

ಗುವಾಹಟಿ (ಅಸ್ಸಾಂ): ರಸ್ತೆ ಬದಿಯಲ್ಲಿ ಸಾಗುತ್ತಿರುವ ಘಮ್ ಎಂದು ಮೂಗಿಗೆ ಬಡಿಯುವ ಪಾನೀಪುರಿ ಪರಿಮಳ ನೋಡಿದರೆ ಅಲ್ಲಿಯೇ ನಿಂತುಬಿಡೋಣ ಅನಿಸತ್ತೆ ಅಲ್ವಾ? ಅಂಥ ಜಾದೂ ಇದಕ್ಕಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇದೆಂದರೆ ತುಂಬಾ ಇಷ್ಟ.
ಆದರೆ ಬಹುಶಃ ನೀವು ಈ ವಿಡಿಯೋ ನೋಡಿದ ಮೇಲೆ ಪಾನೀಪುರಿ ಬಗ್ಗೆ ಏನೆಂದುಕೊಳ್ಳುತ್ತೀರಾ ಡಿಸೈಡ್ ಮಾಡಬೇಕಿದೆ. ಈ ವಿಡಿಯೋ ತೆಗೆದಿರುವುದು ಅಸ್ಸಾಂನ ಗುವಾಹಟಿಯಲ್ಲಿ. ಗೋಲ್ಕೊಪ್ಪ, ಪಾನೀಪುರಿ ಇತ್ಯಾದಿ ಮಾರಾಟ ಮಾಡುತ್ತಿರುವ ಮಾರಾಟಗಾರನೊಬ್ಬ ಮಾಡಿರುವ ಹೇಸಿಗೆ ಕೃತ್ಯ ಈ ವಿಡಿಯೋದಲ್ಲಿ ದಾಖಲಾಗಿದೆ.
ಅದೇನೆಂದರೆ ಅಲ್ಲಿಯೇ ಮೂತ್ರ ವಿಸರ್ಜಿಸಿ ಅದೇ ನೀರನ್ನು ತಿನಿಸು ತಯಾರಿಸಲು ಈತ ಬಳಸಿರುವ ಭಯಾನಕ ವಿಡಿಯೋ ಇದು. ಮಗ್ನಲ್ಲಿ ಮೂತ್ರ ವಿಸರ್ಜನೆ ಮಾಡಿ ಅದನ್ನು ಪಕ್ಕದಲ್ಲೇ ಚೆಲ್ಲಿದ್ದಾನೆ. ಅದೇ ಮಗ್ ಬಳಸಿಕೊಂಡು ಅಡುಗೆಗೆ ನೀರು ತೆಗೆದುಕೊಂಡಿದ್ದಾನೆ. ಇದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
ವಿಡಿಯೋ ಪೊಲೀಸರ ಗಮನಕ್ಕೆ ಬಂದ ನಂತರ ಮಾರಾಟಗಾರನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನೀವೂ ನೋಡಿ ಈ ವಿಡಿಯೋ: