More

    ಸೆಂಚೂರಿ ಹೋಂಡಾ ಶೋ ರೂಂ ಬೆಂಕಿಗಾಹುತಿ: 2 ಕೋಟಿಗೂ ಹೆಚ್ಚು ಹಾನಿ

    ತುಮಕೂರು: ನರಕಚತುದರ್ಶಿ ಹಬ್ಬದ ತಡರಾತ್ರಿ ನಗರದ ಬಿ.ಎಚ್.ರಸ್ತೆಯ ಸೆಂಚೂರಿ ಹೋಂಡಾ ಶೋ ರೂಂ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

    ರಾತ್ರಿ 1.30ರಲ್ಲಿ ಬೆಂಕಿ ಅವಘಡ ಸಂಭವಿಸಿದೆ. 65 ಹೊಸ ಬೈಕ್ ಗಳು, ವಿವಿಧ ದ್ವಿಚಕ್ರವಾಹನ ಬಿಡಿ ಉಪಕರಣಗಳು, ಕಟ್ಟಡ ಸೇರಿ 2 ಕೋಟಿಗೂ ಹೆಚ್ಚು ಹಾನಿಯಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: Web Exclusive|200 ಟನ್ ಹೂವು ಮಾರಾಟ! : ಮೂರೇ ದಿನದಲ್ಲಿ 2.50 ಕೋಟಿ ರೂ. ವಹಿವಾಟು

    ಹಬ್ಬದ ಸಂಭ್ರಮ ಮುಗಿಸಿ ರಾತ್ರಿ 10.30ಕ್ಕೆ ಎಲ್ಲಾ ದೀಪಗಳನ್ನು ನಂದಿಸಿ ಶೋ ರೂಂ ಬಾಗಿಲು ಮುಚ್ಚಿ ತೆರಳಿದ್ದು ರಾತ್ರಿ 1.30 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಯಾರೊ ಮಾಹಿತಿಕೊಟ್ಟಿದ್ದು ತಕ್ಷಣ ಸ್ಥಳಕ್ಕೆ ಹೋಗುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಆವರಿಸಿತ್ತು. ಅಷ್ಟರಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

    ಬೆಳಗಿನಜಾವ 4 ಗಂಟೆಗೆ ಬೆಂಕಿ ನಂದಿಸಲಾಯಿತು ಎಂದು ಸೆಂಚುರಿ ಹೋಂಡಾ ಶೋ ರೂಂ ಪಾಲುದಾರ ಪ್ರವೀಣ್ ತಿಳಿಸಿದ್ದಾರೆ. ಹೊಸ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಮದುವೆಯಾದ ಹತ್ತೇ ದಿನದಲ್ಲಿ ಹಬ್ಬದ ದಿವಸದಂದೇ ದುರಂತ ಸಾವಿಗೀಡಾದ ನವದಂಪತಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts