More

    ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

    ಪ್ರಶ್ನೆ: ಮದುವೆಯಾಗಿ ಎಂಟು ವರ್ಷಗಳಾಗಿವೆ. ನಮಗೆ ಮೂರು ವರ್ಷದ ಮಗ ಇದ್ದಾನೆ. ನನ್ನ ಗಂಡ ನನ್ನ ಮಗ ಹುಟ್ಟಿದ ಮೇಲೆ ನಮ್ಮ ಕಡೆಗೇ ಬಂದಿಲ್ಲ. ಎಲ್ಲರೂ ರಾಜಿ ಮಾಡಿದರೂ ಅವರು ನನ್ನ ಜತೆ ಸಂಸಾರ ಮಾಡಲು ಒಪ್ಪುತ್ತಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ. ಗಂಡ ಕರೆದುಕೊಂಡು ಹೋಗಬೇಕು ಎಂದು ಕೇಸು ಹಾಕುತ್ತೇನೆ ಎಂದರೆ, ಹಾಕಿಕೋ , ಆಗಲೂ ನಾನು ಬರುವುದಿಲ್ಲ , ಆಗ ಏನು ಮಾಡುತ್ತೀಯ ಎನ್ನತ್ತಿದ್ದಾರೆ. ಆಗ ನಾನೇ ಡಿವೋರ್ಸಿಗೆ ಹೋಗುತ್ತೇನೆ ಎನ್ನುತ್ತಿದ್ದಾರೆ. ನಾನು ಕೇಸು ಹಾಕಲೇ ಬೇಡವೇ ಎಂದು ಎರಡು ಮನಸ್ಸು ಆಗುತ್ತಿದೆ. ನನಗೆ ಅವರ ಆಸ್ತಿ ಪಾಸ್ತಿ ಬೇಡ. ನನಗ ನನ್ನ ಗಂಡ ಬೇಕು. ದಯವಿಟ್ಟು ನನಗೆ ಸರಿಯಾದ ದಾರಿ ತೋರಿಸಿ.

    ಉತ್ತರ: ದಂಪತಿಯಲ್ಲಿ ಒಬ್ಬರು ಮತ್ತೊಬ್ಬರಿಂದ ಯಾವುದೇ ಸಕಾರಣವಿಲ್ಲದೆ ದೂರ ಸರಿದರೆ ಆಗ ನೊಂದವರು ದಾಂಪತ್ಯ ಜೀವನದ ಪೂರ್ವ ಹಕ್ಕುಗಳ ಪುನರ್ ಸ್ಥಾಪನೆಗೆ / ರೆಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್ ಗೆ ಹಿಂದೂ ವಿವಾಹ ಕಾಯ್ದೆಯ ಕಲಂ 9ರಂತೆ ಪ್ರಕರಣವನ್ನು ದಾಖಲಿಸಬಹುದು. ಈ ರೀತಿ ದಾವೆ ಹಾಕಿದಾಗ ಸಕಾರಣವಿಲ್ಲದೇ ನಾನು ನನ್ನ ಪತ್ನಿ ಅಥವಾ ಪತಿಯಿಂದ ದೂರ ಉಳಿದಿದ್ದೇನೆ ಎನ್ನುವುದನ್ನು ಸಾಬೀತು ಪಡಿಸುವ ಜವಾಬ್ದಾರಿ /ಹೊಣೆಗಾರಿಕೆ ಎದುರುದಾರರದ್ದೇ ಆಗಿರುತ್ತದೆ.

    ಹೀಗಾಗಿ ನೀವು ಪ್ರಕರಣ ದಾಖಲಿಸಿದಾಗ ನಿಮ್ಮ ಪತಿ ಯಾವ ಸಕಾರಣಗಳನ್ನು ಕೊಡುತ್ತಾರೆ ಎನ್ನುವುದನ್ನು ನೀವು ತಿಳಿಯ ಬಹುದು. ಪ್ರಕರಣವನ್ನು ಹಿಂದೂ ವಿವಾಹ ಕಾಯ್ದೆಯ ಕಲಂ 23(2)ರಂತೆ ಕಡ್ಡಾಯವಾಗಿ ಸಂಧಾನಕ್ಕಾಗಿ ಮಧ್ಸಸ್ಥಿಕೆಗಾರರ ಮುಂದೆ ಅಥವಾ ಸಂಧಾನಕಾರರ ಮುಂದೆ ನ್ಯಾಯಾಲಯ ಕಳಿಸುತ್ತದೆ. ಅಲ್ಲಿ ಕೂತು ಮಾತಾಡಿದಾಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಬಹುದು. ಅಲ್ಲಿ ಪರಿಹಾರ ಸಿಗದೇ ಹೋದರೆ ನೀವು ಪ್ರಕರಣ ಮುಂದುವರೆಸಬೇಕಾಗುತ್ತದೆ.

