More

    ಠಾಕ್ರೆ ಕಪಾಳಕ್ಕೆ ಬಾರಿಸುವುದಾಗಿ ಹೇಳಿದ್ದ ಕೇಂದ್ರ ಸಚಿವ ರಾಣೆ ಅರೆಸ್ಟ್​- ಕೋರ್ಟ್​ ಮೊರೆ

    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರ ವಿರುದ್ಧ ನಾಲ್ಕು ಎಫ್​ಐಆರ್​ ದಾಖಲು ಮಾಡಲಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು. ಇದನ್ನು ಉಲ್ಲೇಖಿಸಿ ರಾಣೆ ಹೇಳಿಕೆ ನೀಡಿದ್ದರು.

    ಈ ಹಿಂದೆ ಎಫ್​ಐಆರ್​ ದಾಖಲಾಗುತ್ತಿದ್ದಂತೆಯೇ ಅವರು ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಕೋರ್ಟ್​ಗೆ ನಿರೀಕ್ಷಣಾ ಜಾಮೀನುಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಅವರ ಅರ್ಜಿಯನ್ನು ವಜಾ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ರಾಣೆ ಅವರನ್ನು ಬಂಧಿಸಲಾಗಿದೆ. ಇದೀಗ ಜಾಮೀನು ಕೋರಿ ಅವರು ಹೈಕೋರ್ಟ್​ ಮೊರೆ ಹೋಗಿದ್ದಾರೆ.

    ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆನ್ನಲ್ಲೇ ನಾಸಿಕ್ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಅವರು ಮಂಗಳವಾರ ಬಂಧನ ವಾರಂಟ್ ಜಾರಿಗೊಳಿಸಿದ್ದರು. ವಾರಂಟ್ ಜಾರಿಯಾಗುತ್ತಿದಂತೆ ನಾಸಿಕ್ ಪೊಲೀಸ್ ತಂಡ, ರಾಣೆ ಅವರನ್ನು ಬಂಧಿಸಲು ಅವರು ಪ್ರಸ್ತುತ ಜನ ಆಶೀರ್ವಾದ ಯಾತ್ರೆ ನಡೆಸುತ್ತಿರುವ ರತ್ನಗಿರಿ ಜಿಲ್ಲೆಗೆ ತೆರಳಿದ್ದರು, ಅಲ್ಲಿ ಬಂಧಿಸಲಾಗಿದೆ.

    ಈ ಮಧ್ಯೆ ರಾಣೆ ಅವರು ಸಿಎಂ ವಿರುದ್ಧದ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ತಾವು ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡುವ ಮೂಲಕ ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದಾರೆ.

    ಅತ್ತೆಯ ಸುಳ್ಳು ಸಾಬೀತು ಮಾಡಲು ಉರಿಯುವ ಕೆಂಡದ ಮೇಲೆ ನಡೆದ ಸೊಸೆ!

    ಅಂಕಲ್‌ಗಳೇ ಈಕೆಯ ಟಾರ್ಗೆಟ್‌: ಪಾರ್ಕ್‌ಗೆ ಕರೆದು ಮಾಡಬಾರದ್ದು ಮಾಡಿ ವಿಡಿಯೋ- ಚಾಲಾಕಿ ಆಂಟಿ ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts