More

    ಲವ್‌ ಮಾಡೋದೇ ಆಗಿದ್ರೆ ನೀನೇ ಮೊದಲ ಆಯ್ಕೆ ಎಂದು ಅವಳು ಹೇಳಿದಾಗ್ಲೇ ನಿಮ್ಗೆ ಗೊತ್ತಾಗಬೇಕಿತ್ತಲ್ವಾ?

    ಲವ್‌ ಮಾಡೋದೇ ಆಗಿದ್ರೆ ನೀನೇ ಮೊದಲ ಆಯ್ಕೆ ಎಂದು ಅವಳು ಹೇಳಿದಾಗ್ಲೇ ನಿಮ್ಗೆ ಗೊತ್ತಾಗಬೇಕಿತ್ತಲ್ವಾ?ನನಗೊಬ್ಬಳು ಅಚಾನಕ್‌ ಆಗಿ ಸಿಕ್ಕು ಪರಿಚಯವಾದಳು. ನಾನು ಆಕೆಯನ್ನು ಪ್ರೀತಿಸತೊಡಗಿದೆ. ಅವಳೂ ಅದೇ ರೀತಿ ವರ್ತಿಸತೊಡಗಿದಳು. ಒಮ್ಮೆ ನಾನು ಪ್ರೇಮ ನಿವೇದನೆ ಮಾಡಿಕೊಂಡಾದ ಈಗಲೇ ಪ್ರೇಮ ಪ್ರೀತಿ ಎಲ್ಲ ಬೇಡ. ಲವ್‌ ಮಾಡೋದಾದ್ರೆ ನೀನೇ ಮೊದಲ ಆಯ್ಕೆ ಅಂದಳು. ನಾನು ಸ್ವರ್ಗಕ್ಕೆ ಮೂರೇ ಗೇಣು ಅಂದುಕೊಂಡೆ.

    ಸ್ವಲ್ಪ ದಿನದ ಬಳಿಕ ಮತ್ತೆ ಕೇಳಿದಾಗ, ಮಾಡಿ ದಯವಿಟ್ಟು ಕ್ಷಮಿಸಿ ನಾನು ನಿಮ್ಮನ್ನು ಪ್ರೀತಿಸಲಾರೆ. ನನಗೆ ಆ ಭಾವನೆಯೇ ಬರುತ್ತಿಲ್ಲ. ಪಾಲಕರು ನೋಡಿದ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು ತಿಳಿಸಿದಾಗಿನಿಂದ ನನ್ನ ಬುದ್ಧಿಯೇ ಕೆಟ್ಟುಹೋಗಿದೆ ಮೇಡಂ. ಸಾಯುವ ಮನಸ್ಸಾಗುತ್ತಿದೆ, ಏನು ಮಾಡಲಿ ತಿಳಿಯದಾಗಿದೆ.

    ಉತ್ತರ: ತುಂಬಾ ಭಾವುಕರಾಗಿ ಪತ್ರ ಬರೆದಿರುವಿರಿ. ನೀವು ಎಲ್ಲಿ ನಿಮ್ಮನ್ನು ನೀವು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವುದನ್ನು ಹೇಳುತ್ತೇನೆ. ನಿಮಗಿನ್ನೂ 22ವರ್ಷ. ಗಂಡಸರಿಗೆ ಕೆಲವರಿಗೆ ಪ್ರಬುದ್ಧತೆ ಎನ್ನುವುದು ಬೆಳೆಯಲು ಕಡೆಯ ಪಕ್ಷ 25 ವರ್ಷಗಳು ಬೇಕಾಗುತ್ತದೆ. ನೀವು ಆ ಹುಡುಗಿಯನ್ನು ಪರಿಚಯ ಮಾಡಿಕೊಂಡು ಮಾತಾಡಿದ್ದು ಬಸ್ಸಿನಲ್ಲಿ ಕಣ್ಣುಸನ್ನೆಯಲ್ಲಿ ಮತ್ತು ಮೊಬೈಲ್ ಮೂಲಕ ಮೆಸೇಜ್ ಮಾಡುತ್ತ ತಾನೇ? ಅಷ್ಟಕ್ಕೇ ಅವಳು ನಿಮ್ಮ ಬಾಳಸಂಗಾತಿಯಾಗಿ ಬಿಡುತ್ತಾಳೆಂದು ಹೇಗೆ ಊಹಿಸಿದಿರಿ? ಆಯಿತು, ನಿಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿರಿ.

