ಪದವೀಧರರಿಗೆ ಭರ್ಜರಿ ಅವಕಾಶ- ಹೈಕೋರ್ಟ್​ನಲ್ಲಿ 142 ಎಸ್​ಡಿಎ ಹುದ್ದೆಗೆ ಅರ್ಜಿ ಆಹ್ವಾನ

Dharawad High Court Circuit Bench 2ed
Published on

ಬೆಂಗಳೂರು: ರಾಜ್ಯ ಹೈಕೋರ್ಟ್​ನಲ್ಲಿ ಖಾಲಿಯಿರುವ 142 ದ್ವೀತಿಯ ದರ್ಜೆ ಸಹಾಯಕರ (ಎಸ್​ಡಿಎ) ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲ ಹುದ್ದೆಗಳು ಬೆಂಗಳೂರು ಪ್ರಧಾನ ಪೀಠದಲ್ಲಿ ಖಾಲಿಯಿದ್ದು, ಆನ್​ಲೈನ್​ನಲ್ಲಿ ಅರ್ಜಿಆಹ್ವಾನಿಸಲಾಗಿದೆ.

ವಯೋಮಿತಿ: ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷವಾಗಿದ್ದು, ಗರಿಷ್ಠ ವಯೋಮಿತಿ ಎಸ್​ಸಿ-ಎಸ್​ಟಿ ಅಭ್ಯಥಿರ್ಗಳಿಗೆ 40 ವರ್ಷ, ಹಿಂದುಳಿದ ವರ್ಗ- 38 ಹಾಗೂ ಸಾಮಾನ್ಯ ವರ್ಗದವರಿಗೆ 35 ವರ್ಷವಾಗಿದೆ.


ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಲೆ, ವಾಣಿಜ್ಯ, ವಿಜ್ಞಾನ, ವ್ಯವಹಾರ ನಿರ್ವಹಣೆ ಅಥವಾ ಕಂಪ್ಯೂಟರ್​ ಅಪ್ಲಿಕೇಷನ್​ನಲ್ಲಿ ಪದವಿ ಪಡೆದಿರಬೇಕು. ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳ ಅಭ್ಯಥಿರ್ಗಳು ಶೇ.55 ಹಾಗೂ ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ ಅಭ್ಯಥಿರ್ಗಳು ಶೇ.50 ಅಂಕ ಗಳಿಸಿರಬೇಕು. ಬೇಸಿಕ್​ ಕಂಪ್ಯೂಟರ್​ ಕೋರ್ಸ್​ ಪ್ರಮಾಣ ಪತ್ರ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕೊನೆಯ ದಿನ: ಸೆಪ್ಟೆಂಬರ್‌ 24


ಹೆಚ್ಚಿನ ಮಾಹಿತಿಗೆ: https://karnatakajudiciary.kar.nic.in/recruitment.php

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net