

ಚಂಡೀಗಢ: ಪಂಜಾಬ್ನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಮಗಳ ವಿವಾಹ ಕಾರ್ಯಕ್ರಮ ಭರ್ಜರಿಯಾಗಿ ನಿನ್ನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು ಅಮರಿಂದರ್ ಸಿಂಗ್ ಅವರ ನೃತ್ಯ.
ಸಿಂಗ್ ಅವರು, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಜತೆ ಹೆಜ್ಜೆ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾನದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇವರಿಬ್ಬರ ನೃತ್ಯದ ಮೋಡಿಗೆ ಎಲ್ಲರೂ ಒಳಗಾಗಿದ್ದು, ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಮತ್ತು ಹಾಲಿ ಸಿಎಂಗಳ ನೃತ್ಯದ ವಿಡಿಯೋ ವೈರಲ್ ಆಗುತ್ತಲೇ ಸಾಗಿದೆ.
83 ವರ್ಷದ ಫಾರೂಕ್ ಅಬ್ದುಲ್ಲಾ ನೃತ್ಯ ಮಾಡುತ್ತಾ ಮನರಂಜಿಸಿದ್ದಾರೆ. ಅಬ್ದುಲ್ಲಾ ಅವರು ಮೊದಲು ತಾವು ನೃತ್ಯ ಮಾಡುತ್ತಾ ನಂತರ ಅಮರಿಂದರ್ ಸಿಂಗ್ ಬಳಿ ಹೋಗಿ ಅವರನ್ನ ಎಳೆದು ತಂದಿದ್ದಾರೆ. ಫಾರೂಕ್ ಅವರ ನೃತ್ಯದಿಂದ ಉತ್ತೇಜಿತರಾದ ಅಮರಿಂದರ್ ಸಿಂಗ್ ಅವರು ಹೆಜ್ಜೆ ಹಾಕಿದ್ದಾರೆ.
ಅಷ್ಟಕ್ಕೂ ಇವರಿಬ್ಬರು ನೃತ್ಯ ಮಾಡಿದ ಹಾಡು ಶಮ್ಮಿಕಪೂರ್ ನಟಿಸಿರುವ ಚಿತ್ರ ಬ್ರಹ್ಮಚಾರಿಯ 'ಆಜ್ ಕಲ್ ತೆರೆ ಮೆರೆ ಪ್ಯಾರ್ ಕೆ ಚರ್ಚೆ' (ನನ್ನ, ನಿನ್ನ ಪ್ರೇಮದ ಚರ್ಚೆ ಎಲ್ಲೆಡೆ.... ) ಹಾಗೂ ' ಗುಲಾಬಿ ಆಂಖೆ ಜೋ ತೇರಿ ದೇಖಿ' .
ಈ ನೃತ್ಯವನ್ನು ನೀವೂ ನೋಡಿ...