More

    ಚಾಕೊಲೇಟ್ ಪ್ರಿಯರಿಗೆ ಶಾಕ್​! ವಿಶ್ವದ ಅತಿದೊಡ್ಡ ಕಾರ್ಖಾನೆಯಲ್ಲಿ ​ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆ: ಫ್ಯಾಕ್ಟರಿ ಸ್ಥಗಿತ

    ಬೆಲ್ಜಿಯಂ: ವಿಶ್ವದ ಅತಿ ದೊಡ್ಡ ಚಾಕೊಲೇಟ್ ಫ್ಯಾಕ್ಟರಿ ಎನಿಸಿರುವ ಬೆಲ್ಜಿಯಂನಲ್ಲಿರುವ ಬ್ಯಾರಿ ಕ್ಯಾಲೆಬಾಟ್ ಚಾಕೊಲೇಟ್​ ಕಾರ್ಖಾನೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಮುಚ್ಚಲಾಗಿದೆ.

    ಈ ಬ್ಯಾಕ್ಟೀರಿಯಾ ಅನ್ನು ಹಾನಿಕಾರಕ ಸಲ್ಮೊನೆಲ್ಲಾ ಎಂದು ಗುರುತಿಸಲಾಗಿದೆ, ಕಾರ್ಖಾನೆಯಲ್ಲಿ ಚಾಕೊಲೇಟ್​​ ಉತ್ಪಾದನೆಯನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಚಾಕೊಲೇಟ್​​ ಕಾರ್ಖಾನೆ ಎನಿಸಿದೆ. ಈ ಕಾರ್ಖಾನೆಯಿಂದ ವಿಶ್ವದ ಬಹುತೇಕ ಕಡೆಗಳಿಂದ ಚಾಕೊಲೇಟ್​ ರಫ್ತಾಗುತ್ತಿವೆ.

    ವಿಶ್ವದ ನಂ.1 ಚಾಕೊಲೇಟ್ ತಯಾರಿಕಾ ಕಂಪನಿ ಇದಾಗಿದ್ದು, 2020-2021 ಹಣಕಾಸು ವರ್ಷದಲ್ಲಿ 2 ಕೋಟಿ ಟನ್‌ಗಳಷ್ಟು ಉತ್ಪನ್ನಗಳು ಮಾರಾಟವಾಗಿವೆ. ಕಂಪನಿಯಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದು, ಪ್ರಪಂಚದಾದ್ಯಂತ 60ಕ್ಕೂ ಹೆಚ್ಚು ಉತ್ಪಾದನಾ ಘಟಕಗಳಿವೆ.

    ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿ ವಕ್ತಾರ ಕಾರ್ನೀಲ್ ವಾರ್ಲೋಪ್, ಪರೀಕ್ಷೆಯ ಬಳಿಕ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ ಎಂದಿದ್ದಾರೆ. ಬ್ಯಾಕ್ಟೀರಿಯಾ ಪತ್ತೆಯಾಗುವ ಮುನ್ನ ವಿಶ್ವದ ಹಲವು ಕಡೆಗಳಲ್ಲಿ ಚಾಕೊಲೇಟ್​ಗಳನ್ನು ಸರಬರಾಜು ಮಾಡಲಾಗಿದ್ದು, ಈ ಬಗ್ಗೆ ಕಾರ್ಖಾನೆ ಆತಂಕ ವ್ಯಕ್ತಪಡಿಸಿದೆ. ಆದರೂ ಸ್ಪಷ್ಟನೆ ನೀಡಿರುವ ಕಾರ್ಖಾನೆ, ಈ ಸಮಯದಲ್ಲಿ ನಾವು ಹೆಚ್ಚಿನ ಉತ್ಪನ್ನಗಳು ಮಾರಾಟವಾಗಿಲ್ಲ. ಆದರೂ ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಜೂನ್ 25ರಿಂದ ತಯಾರಿಸಲಾದ ಉತ್ಪನ್ನಗಳನ್ನು ರವಾನಿಸದಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

    ಮಗು ಗರ್ಭದಲ್ಲಿ ಇರುವಾಗಲೇ ದತ್ತು ತೆಗೆದುಕೊಳ್ಳಬಹುದಾ? ಹೈಕೋರ್ಟ್​ನಿಂದ ಹೊರಟಿದೆ ಮಹತ್ವದ ಆದೇಶ

    ತಮ್ಮ ಫೋಟೋ ತೆಗೆದು ಟ್ವಿಟರ್​ನಲ್ಲಿ ಮಾಜಿ ಸಿಎಂ ತಂದೆಯ ಫೋಟೋ ಹಾಕಿಕೊಂಡ ನೂತನ ಮುಖ್ಯಮಂತ್ರಿ!

    ಸರ್ಕಾರದ ಪತನದ ಬೆನ್ನಲ್ಲೇ ಇ.ಡಿ.ಗೆ ಹೋಗಲು ತಯಾರಾದ ಶಿವಸೇನಾ ನಾಯಕ ರಾವತ್: ಇಂದು ಹಾಜರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts