More

    ಸರ್ಕಾರದ ಆದೇಶ ಧಿಕ್ಕರಿಸಿ ಪಟಾಕಿ ಸಿಡಿಸಿದ ದೆಹಲಿ ಜನತೆಗೆ ಬೆಳ್ಳಂಬೆಳಗ್ಗೆ ಶಾಕ್​​..!

    ನವದೆಹಲಿ: ಪಟಾಕಿ ಬ್ಯಾನ್​ ಮಾಡಿ ಸರ್ಕಾರ ಆದೇಶದ ಹೊರಡಿಸಿದ್ದರೂ ಅದನ್ನು ಧಿಕ್ಕರಿಸಿ ಪಟಾಕಿ ಸಿಡಿಸಿದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸಮೀಪದ ಪ್ರದೇಶಗಳಲ್ಲಿ ವಾಯುಮಾಲಿನ್ಯ ಗಂಭೀರ ಸ್ವರೂಪ ಪಡೆದುಕೊಂಡಿದೆ.

    ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರವಾಗಿದ್ದು, ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದರಿಂದ ಉಂಟಾಗುವ ಮಾಲಿನ್ಯವನ್ನು ಮಾಲಿನ್ಯಕಾರಕ ಪಟಾಕಿ ಇನ್ನಷ್ಟು ಹದಗೆಡಿಸಿದೆ.

    ಬೆಳಗ್ಗೆ 8 ಗಂಟೆಗೆ ದೆಹಲಿಯಲ್ಲಿ ಸರಾಸರಿ ವಾಯು ಗುಣಮಟ್ಟ ಸೂಚ್ಯಾಂಕವೂ 468ಕ್ಕೇ ಏರಿದೆ. ಕಡಿಮೆ ಅವಧಿಯಲ್ಲಿನ ಹೆಚ್ಚು ವಾಯುಮಾಲಿನ್ಯ ಕರೊನಾ ವೈರಸ್​ ಸೋಂಕು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂದು ವೈದ್ಯರು ಮತ್ತು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ವಾಯುಮಾಲಿನ್ಯ ಹೆಚ್ಚಳದಿಂದ ರಕ್ತದ ಒತ್ತಡ ಮತ್ತು ಅಸ್ತಮಾವನ್ನು ಇನ್ನಷ್ಟು ಹದಗೆಡಿಸಲಿದೆ.

    ಇದನ್ನೂ ಓದಿ: ಸೆಂಚೂರಿ ಹೋಂಡಾ ಶೋ ರೂಂ ಬೆಂಕಿಗಾಹುತಿ: 2 ಕೋಟಿಗೂ ಹೆಚ್ಚು ಹಾನಿ

    ನಗರದ ಬಹುತೇಕ ಪ್ರದೇಶಗಳಲ್ಲಿ 2.5 ಮಾಲಿನ್ಯಕಾರಕಗಳೊಂದಿಗೆ ವಾಯು ಗುಣಮಟ್ಟ ಸೂಚ್ಯಾಂಕವೂ 400ರ ಗಡಿ ದಾಟಿದ್ದು, ಹಲವು ಪ್ರದೇಶಗಳಲ್ಲಿ 500ರ ಗಡಿ ಸಮೀಪಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಪಿಎಂ 2.5 ಮಾಲಿನ್ಯಕಾರಕ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ದೀಪಾವಳಿಯ ರಾತ್ರಿ ರಾಜಧಾನಿಯಲ್ಲಿ ಹೆಚ್ಚಿನ ಭಾಗಗಳಲ್ಲಿ 800 ದಾಟಿದೆ.

    ಮೊದಲೇ ದೆಹಲಿಯಲ್ಲಿ ವಾಯುಮಾಲಿನ್ಯ ಮೀತಿಮೀರಿದ್ದರಿಂದ ದೀಪಾವಳಿ ಹಿನ್ನೆಲೆಯಲ್ಲಿ ಮುನ್ನೆಚ್ಛರಿಕಾ ಕ್ರಮವಾಗಿ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನ. 9ರ ಮಧ್ಯರಾತ್ರಿಯಿಂದ ನ. 30ರ ಮಧ್ಯರಾತ್ರಿಯವರೆಗೂ ದೆಹಲಿಯಲ್ಲಿ ಸಂಪೂರ್ಣ ಬ್ಯಾನ್​ ಮಾಡಲಾಗಿದೆ. ಆದರೆ, ಜನರು ಆದೇಶವನ್ನು ಧಿಕ್ಕರಿಸಿ ಪಟಾಕಿ ಹೊಡೆಯುತ್ತಿರುವುದು ದೆಹಲಿ ವಾಯು ಗುಣಮಟ್ಟ ಕ್ಷೀಣಿಸುತ್ತಿರುವುದಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

    ‘ಇವತ್ತು ರಾತ್ರಿ ಏನಾಗತ್ತೋ?’; ಸರ್ಕಾರಿ ಇಲಾಖೆ ಹಾಗೂ ಹವಾಮಾನ ತಜ್ಞರಿಗೆ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts