ಸಿಲಿಂಡರ್‌ ಸ್ಫೋಟಕ್ಕೆ ಮನೆ ಛಿದ್ರ ಛಿದ್ರ- ಅಕ್ಕ ಪಕ್ಕದ ಮನೆಯವರೂ ಸೇರಿ ಎಂಟು ಮಂದಿ ಬಲಿ!

cyliner
Published on

ಲಖನೌ: ಮನೆ ಬಳಕೆಗೆ ಇಟ್ಟುಕೊಂಡಿದ್ದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎಂಟು ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ನಡೆದಿದೆ. ಇನ್ನೂ ಹೆಚ್ಚಿನ ಮಂದಿ ಮೃತಪಟ್ಟಿರುವ ಶಂಕೆ ಉಂಟಾಗಿದೆ.

ಟಿಕ್ರಿ ಗ್ರಾಮದ ಮನೆಯೊಂದರಲ್ಲಿ ರಾತ್ರಿ ಅಡುಗೆ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ, ಇದರ ಪರಿಣಾಮವಾಗಿ ಮನೆ ಛಿದ್ರ ಛಿದ್ರಗೊಂಡು ಸೂರು ಹಾರಿಹೋಗಿದೆ. ಅಕ್ಕ ಪಕ್ಕದ ಮನೆಯವರಿಗೂ ಈ ಸ್ಫೋಟ ಮಾರಣಾಂತಿಕವಾಗಿ ಪರಿಣಮಿಸಿದೆ. ಮನೆ ಮಂದಿ ಸೇರಿ ಅಕ್ಕಪಕ್ಕದ ಎಂಟು ಮಂದಿ ಮೃತಪಟ್ಟಿದ್ದಾರೆ.

ಸದ್ಯ ಘಟನೆಯ ಅವಶೇಷದಲ್ಲಿ ಸಿಲುಕಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಸುವ ಕಾರ್ಯ ನಡೆಯುತ್ತಿದ್ದಾರೆ. ಸದ್ಯ 14 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 15ಕ್ಕೂ ಅಧಿಕ ಮಂದಿ ಮನೆಯಡಿ ಸಿಲುಕಿರುವುದಾಗಿ ರಕ್ಷಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಸೇರಿದಂತೆ ಉಳಿದವರು ಚಿಕ್ಕಮಕ್ಕಳು ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಮಿಶ್ರಾ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net