ಪಟಾಕಿಗೆ ಬಲಿಯಾದ ಬಿಜೆಪಿ ಸಂಸದೆಯ ಏಕೈಕ ಮೊಮ್ಮಗಳು!

bahujan1
Published on

ಪ್ರಯಾಗ್​ರಾಜ್​ (ಉತ್ತರ ಪ್ರದೇಶ): ಪಟಾಕಿಯಿಂದ ಒಂದೆಡೆ ವಾಯುಮಾಲಿನ್ಯ ಹೆಚ್ಚುತ್ತಿದೆ ಎನ್ನುವ ಕಾರಣಕ್ಕೆ ಹಲವು ಕಡೆಗಳಲ್ಲಿ ಅದನ್ನುಬ್ಯಾನ್​ ಮಾಡಿದ್ದರೆ, ಪಟಾಕಿಯಿಂದಾಗುತ್ತಿರುವ ಅವಘಡಗಳು ಇನ್ನೊಂದೆಡೆ.

ಪ್ರತಿಸಲ ದೀಪಾವಳಿಯ ಸಮಯದಲ್ಲಿ ಅದೆಷ್ಟೋ ಮಕ್ಕಳು ಪಟಾಕಿ ಸಿಡಿತದಿಂದಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಪಟಾಕಿ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ 8 ವರ್ಷದ ಮೊಮ್ಮಗಳನ್ನು ಬಲಿ ಪಡೆದಿದೆ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ದುರ್ಘಟನೆಯಲ್ಲಿ ರೀಟಾ ಬಹುಗುಣ ಅವರ ಮಗ ಮಯಾಂಕ್ ಜೋಶಿಯವರ ಮಗಳು ಮೃತಪಟ್ಟಿದ್ದಾಳೆ. ರೀಟಾ ಅವರು ಪ್ರಯಾಗ್‌ರಾಜ್‌ ಸಂಸದೆ. ಬಾಲಕಿ ಮನೆಯ ಟೆರೇಸ್‌ನಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ತಗುಲಿತ್ತು.

ಬೆಂಕಿ ತಗುಲಿದ ಕೂಡಲೇ ಬಾಲಕಿ ಕಿರುಚಾಡಿದ್ದಾಳೆ. ಆದರೆ ಪಟಾಕಿ ಸದ್ದಿನಲ್ಲಿ ಬಾಲಕಿಯ ಕಿರುಚಾಟ ಯಾರಿಗೂ ಕೇಳಿಸಿರಲಿಲ್ಲ ಎನ್ನಲಾಗಿದೆ.

ನಂತರ ಇದು ಗೊತ್ತಾಗುವಷ್ಟರದಲ್ಲಿಯೇ ಬಾಲಕಿಗೆ ಶೇಕಡಾ 60 ರಷ್ಟು ಸುಟ್ಟಗಾಯಗಳಾಗಿದ್ದವು. ಕೂಡಲೇ ಆಕೆಯನ್ನು ಏರ್

‌ಆ್ಯಂಬುಲೆನ್ಸ್‌ನಲ್ಲಿ ದೆಹಲಿಯ ಏಮ್ಸ್‌ಗೆ ಶಿಫ್ಟ್ ಮಾಡಿದ್ದಾರೆ. ಆದರೆ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಈಕೆ ರೀಟಾ ಅವರ ಏಕೈಕ ಮೊಮ್ಮಗಳು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net