More

    ಎಲೆಕ್ಟ್ರಿಕ್​ ಕೇಬಲ್​ ತಗುಲಿ ಬಸ್​ಗೆ ಬೆಂಕಿ: ಆರು ಮಂದಿ ಸಜೀವ ದಹನ

    ಜೈಪುರ: ಎಲೆಕ್ಟ್ರಿಕ್​ ಕೇಬಲ್​ಗೆ ತಾಗಿ ಬಸ್​ಗೆ ಬೆಂಕಿ ತಗುಲಿ ಆರು ಮಂದಿ ಸಜೀವವಾಗಿ ಸುಟ್ಟುಹೋಗಿರುವ ಘಟನೆ ರಾಜಸ್ಥಾನದ ಜಾಲೋರ್‌ ಜಿಲ್ಲೆಯಲ್ಲಿ ನಡೆದಿದೆ. 

    ಖಾಗಿ ಬಸ್​ ಒಂದು ಮಂಡೋರ್‌ನಿಂದ ಬ್ಯಾವರ್‌ಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಮಹೇಶ್​ಪುರ ಗ್ರಾಮದ ಬಳಿ ಬಸ್​ ನಿಲುಗಡೆ ಮಾಡಲಾಗಿತ್ತು. ಬಸ್​ನ ಮೇಲ್ಭಾಗ ಎಲೆಕ್ಟ್ರಕ್​ ಕೇಬಲ್​ಗೆ ತಗುಲಿತ್ತು. ಇದು ಚಾಲಕನ ಗಮನಕ್ಕೆ ಬಂದಿರಲಿಲ್ಲ.

    ಕೇಬಲ್​ನಲ್ಲಿ ವಿದ್ಯುತ್​ ಪ್ರಸರಣವಾಗುತ್ತಿದ್ದುದರಿಂದ ಅದು ಬಸ್​ಗೆ ತಗುಲಿದ್ದು, ಧಗ್ಗನೆ ಬೆಂಕಿ ಹೊತ್ತಿಕೊಂಡಿದೆ. ಬಸ್​ನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದರು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಲ್ಲರೂ ಒಳಗಡೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಆರು ಮಂದಿ ಅದಾಗಲೇ ದಹಿಸಿ ಹೋಗಿದ್ದಾರೆ.

    19 ಮಂದಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಜಾಲೋರ್‌ನ ಮುಖ್ಯ ಆರೋಗ್ಯ ಅಧಿಕಾರಿ ಡಾ.ಎಸ್‌.ಪಿ.ಶರ್ಮಾ ಮಾಹಿತಿ ನೀಡಿದ್ದಾರೆ.

    ಘಟನೆಗೆ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts