್ಫೋನ್ ಆನ್ ಮಾಡಿ ವಿಡಿಯೋ ಮಾಡುವುದು ಎಂದರೆ ಹಲವರಿಗೆ ಎಲ್ಲಿಲ್ಲದ ಖುಷಿ.
ಇಂಥ ಕೆಲವು ವಿಡಿಯೋಗಳು ಭಯಾನಕವಾಗಿದ್ದು, ಕೆಲವು ಎಂಥ ನೋವಿನ ಕ್ಷಣಗಳಲ್ಲಿಯೂ ನಗುವನ್ನು ಉಕ್ಕಿಸುತ್ತವೆ. ಅಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಶೇರ್ ಆಗುತ್ತವೆ, ಅಂಥದ್ದೇ ಒಂದು ಹಾಸ್ಯಭರಿತ ವಿಡಿಯೋ ಇದೀಗ ವೈರಲ್ ಆಗಿದ್ದು, ನಗು ಉಕ್ಕಿಸುವಂತಿದೆ.
ಈ ವಿಡಿಯೋದಲ್ಲಿ ಕೆಲವರು ಕಂಠಪೂರ್ತಿ ಕುಡಿದು ಕೆಲವು ಪುರುಷರು ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ, ಇನ್ನು ಕೆಲವರು ಅವರ ಜತೆ ತಾವೂ ಕುಣಿಯುತ್ತಿದ್ದಾರೆ. ಈ ವಿಷಯ ಅಲ್ಲಿರುವ ಒಬ್ಬಾತನ ಪತ್ನಿಗೆ ತಿಳಿಯುತ್ತದೆ. ಸ್ಥಳಕ್ಕೆ ಬಡಿಗೆಯೊಂದಿಗೆ ಬರುತ್ತಾರೆ ಆ ಪತ್ನಿ.
ಪತ್ನಿ ಬರುತ್ತಿರುವುದನ್ನು ದೂರದಿಂದಲೇ ನೋಡಿದ ಪತಿರಾಯ ಅಲ್ಲಿಂದ ಕಾಲುಕೀಳುತ್ತಾನೆ. ಇದು ನಿಜವಾಗಿ ನಡೆದಿರುವ ಘಟನೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಪತಿರಾಯ ಜಸ್ಟ್ ಮಿಸ್, ಇಲ್ಲದಿದ್ದರೆ ಆಗುತ್ತಿತ್ತು ಭಯಾನಕ ಅನಾಹುತ ಎಂಬ ಶೀರ್ಷಿಕೆಯೊಂದಿಗೆ ಇದನ್ನು ಶೇರ್ ಮಾಡಲಾಗುತ್ತಿದೆ.
ನೀವು ಈ ವಿಡಿಯೋ ಇಲ್ಲಿ ನೋಡಿ ಎನ್ಜಾಯ್ ಮಾಡಿ...