ವಾಣಿಜ್ಯ ಬಳಕೆಯ 19 ಕೆ.ಜಿ. ಗ್ಯಾಸ್​ ಸಿಲಿಂಡರ್​ ಬೆಲೆಯಲ್ಲಿ ಇಳಿಕೆ: ಎಲ್ಲೆಲ್ಲಿ ಎಷ್ಟೆಷ್ಟು? ಇಲ್ಲಿದೆ ವಿವರ...

cylinder
Published on

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ತೈಲ ಕಂಪೆನಿಗಳು ಪರಿಷ್ಕರಿಸುತ್ತವೆ.

ಇಂದು ಕೂಡ 19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕೆಲವು ಮಹಾನಗರಗಳಲ್ಲಿ ಇಳಿಸಲಾಗಿದೆ. ನವದೆಹಲಿಯಲ್ಲಿ ಹೊಸ ದರ 2021 ರೂ, ಕೋಲ್ಕತ್ತಾದಲ್ಲಿ 2140 ರೂ, ಮುಂಬೈನಲ್ಲಿ 1981 ರೂ, ಚೆನ್ನೈನಲ್ಲಿ 2186 ರೂ. ಹೊಸ ದರವಿದೆ. ಜೂನ್​ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಸುಮಾರು 135 ರೂ. ಕುಸಿದಿದ್ದರೆ ಇದೀಗ ಮತ್ತಷ್ಟು ಬೆಲೆಯನ್ನು ಇಳಿತ ಮಾಡಲಾಗಿದೆ.

ಜೂನ್​ ಮೊದಲನೆಯ ವಾರದಲ್ಲಿ ಆಗಿರುವ ಬದಲಾವಣೆ ಅನ್ವಯ ಬೆಂಗಳೂರಿನಲ್ಲಿ 19 ಕೆ.ಜಿ ವಾಣಿಜ್ಯ ಸಿಲಿಂಡರ್​ ಬಲೆ 2296 ರೂಪಾಯಿ ಇದ್ದು, ಆ ಬಗ್ಗೆ ಜುಲೈ ತಿಂಗಳಿನಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ.

14.2 ಕೆಜಿ ಗ್ಯಾಸ್ ಸಿಲಿಂಡರ್ ದರ ಸ್ಥಿರವಾಗಿದ್ದು, ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆ ಸದ್ಯ 1005 ರೂ. ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net