    ನೀವು ಹಾಕಿದ ಪ್ರಕರಣದಲ್ಲಿ ನಿಮ್ಮ ಪರವಾಗಿ ಆದೇಶ ಆದರೂ ನಿಮ್ಮ ಪತಿ ಬರದೇ ಹೋದರೆ , ನೀವು ದಿವಾನಿ ಪ್ರಕ್ರಿಯಾ ಸಂಹಿತೆಯ / ಸಿವಿಲ್ ಪ್ರೊಸೀಜರ್ ಕೋಡ್ ಆರ್ಡರ್ 21 ರೂಲ್ 32ರಂತೆ ಅಮಲ್ಜಾರಿಗೆ ಅರ್ಜಿ ಹಾಕಬಹುದು. ಆಗ ಆತನ ಚರ ಸ್ಥಿರ ಆಸ್ತಿಗಳನ್ನು ಅಟ್ಯಾಚ್ಮೆಂಟ್ ಮಾಡುವಂತೆಯೂ ನ್ಯಾಯಾಲಯವನ್ನು ಕೇಳಿಕೊಳ್ಳಬಹುದು. ಏನೇ ಆದರೂ ಭೌತಿಕವಾಗಿ ನಿಮ್ಮ ಪತಿ ಬಂದು ನಿಮ್ಮ ಜೊತೆ ಸಾಂಸಾರಿಕ ಜೀವನ ಮಾಡುವಂತೆ ಮಾಡಲಾಗುವುದಿಲ್ಲ. ಅದಕ್ಕೆ ನಿಮ್ಮಿಬ್ಬರ ಮನಸ್ಸುಗಳೂ ಪರಸ್ಪರ ಸ್ಪಂದಿಸಲೇಬೇಕು.

    ನಿಮಗೆ ನಿಮ್ಮ ಪತಿಯ ಆಸ್ತಿಗಳ ಮೇಲೇ ಅಟ್ಯಾಚ್ಮೆಂಟ್ ತರುವ ಆಸಕ್ತಿ ಇಲ್ಲ ಆದರೆ ಪತಿಯೇ ನಿಮ್ಮ ಜತೆಗಿರಬೇಕು ಎನ್ನುವುದಾದರೆ, ನಿಮ್ಮ ಪತಿಯ ಮನಸ್ಸು ಹೇಗೆ ಪರಿವರ್ತನೆ ಆಗಬಹುದು ಎನ್ನುವ ಬಗ್ಗೆ ಯೋಚಿಸಿ. ಪ್ರಕರಣವನ್ನು ದಾಖಲಿಸುವ ಮುಂಚೆ ನಿಮ್ಮ ತಾಲ್ಲೂಕಿನ ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕೆ ಕೇಂದ್ರಕ್ಕೆ, ನಿಮ್ಮ ಮತ್ತು ನಿಮ್ಮ ಪತಿಯ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳಾಗಿವೆ.

    ಅದನ್ನು ಹೋಗಲಾಡಿಸಲು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡಬೇಕು ಎಂದು ಕೇಳಿಕೊಳ್ಳಿ. ಕೇಂದ್ರದವರು ನಿಮ್ಮಿಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆಗಾರರ ಸಮ್ಮುಖ ನೀವಿಬ್ಬರೂ ಮಾತಾಡಿಕೊಂಡು ರಾಜಿ ಸೂತ್ರಕ್ಕೆ ನೀವಿಬ್ಬರೂ ಬರುವಂತೆ ಮಾಡಬಹುದು. ಅದು ಸಫಲವಾಗದೇ ಹೋದರೆ ನಂತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದು ಒಳ್ಳೆಯದು.

    ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಕ್ಲಿಕ್ಕಿಸಿ.

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಸಂಸಾರಕ್ಕೆ ಒಪ್ಪದಾಕೆಗೆ ಡಿವೋರ್ಸ್​ ಕೊಟ್ರೆ ಕೂಲಿ ಹಣದಲ್ಲೂ ಭಾಗ ಕೊಡ್ಬೇಕಾ? ಮನೆಯ ಪಾಲೂ ನೀಡ್ಬೇಕಾ?

    ಡಿವೋರ್ಸ್​ ಆದ ಕೆಲ ವರ್ಷಗಳ ನಂತರ ಜೀವನಾಂಶ ಕೇಳುವ ಅವಕಾಶವಿದೆಯೆ?

    ವಿಚ್ಛೇದನ ಕೊಟ್ಟ ನಂತರ ದಿಢೀರ್​ ಮರುಮದುವೆಯಾಗಲು ಬರುವುದಿಲ್ಲ…

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts