More

    ದೀಪಾವಳಿ ಸಮಯದಲ್ಲಿ ರಕ್ತದೋಕುಳಿಗೆ ಸ್ಕೆಚ್: ಜೈಷ್-ಎ-ಮೊಹಮ್ಮದ್​ ಉಗ್ರರು ಅರೆಸ್ಟ್​

    ನವದೆಹಲಿ: ದೀಪಾವಳಿಯ ಸಮಯದಲ್ಲಿಯೇ ಉಂಟಾಗಬೇಕಿದ್ದ ಭಾರಿ ಪ್ರಮಾಣದ ವಿಧ್ವಂಸಕ ಕೃತ್ಯ ದೆಹಲಿಯ ಪೊಲೀಸರಿಂದಾಗಿ ತಪ್ಪಿದಂತಾಗಿದೆ. ಹಬ್ಬದ ಸಮಯದಲ್ಲಿಯೇ ರಕ್ತದೋಕುಳಿಗೆ ಸ್ಕೆಚ್​ ಹಾಕಿದ್ದ ಜೈಷ್-ಎ-ಮಹಮದ್ (ಜೆಇಎಂ) ಉಗ್ರಗಾಮಿ ಸಂಘಟನೆಯ ಭಯೋತ್ಪಾದಕರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಘಟಕದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ದೆಹಲಿಯ ಸರಾಯ್ ಕೇಲ್ ಖಾನ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಬಂಧನಕ್ಕೊಳಪಡಿಸಿರುವ ಅಧಿಕಾರಿಗಳು, ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ. ಪೊಲೀಸರು ಎರಡು ಅರೆ ಸ್ವಯಂಚಾಲಿತ ಪಿಸ್ತೂಲ್​ಗಳು ಮತ್ತು 10 ಜೀವಂತ ಕಾಟ್ರಿಡ್ಜ್​ಗಳನ್ನು ವಶಪಡಿಸಿಕೊಂಡಿದ್ದಾರೆ.

    ನಿನ್ನೆ ರಾತ್ರಿ 10.15ರಲ್ಲಿ ಆಗ್ನೇಯ ದೆಹಲಿಯ ಸರೈ ಕಾಲೇ ಖಾನದ ಮಿಲೇನಿಯಂ ಪಾರ್ಕ್ ಬಳಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ. ಈ ಬಂಧನದಿಂದಾಗಿ ಭಯೋತ್ಪಾದನೆ ಕೃತ್ಯವೊಂದು ತಪ್ಪಿದಂತಾಗಿದೆ.

    ಇದನ್ನೂ ಓದಿ:  ಕುತೂಹಲದ ಕೇಂದ್ರವಾದ ಬ್ರಿಕ್ಸ್​ ಶೃಂಗಸಭೆ: ಮೋದಿ- ಜಿನ್‌ಪಿಂಗ್‌ ​ಪುನಃ ಮುಖಾಮುಖಿ!

    ಬಂಧಿತರು ಪಾಕಿಸ್ತಾದನ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯವರು ಎಂದು ಗುರುತಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಘಟಕ) ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ. ದೆಹಲಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಜ್ಜಾಗಿದ್ದರು ಎಂದು ಅವರು ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ದೊರು ಗ್ರಾಮದ ನಿವಾಸಿ ಅಬ್ದುಲ್ ಲತೀಫ್ ಮಿರ್ (22) ಮತ್ತು ಕುಪ್ವಾರ ಜಿಲ್ಲೆಯ ಹಾತ್ ಮುಲ್ಲಾ ಗ್ರಾಮದ ಮೊಹಮ್ಮದ್​ ಆಶ್ರಫ್ ಖತಾನ (20) ಬಂಧಿತರು.

    ಉಗ್ರರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗಿದ್ದು, ಮತ್ತಷ್ಟು ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ ಎಂದು ಡಿಸಿಪಿ ಯಾದವ್ ತಿಳಿಸಿದ್ದಾರೆ.

    ಕಳೆದ ಆಗಸ್ಟ್ ತಿಂಗಳಿನಲ್ಲಿಯೂ ಕೂಡ ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದ ಓರ್ವ ಉಗ್ರನನ್ನು ಪೊಲೀಸರು ಬಂಧಿಸಿದ್ದರು.

    ವರ್ಷಗಟ್ಟಲೆ ಒಂದೇ ಮನೆಯಲ್ಲಿದ್ವಿ… ತನು-ಮನ ಎಲ್ಲಾ ಹಂಚಿಕೊಂಡ್ವಿ… ಆದ್ರೆ ಈಗ…

    ​ಫೋನ್​ಗೆ ಅಡಿಕ್ಟ್​ ಆಗಿರೋ ಮಕ್ಕಳಿಗೆ ಬೈತೀರಾ? ನಾಲ್ವರು ಕಾಣೆಯಾದ​ ಬಾಲಕಿಯರ ಸ್ಟೋರಿ ಓದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts