More

    ಬಾಲಕಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್- ಅಪ್ಪನ ಮೇಲಿನ ಸಿಟ್ಟಿಗೆ ಈ ವಿಕೃತಿ!

    ಭೋಪಾಲ್: ವಾಟ್ಸ್​ಆ್ಯಪ್​ಗಳಲ್ಲಿ ಹೆಣ್ಣುಮಕ್ಕಳಿಗೆ ಪುರುಷರು ಕೆಟ್ಟಕೆಟ್ಟ ಸಂದೇಶ, ವಿಡಿಯೋಗಳನ್ನು ಕಳುಹಿಸಿ ತಮ್ಮ ಕಾಮದಾಸೆಯನ್ನು ತೀರಿಸಿಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಮಧ್ಯಪ್ರದೇಶದ ಗ್ವಾಲಿಯರ್​ನ ಮಹಿಳೆ 11 ವರ್ಷದ ಬಾಲಕಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಖುಷಿ ಪಡುತ್ತಿದ್ದ ವಿಚಿತ್ರ ಘಟನೆ ನಡೆದಿದೆ.

    ಆನ್​ಲೈನ್​ ಕ್ಲಾಸ್​ಗೆಂದು ಬಾಲಕಿಗೆ ಸ್ಮಾರ್ಟ್​ ಫೋನ್​ ಕೊಡಿಸಲಾಗಿತ್ತು. ಇದಕ್ಕೆ ಸೆಕ್ಸ್​ಗೆ ಸಂಬಂಧಿಸಿದ ವಿಡಿಯೋಗಳು ಬರುತ್ತಿದ್ದವು. ಮೊದಲೆಲ್ಲಾ ಇದನ್ನು ಯಾರೋ ಪುರುಷರು ಕಳುಹಿಸುತ್ತಿರುವುದಾಗಿ ಮನೆಯವರೆಲ್ಲಾ ಸಂದೇಹ ಪಟ್ಟಿದ್ದರು. ನಂತರ ಅವರು ತನಿಖೆ ಮಾಡಿದಾಗ ಅದನ್ನು ಓರ್ವ ಮಹಿಳೆ ಕಳುಹಿಸುತ್ತಿರುವುದು ತಿಳಿದುಬಂದಿದೆ.

    ಆರೋಪಿ ಮಹಿಳೆ ಭೋಪಾಲ್​ನಲ್ಲಿ ವಾಸವಾಗಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದ್ದು, ಆಕೆಯನ್ನು ಬಂಧಿಸಲಾಗಿದೆ. ಈ ಬಗ್ಗೆ ಎಫ್‍ಐಆರ್ ದಾಖಲಾಗಿದೆ. ಈ ರೀತಿ ವಿಡಿಯೋ ಕಳಿಸೋದು ನಿಲ್ಲಿಸುವಂತೆ ತಿಳಿ ಹೇಳಿದರೂ ಮಹಿಳೆ ವಿಡಿಯೋ ಕಳುಹಿಸುವುದನ್ನು ಬಿಡುತ್ತಿಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದೇವೆ. ಈ ಘಟನೆ ನಮ್ಮ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ದೂರಿನಲ್ಲಿ ಬಾಲಕಿಯ ಪಾಲಕರು ಹೇಳಿರುವುದಾಗಿ ಗ್ವಾಲಿಯರ್ ಠಾಣೆಯ ಇನ್‍ಸ್ಪೆಕ್ಟರ್ ಸಂಜೀವ್ ಶರ್ಮಾ ಮಾಹಿತಿ ನೀಡಿದ್ದಾರೆ.

    ಅಷ್ಟಕ್ಕೂ ಇಂಥದ್ದೊಂದು ಕೃತ್ಯ ಎಸಗಲು ಕಾರಣವೇನೆಂದರೆ ಬಾಲಕಿಯ ತಂದೆ ಹಾಗೂ ಈ ಮಹಿಳೆಯ ನಡುವೆ ವ್ಯವಹಾರಕ್ಕೆ ಸಂಬಂಧಿಸಿದ ವಿಷಯವಾಗಿ ಮನಸ್ತಾಪ ಉಂಟಾಗಿದೆ. ಆದ್ದರಿಂದ ಮಗಳಿಗೆ ಹೀಗೆ ವೀಡಿಯೋ ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎನ್ನುವುದು ಪೊಲೀಸರು ತನಿಖೆಯಿಂದ ಬಯಲಾಗಿದೆ.

    ಅವಳೇ ವಿಡಿಯೋ ಕಾಲ್​ ಮಾಡಿದ್ಲು, ಈಗ ನಮ್ಮಿಬ್ಬರ ನಗ್ನ ವಿಡಿಯೋ ಇದೆಯೆಂದು ಬ್ಲ್ಯಾಕ್​ಮೇಲ್​​​- ಬಿಜೆಪಿ ಮುಖಂಡನಿಂದ ದೂರು

    ಪಾನೀಪುರಿ ಅಂದ್ರೆ ತುಂಬಾ ಇಷ್ಟನಾ? ಹಾಗಿದ್ರೆ ಈ ವಿಡಿಯೋ ಒಮ್ಮೆ ನೋಡಿ ಡಿಸೈಡ್​ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts