

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೆಸರಿನಲ್ಲಿ, ವಿಶ್ವಮಟ್ಟದಲ್ಲಿ ಭಾರತಕ್ಕೆ ಹೇಗೆಲ್ಲಾ ಮಸಿ ಬಳಿಯಬಹುದು ಎಂಬ ಟ್ವೀಟ್ ಮಾಡಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಪರಿಸರ ಹೋರಾಟಗಾರ್ತಿ ಎಂದೇ ಪ್ರಸಿದ್ಧಿಯಾಗಿರುವ ಗ್ರೇಟಾ ಥನ್ಬರ್ಗ್ ಶೇರ್ ಮಾಡಿರುವ ಟೂಲ್ಕಿಟ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ರೈತರು ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ರಹಸ್ಯ ಗೂಗಲ್ ಡಾಕ್ಯುಮೆಂಟ್ ಅನ್ನು ಟ್ವೀಟ್ ಮಾಡಿದ್ದಳು. ನಂತರ ಇದರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅದನ್ನು ಡಿಲೀಟ್ ಮಾಡಿದ್ದಾಳೆ. ಆದರೆ ಪೋಸ್ಟ್ನ ಸ್ಕ್ರೀನ್ಷಾಟ್ ದಾಖಲೆ ರೂಪದಲ್ಲಿ ಸಿಕ್ಕಿದೆ. ಇದರ ಆಧಾರದ ಮೇಲೆ ಈಕೆ ಪೋಸ್ಟ್ ಮಾಡಿರುವ ಟೂಲ್ಕಿಟ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಯಾವ್ಯಾವ ರೀತಿಯಲ್ಲಿ, ಹೇಗ್ಹೇಗೆ ಪ್ರತಿಭಟನೆ ಮಾಡಬೇಕು ಎಂದು ಪ್ರಚೋದನೆ ನೀಡುವ ದಾಖಲೆಗಳನ್ನು ಗ್ರೇಟಾ ಟ್ವೀಟ್ ಮಾಡಿದ್ದಳು. ಇದರ ಹಿಂದಿರುವ ಶಕ್ತಿ ಯಾವುದು ಎಂದು ಇನ್ನಷ್ಟೇ ವಿಷಯ ಬೆಳಕಿಗೆ ಬರಬೇಕಿದೆ. ಟ್ವೀಟ್ ಮಾಡಿರುವುದು ಯಾರನ್ನು ಓಲೈಸಲು ಹಾಗೂ ನಂತರ ಹೆದರಿ ಟ್ವೀಟ್ ಡಿಲೀಟ್ ಮಾಡಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ ಬರುವ ನಿಟ್ಟಿನಲ್ಲಿ ಈಕೆ ಮಾಡಿರುವ ಟ್ವೀಟ್ನಿಂದಾಗಿ, ಗುಂಪು ಗುಂಪುಗಳ ನಡುವೆ ಹಿಂಸೆಗೆ ಪ್ರಚೋದನೆ ನೀಡಿ, ಸಾಮರಸ್ಯ ಕದಡಲು ಷಡ್ಯಂತ್ರ ರಚಿಸಿರುವ ಆರೋಪದ ಮೇಲೆ ಟೂಲ್ಕಿಟ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಷ್ಟಾದರೂ ತನ್ನ ತಪ್ಪು ಏನೂ ಇಲ್ಲ ಎಂದಿರುವ ಗ್ರೇಟಾ, ಈಗಲೂ ನಾನು ಭಾರತದ ರೈತರ ಪರವಾಗಿ ಇದ್ದೇನೆ. ಯಾರೇ ನನ್ನ ವಿರುದ್ಧ ಪಿತೂರಿ ಮಾಡಿದರೂ ನಾನು ಭಾರತದ ರೈತರ ಪರವಾಗಿ ಇರುವುದರಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾಳೆ!
ಏನಿದು ವಿವಾದ? ಇಲ್ಲಿದೆ ನೋಡಿ ಡಿಟೇಲ್ಸ್: ಬಯಲಾಯ್ತು ಕರಾಳಮುಖ! ಪ್ರತಿಭಟನೆ ಹೆಸರಲ್ಲಿ ಭಾರತಕ್ಕೆ ಕಪ್ಪುಮಸಿ ಬಳಿಯೋದು ಹೇಗೆ ಎಂದು ಪಾಠ ಮಾಡಿದ ‘ಪರಿಸರ ಹೋರಾಟಗಾರ್ತಿ’…