More

    ಗಂಡ ಒಳ್ಳೆಯವರು, ಮಕ್ಕಳು ಟಾಪರ್ಸ್​, ಅತ್ತೆ-ಮಾವ ಎಂದ್ರೆ ಪ್ರೀತಿ… ಆದ್ರೂ ನಂದೇನೋ ಸಮಸ್ಯೆ ಮೇಡಂ…

    ಗಂಡ ಒಳ್ಳೆಯವರು, ಮಕ್ಕಳು ಟಾಪರ್ಸ್​, ಅತ್ತೆ-ಮಾವ ಎಂದ್ರೆ ಪ್ರೀತಿ... ಆದ್ರೂ ನಂದೇನೋ ಸಮಸ್ಯೆ ಮೇಡಂ...

    ನಾನು 45 ವರ್ಷದ ಗೃಹಿಣಿ. ನಮ್ಮದು ಲವ್ ಕಮ್ ಅರಜ್ಡ್ ಮತ್ತು ಅಂತರ್ಜಾತಿ ಮದುವೆ. ನಮ್ಮ ತಂದೆ, ಗಂಡ, ತಮ್ಮ, ಭಾವ ತುಂಬ ವಿಶಾಲ ