VIDEO: ಯುವಕರೇ ಹುಷಾರ್​! ಈಗಲೇ ಡಾನ್ಸ್​ ಕಲಿತುಬಿಡಿ- ಇಲ್ಲದಿದ್ದರೆ ಕಾದಿದೆ ಅಪಾಯ

dance
Published on

ವಾಟ್ಸ್​ಆ್ಯಪ್​, ಫೇಸ್​ಬುಕ್​ ಸೇರಿದಂತೆ ವಿವಿಧ ಜಾಲತಾಣಗಳು ಎಂದರೆ ಅವುಗಳಲ್ಲಿ ಮೀಮ್ಸ್​ಗಳು, ಭಿನ್ನಭಿನ್ನ ಹಾಸ್ಯಭರಿತ ವಿಡಿಯೋಗಳು ಹರಿದಾಡುವುದು ಮಾಮೂಲು. ಅದರಲ್ಲಿಯೂ ಚೀನಾದ ಆ್ಯಪ್​ ಟಿಕ್​ಟಾಕ್​ ಅಂತೂ ಲಕ್ಷಾಂತರ ಮಂದಿಗೆ ಹೊಸ ವೇದಿಕೆಯನ್ನೇ ಕಲ್ಪಿಸಿಬಿಟ್ಟಿದೆ.

ಟಿಕ್​ಟಾಕ್​ ಸದ್ಯ ಭಾರತದಲ್ಲಿ ಬ್ಯಾನ್​ ಆಗಿದ್ದರೂ, ಅದರ ಮೂಲಕ ಮಾಡಿರುವ ವಿಡಿಯೋಗಳು ಮಾತ್ರ ಸದಾ ಹಸಿರು. ಇನ್ನೂ ಕೆಲವು ಹಾಸ್ಯಭರಿತ ವಿಡಿಯೋಗಳಂತೂ ಈಗಲೂ ಹರಿದಾಡುತ್ತಲೇ ಇವೆ.

ಇದು ಹಾಸ್ಯದ ಮಾತಾದರೆ, ಇನ್ನು ಗಂಭೀರ ವಿಷಯಕ್ಕೆ ಬರುವುದಾದರೆ, ಚಿಕ್ಕಮಕ್ಕಳಿಗೆ ಊಟ ಮಾಡಿಸುವ ಗೋಳು. ಹಿಂದೆಲ್ಲಾ ಚಂದಮಾನನನ್ನು ತೋರಿಸಿ ಊಟ ಮಾಡಿಸುತ್ತಿದ್ದರು. ಈಗಲೇ ಕೆಲವು ಕಡೆಗಳಲ್ಲಿ ಈ ಪದ್ಧತಿ ಇದೆ ಅನ್ನಿ.

ಆದರೆ ಚಂದ್ರನೇ ಕಾಣಿಸದ ನಗರಗಳಲ್ಲಿ ವಾಸಿಸುವವರ ಗತಿ ಏನು? ಅವರಿಗೆ ಮೊಬೈಲ್​ ಫೋನ್​ ಕೊಟ್ಟು ಊಟ ಮಾಡಿಸುತ್ತಾರೆ. ಅವುಗಳಲ್ಲಿ ಕಾರ್ಟೂನ್​ಗಳನ್ನು ತೋರಿಸಿ ಹೇಗೆ ತುತ್ತು ಅನ್ನ ಮಗುವಿನ ಬಾಯಿಗೆ ಹಾಕುತ್ತಾರೆ. ಆದರೆ ದಿನವೂ ಮಕ್ಕಳ ಕೈಯಲ್ಲಿ ಫೋನ್​ ಕೊಡುವುದು ಕಷ್ಟವೇ. ಅವರು ಅದನ್ನು ಎಸೆದರೆ ಮುಗಿದೇ ಹೋಯಿತು. ಇಲ್ಲವೇ ಮಗುವಿಗೆ ದಿನವೂ ಫೋನ್​ ಕೊಡುವುದು ಕೂಡ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವುದೂ ನಿಜ, ಇನ್ನು ದಿನವೂ ಫೋನ್​ ನೋಡುತ್ತಿದ್ದರೆ ಹೇಳಿ ಕೇಳಿ ಇಂದಿನ ಮಕ್ಕಳು... ಅವುಗಳಿಗೆ ಬೇಜಾರು ಬಂದುಬಿಡುತ್ತವೆ. ಇದೇ ಕಾರಣಕ್ಕೆ ಪಾಲಕರು ಬೇರೆ ಬೇರೆ ವಿಧಾನ ಹುಡುಕುತ್ತಿದ್ದಾರೆ.

ಇಂಥದ್ದೇ ಒಂದು ಊಟ ಮಾಡಿರುವ ಹಾಸ್ಯಭರಿತ ಟಿಕ್​ಟಾಕ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಇದರಲ್ಲಿ ಅಮ್ಮ ಮಗುವಿಗೆ ಊಟ ಮಾಡಿಸುತ್ತಿದ್ದಾಳೆ. ತುತ್ತು ಅನ್ನ ಹಾಕಿಕೊಳ್ಳಲು ಕೂಡ ಮಗು ಇಷ್ಟಪಡುವುದಿಲ್ಲ. ಇದೇ ಕಾರಣಕ್ಕೆ ಅಪ್ಪ ಮಗುವಿನ ಮುಂದೆ ಡಾನ್ಸ್​ ಮಾಡುತ್ತಾನೆ. ಮಗುವಿಗೆ ಊಟ ಮಾಡಿಸಲು ಇದೊಂದು ರೀತಿಯಲ್ಲಿ ಒಳ್ಳೆಯ ಪ್ಲ್ಯಾನ್​.

ವೈರಲ್​ ಆಗಿರೋ ಈ ವಿಡಿಯೋ ನೋಡಿ: https://www.facebook.com/VVani4U/videos/321173295855479/

ಇದೇ ಕಾರಣಕ್ಕೆ ಇದರ ವಿಡಿಯೋ ಶೇರ್​ ಆಗುತ್ತಿದ್ದು, ಯುವಕರೇ, ಮುಂದಿನ ಅಪ್ಪಂದಿರೇ ಈಗಲೇ ಡಾನ್ಸ್​ ಕಲಿತುಕೊಂಡುಬಿಡಿ, ಇಲ್ಲದಿದ್ದರೆ ಮುಂದೆ ನೃತ್ಯ ಮಾಡುವುದು ಕಷ್ಟವಾಗಬಹುದು, ಕೈಕಾಲು ನೋಯಬಹುದು. ನಿಮ್ಮ ಮಗುವಿಗೆ ಊಟ ಮಾಡಿಸಲು ಮುಂದೆ ನೀವೇ ಡಾನ್ಸ್​ ಮಾಡಬೇಕಾಗುವ ಕಾರಣ, ಈಗಲೇ ನಿಧಾನಕ್ಕೆ ಅದನ್ನು ಕಲಿತುಬಿಡಿ, ಇಲ್ಲದಿದ್ದರೆ ನಿಮಗೆ ಕೊನೆಯ ಪಕ್ಷ ಹೆಂಡತಿಯಿಂದಾದರೂ ಅಪಾಯ ಕಾದಿದೆ ಎಂಬ ಒಕ್ಕಣಿಕೆಯಿಂದ ವಿಡಿಯೋ ಶೇರ್​ ಆಗುತ್ತಿದೆ. ನೀವೂ ಒಮ್ಮೆ ವಿಡಿಯೋ ನೋಡಿ ನಕ್ಕುಬಿಡಿ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net