

ನವದೆಹಲಿ: ಅಂತೂ ಬಹು ನಿರೀಕ್ಷಿತ ಕೋವಿಡ್ ಲಸಿಕೆ ಭಾರತಕ್ಕೆ ಕಾಲಿಟ್ಟಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಉದ್ಘಾಟನೆ ಮಾಡಿಯೂ ಅಯ್ತು. ಹಾಗಿದ್ದರೆ ಈ ಲಸಿಕೆ ಪಡೆದಿರುವ ಮೊದಲ ಅದೃಷ್ಟವಂತರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಅದಕ್ಕೆ ಇಲ್ಲಿದೆ ನೋಡಿ ಉತ್ತರ. ಕೋವಿಡ್ ಲಸಿಕೆಯನ್ನು ಈ ಮೊದಲೇ ನಿಗದಿ ಮಾಡಿದಂತೆ ಪ್ರಥಮ ಹಂತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕರೊನಾ ವಾರಿಯರ್ಸ್ಗೆ ನೀಡಲಾಗುತ್ತದೆ. ಅದರಂತೆಯೇ, ಮೊದಲ ಡೋಸ್ ಅನ್ನು ಕರೊನಾ ವಾರಿಯರಸ್ ಆಗಿ ದುಡಿಯುತ್ತಿರುವ ಪೌರ ಕಾರ್ಮಿಕ ಸಿಬ್ಬಂದಿಗೆ ನೀಡಲಾಗಿದೆ.
ಮನೀಶ್ ಕುಮಾರ್ ಎಂಬುವವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ದೇಶದ ಮೊದಲ ಕರೋನಾ ವೈರಸ್ ಲಸಿಕೆಯನ್ನು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಬಳಿಕ ದೇಶದಲ್ಲಿ ಮೊದಲ ಕೋವಿಡ್ ಲಸಿಕೆ ಪಡೆದ ವ್ಯಕ್ತಿಯಾಗಿದ್ದಾರೆ ಮನೀಶ್.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರ ಉಪಸ್ಥಿತಿಯಲ್ಲಿ ಈ ಲಸಿಕೆ ನೀಡಲಾಯಿತು.
ನಂತರ ಡಾ.ರಂದೀಪ್ ಅವರೂ ಲಸಿಕೆ ಪಡೆದುಕೊಂಡರು. ಇಲ್ಲಿದೆ ನೋಡಿ ಅದರ ವಿಡಿಯೋ: