ಹೃತಿಕ್​​- ಕಂಗನಾ ನಡುವೆ ಲೈಂಗಿಕ ಸಂಬಂಧ: ಗೋಸ್ವಾಮಿ ಚಾಟ್​ ಸೋರಿಕೆ

arnab-kangana
Published on

ನವದೆಹಲಿ: ಟಿಆರ್​ಪಿ ತಿರುಚಿರುವ ಹಗರಣ ಸೇರಿದಂತೆ ಕೆಲವೊಂದು ಕೇಸ್​ಗಳಲ್ಲಿ ಸಿಲುಕಿರುವ ರಿಪಬ್ಲಿಕ್‌ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ಅರ್ನಬ್‌ ಗೋಸ್ವಾಮಿ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ. ಇವರು ಮತ್ತು ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್ ‌(ಬಾರ್ಕ್‌) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ನಡುವಿನ ವ್ಯಾಟ್ಸ್​ಆ್ಯಪ್​ ಚಾಟ್‌ ಸೋರಿಕೆಯಾಗಿದ್ದು, ಟ್ವಿಟರ್‌ನಲ್ಲಿ ಹರಿದಾಡಿವೆ. ಸುಪ್ರಿಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ಗೋಸ್ವಾಮಿ ಹಾಗೂ ದಾಸ್‌ಗುಪ್ತಾ ನಡುವಿನ ವ್ಯಾಟ್ಸ್​ಆ್ಯಪ್​ ಚಾಟ್‌ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ಸದ್ದು ಮಾಡುತ್ತಿದೆ.

ಇದು ಒಂದೆಡೆಯಾದರೆ ಇದೇ ಸೋರಿಕೆಯಾಗಿರುವ ಚಾಟ್​ನಲ್ಲಿ ಬಾಲಿವುಡ್​ ನಟ ಹೃತಿಕ್​ ರೋಷನ್​ ಹಾಗೂ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿ ಇರುವ ನಟಿ ಕಂಗನಾ ರಣಾವತ್​ ನಡುವಿನ ಸೆಕ್ಸ್​ಲೈಫ್​ ಬಗ್ಗೆಯೂ ಅದರಲ್ಲಿ ಉಲ್ಲೇಖವಾಗಿದೆ.

ಹೃತಿಕ್ ರೋಷನ್ ಮೇಲೆ ಕಂಗನಾಗೆ ಇದ್ದ ಪರಮ ವ್ಯಾಮೋಹದ ಬಗ್ಗೆ ಉಲ್ಲೇಖವಿದೆ. ಹೃತಿಕ್​ ರೋಷನ್​ ಮತ್ತು ಕಂಗನಾ ರಣಾವತ್​ ನಡುವೆ ಲೈಂಗಿಕ ಸಂಬಂಧ ಇರುವ ಬಗ್ಗೆ ಚಾಟ್​ನಲ್ಲಿ ವಿವರಣೆ ನೀಡಲಾಗಿದೆ. ಕಂಗನಾ ತನ್ನ ಲಿಮಿಟ್​ ಕ್ರಾಸ್​ ಮಾಡಿದ್ದಾಳೆ ಎಂದು ಅರ್ನಬ್​ ಉಲ್ಲೇಖಿಸಿದ್ದಾರೆ. ಈ ಚಾಟ್​ನ ಸ್ಕ್ರೀನ್​ಶಾಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವಾರು ಮಂದಿ ಕಮೆಂಟ್​ ಮಾಡುತ್ತಿದ್ದಾರೆ.

ಇಂಟೀರಿಯರ್​ ಡಿಸೈನರ್​ ಒಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್​ ಗೋಸ್ವಾಮಿ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದ ಸಂದರ್ಭದಲ್ಲಿ ಇದರ ವಿರುದ್ಧ ದನಿ ಎತ್ತಿದ ಅನೇಕ ಮಂದಿಯ ಪೈಕಿ ಕಂಗನಾ ರಣಾವತ್​ ಕೂಡ ಒಬ್ಬರಾಗಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಮಹಾರಾಷ್ಟ್ರ ಸರ್ಕಾರಕ್ಕೆ ನಾನು ಕೇಳುವುದೇನೆಂದರೆ, ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರ ಮನೆ ಮೇಲೆ ದಾಳಿ ಮಾಡಿ, ಅವರ ಮೇಲೆ ಹಲ್ಲೆ ಮಾಡಿರುವ ನೀವು, ಇನ್ನು ಎಷ್ಟು ಇಂತಹ ದಾಳಿ ಮಾಡಲಿದ್ದೀರಿ? ಎಷ್ಟು ಧ್ವನಿಗಳ ಅಡಗಿಸುವ ಪ್ರಯತ್ನ ಮಾಡುತ್ತೀರಿ..? ಸೋನಿಯಾ ಸೇನೆ, ಪಪ್ಪು ಸೇನೆ ಎಷ್ಟು ದಿನ ಅಂತ ಈ ರೀತಿಯಾದ ಕೃತ್ಯಗಳನ್ನು ಮಾಡುತ್ತದೆ..?' ಎಂದು ಖಡಕ್ ಆಗಿ ಕಂಗನಾ ಪ್ರಶ್ನೆ ಮಾಡಿದ್ದರು. ಇದೀಗ ಅವರ ವಿರುದ್ಧದ ಚಾಟ್​ ಸೋರಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net