    ಅವಳು ಅದಕ್ಕೆ ಎಷ್ಟು ಪ್ರಬುದ್ಧವಾದ ಉತ್ತರ ಕೊಟ್ಟಿದ್ದಾಳೆ, ಅದನ್ನಾದರೂ ಸರಿಯಾಗಿ ಅರ್ಥಮಾಡಿಕೊಂಡಿರಾ? ಅದೂ ಇಲ್ಲವಲ್ಲ? ಅವಳು ಹೇಳಿದ್ದರೂ ಎಷ್ಟು ಸ್ಪಷ್ಟವಾಗಿದೆ ನೋಡಿ. `ಪ್ರೇಮಕ್ಕೆ ನಾವಿಬ್ಬರೂ ಇನ್ನೂ ಚಿಕ್ಕವರು, ಮುಂದೆ ಪ್ರೀತಿಸುವುದೇ ಆಗಿದ್ದರೆ ನಿಮ್ಮನ್ನೇ ಪ್ರೀತಿಸುತ್ತೇನೆ’ ಅಂತ! ಆ ನಂತರ ಅವಳು ಚೆನ್ನಾಗಿಯೇ ಯೋಚನೆ ಮಾಡಿದ್ದಾಳೆ. ನೀವು ಅವಳಿಗೆ ಉತ್ತಮ ಸಂಗಾತಿಯಾಗಲಾರಿರಿ ಎನಿಸಿದೆ. ತಕ್ಷಣ ನಿಮಗೆ ತಿಳಿಸಿದ್ದಾಳೆ. ಅವಳು ಮತ್ತೆ ಯಾರನ್ನೂ ಪ್ರೀತಿಸಿಲ್ಲವಲ್ಲ? ಅದೂ ಮುಖ್ಯ!

    ತನ್ನ ಭವಿಷ್ಯವನ್ನು ಹೆತ್ತವರ ಕೈಗೆ ಒಪ್ಪಿಸಿ ನಿರಾತಂಕವಾಗಿದ್ದಾಳೆ. ನಿಜಕ್ಕೂ ಅವಳನ್ನು ಅಭಿನಂದಿಸಬೇಕು. ನೀವು ಯಾವ ಕಾರಣಕ್ಕೂ ಬಯ್ಯುವ ಅಗತ್ಯವಿಲ್ಲ. ಅವಳಿಗೆ ಬುದ್ಧಿಕಲಿಸಲು ನೀವು ಚೆನ್ನಾಗಿ ಬಾಳಿ ಅವಳಿಗೆ ತೋರಿಸಬೇಕಾಗಿಯೂ ಇಲ್ಲ. ನೀವು ನಿಮಗಾಗಿ ಚೆನ್ನಾಗಿ ಬದುಕಬೇಕು.

    ಬದುಕು ಎನ್ನುವುದು ದೇವರು ಮನುಷ್ಯನಿಗೆ ಕೊಟ್ಟಿರುವ ಸುಂದರವಾದ ವರ! ಅದರ ಜತೆಗೆ `ಬುದ್ಧಿ ಎನ್ನುವ ಸಲಕರಣೆಯನ್ನೂ ಕೊಟ್ಟಿದ್ದಾನೆ. ಅದನ್ನು ಸಮಂಜಸವಾಗಿ ಉಪಯೋಗಿಸಿ. ಇನ್ನೂ ನಾಲ್ಕುವರ್ಷ ಕಷ್ಟಪಟ್ಟು ದುಡಿಯಿರಿ. ಒಳ್ಳೆಯ ಅನುಭವವನ್ನು ಗಳಿಸಿ. ಹೆತ್ತವರಿಗೆ ಹೆಮ್ಮೆಯಾಗುವಂತೆ ನಡೆದುಕೊಳ್ಳಿ.

    26 ಅಥವಾ 27ನೇ ವರ್ಷದಲ್ಲಿ ಮದುವೆಯ ಬಗ್ಗೆ ಯೋಚಿಸಿ. ಇಷ್ಟು ಚಿಕ್ಕವಯಸ್ಸಿಗೆ `ಒಂಟಿತನ’ದ ಬಗ್ಗೆ ಮಾತಾಡಬಾರದು. ಈಗಿನ ಒಂಟಿತನ ಒಂದು ವರವೆಂದು ಭಾವಿಸಬೇಕು. ಸಕಾರಾತ್ಮಕವಾದ ಚಿಂತೆಗಳನ್ನು ಮಾಡಲು ನಿಮ್ಮನ್ನು ಯಾರೂ `ಡಿಸ್ಟರ್ಬ್’ ಮಾಡುವುದಿಲ್ಲ ಎಂದು ಖುಷಿ ಪಡಿ. ಒಳ್ಳೆಯ ಬದುಕು ತನ್ನಷ್ಟಕ್ಕೆ ತಾನೇ ಕಟ್ಟಿಕೊಳ್ಳುತ್ತದೆ.

    ಗಂಡ ಒಳ್ಳೆಯವರು, ಮಕ್ಕಳು ಟಾಪರ್ಸ್​, ಅತ್ತೆ-ಮಾವ ಎಂದ್ರೆ ಪ್ರೀತಿ… ಆದ್ರೂ ನಂದೇನೋ ಸಮಸ್ಯೆ ಮೇಡಂ…

    ಮದ್ವೆ ಮಾಡಿದ್ರೆ ಮಕ್ಳು ಸರಿಯಾಗಲ್ಲ ತಾಯಿ…ಆಗಿದ್ದಾಯ್ತು… ಮೊದ್ಲು ಸೊಸೆಯನ್ನು ಗಟ್ಟಿಗೊಳಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts