

ಫಿಲಿಪ್ಪೀನ್ಸ್: ಮಗುವಿಗೆ ವಿಭಿನ್ನ ರೀತಿಯ, ವೈರಲ್ ಆಗುವಂಥ ಹೆಸರು ಇಡಬೇಕು ಎಂದು ಕೆಲವು ಪಾಲಕರು ಬಯಸುವುದು ಸಹಜ. ಯಾರಾದರೂ ಸೆಲೆಬ್ರಿಟಿಗಳು ಹುಟ್ಟಿದ ದಿನ ಇಲ್ಲವೇ ಮೃತಪಟ್ಟರೆ, ತಮ್ಮ ಮಗುವಿಗೆ ಅದೇ ಹೆಸರು ಇಡುವುದು ಮಾತ್ರವಲ್ಲದೇ ಕರೊನಾ, ಸುಮಾನಿ.... ಈ ರೀತಿಯ ಅಪಾಯಕಾರಿ ಹೆಸರು ಇಡುವುದೂ ನಡೆದೇ ಇದೆ.
ಆದರೆ ಇಲ್ಲೊಬ್ಬ ವೆಬ್ ವಿನ್ಯಾಸಕಾರ ಡಿಫರೆಂಟ್ ಆಗಿರುವ ಹೆಸರು ಇಟ್ಟು ಜಾಲತಾಣದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅಷ್ಟಕ್ಕೂ ಇವರು ತಮ್ಮ ಮಗುವಿಗೆ ಇಟ್ಟಿರುವ ಹೆಸರು ಎಚ್‌ಟಿಎಂಎಲ್. ಇಂಟರ್‌ನೆಟ್ ಬಳಕೆದಾರರು ಎಚ್‌ಟಿಎಎಲ್ (ಹೈಪರ್‌ಟೆಕ್ಸ್ಟ್ ಮಾರ್ಕಪ್ ಲ್ಯಾಂಗ್ವೇಜ್ ) ದಿನನಿತ್ಯವೂ ನೂರಾರು ಬಾರಿ ನೋಡಿರುತ್ತಾರೆ. ಆ ಹೆಸರನ್ನು ತಮ್ಮ ಮಗುವಿಗೆ ಇಟ್ಟು ಫೇಮಸ್ ಆಗಿರುವ ವ್ಯಕ್ತಿ ಫಿಲಿಪ್ಪೀನ್ಸ್‌ನ ಮ್ಯಾಕ್ ಪಾಸ್ಕೌಲ್. ಇದು ತಮ್ಮ ವೃತ್ತಿಗೆ ಸಲ್ಲಿಸಿರುವ ವಿಶಿಷ್ಟ ಗೌರವ ಎಂದಿದ್ದಾರೆ ಅವರು. ’ಜಗತ್ತಿಗೆ ಸ್ವಾಗತ ಎಚ್‌ಟಿಎಂಎಲ್’ ಎಂದು ಫೇಸ್ಬುಕ್‌ನಲ್ಲಿ ಟೈಪ್ ಮಾಡಿ ಜಗತ್ತಿಗೆ ಪರಿಚಯಿಸಿದ್ದಾರೆ ತಮ್ಮ ಮಗುವನ್ನು!
ತಮ್ಮ ಕುಟುಂಬದಲ್ಲಿ ಹೀಗೆ ವಿಶಿಷ್ಟ ಹೆಸರುಗಳನ್ನು ಇಟ್ಟುಕೊಳ್ಳುವುದು ಒಂದು ಅಭ್ಯಾಸವಾಗಿದೆ ಎನ್ನುವ ಪಾಸ್ಕೌಲ್, ತಮಗೆ ಪಾಲಕರು ಇಟ್ಟ ಹೆಸರು ಮ್ಯಾಕ್ರೋನಿ 85 ಎಂದು ಹೇಳೀಕೆ ನೀಡಿದ್ದಾರೆ. ಸದ್ಯ ಮಗು ಎಚ್‌ಟಿಎಂಎಲ್‌ನ ತೂಕ 4.9 ಪೌಂಡ್‌ಗಳಷ್ಟು ಇದೆ.