80 ವರ್ಷದ ಅತ್ತೆಯನ್ನು ಹೊರದಬ್ಬಿ ಚಳಿಯಲ್ಲಿ ಮಲಗಿಸಿದ ಸೊಸೆ- ವಿಡಿಯೋ ವೈರಲ್

sose
Published on

ಚಂಡೀಗಢ: ಸುಮಾರು 80 ವರ್ಷದ ಅತ್ತೆಯನ್ನು ಸೊಸೆಯೊಬ್ಬಳು ಮನೆಯಿಂದ ಹೊರದಬ್ಬಿ ಅತ್ತೆ ಚಳಿಯಲ್ಲಿಯೇ ಮಲಗುವ ಹಾಗೆ ಮಾಡಿದ್ದಾಳೆ. ವೃದ್ಧೆಯ ವಸ್ತುಗಳನ್ನು ಹೊರಗೆ ಎಸೆದು ಸೊಸೆ ನಡೆಸಿಕೊಂಡಿರುವ ಘಟನೆ ಡನೆದಿರುವುದು ಹರಿಯಾಣದ ಹಿಸಾರನ್​ ಆಜಾದ್ ಎಂಬಲ್ಲಿ.

ಸೊಸೆ ಈ ರೀತಿ ಮಾಡುತ್ತಿರುವುದು ಸ್ಥಳೀಯರು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಭಾರಿ ವೈರಲ್​ ಆಗಿದೆ.

ಅತ್ತೆಯನ್ನು ಚನ್ನೊ ಎಂದು ಗುರುತಿಸಲಾಗಿದ್ದು, ಸೊಸೆ ಶಕುಂತಲಾ ಎನ್ನಲಾಗಿದೆ. ಅತ್ತೆಯ ಸಾಮಾನಿಜ ಸಹಿತ ಆಕೆಯನ್ನು ಹೊರಕ್ಕೆ ದಬ್ಬಿರುವುದು ಹಾಗೂ ವಯಸ್ಸಾದ ಅತ್ತೆ ರಸ್ತೆಯ ಮೇಲೆ ಬಿದ್ದು ಗೋಳಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದಾಗಿದೆ.

ನಾವು ವಿಚಾರಣೆ ನಡೆಸಿದಾಗ ಅತ್ತೆ ತನಗಾಗಿರುವ ಘಟನೆಯನ್ನು ಹೇಳಿದ್ದಾರೆ. ನಾವು ಸ್ಥಳಕ್ಕೆ ಹೋದಾಗ ವೃದ್ಧೆ ಮನೆಯ ಹೊರಗೆ ಇದ್ದಳು. ಈಗ ತನ್ನ ಎರಡನೇ ಮಗನ ಮನೆಗೆ ಕರೆದೊಯ್ಯಲಾಗಿದೆ ಎಂದು ಆಜಾದ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ರೋಹ್ತಾಶ್ ತಿಳಿಸಿದ್ದಾರೆ.

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ಆರೋಪಿ ಸೊಸೆ ಶಕುಂತಲಾಳನ್ನು ಸೆಕ್ಷನ್ 323(ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು, ಸೆಕ್ಷನ್ 506(ಬೆದರಿಕೆ), 509 ಸೆಕ್ಷನ್ ( ಮಹಿಳೆಗೆ ಅವಮಾನಿಸುವುದು) ಅಡಿಯಲ್ಲಿ ಬಂಧಿಸಿದ್ದಾರೆ. ಡಿಎಸ್ಪಿ ಜೋಗೇಂದ್ರ ಶರ್ಮಾ ಸೊಸೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಯ ಉಸ್ತುವಾರರಿಗೆ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net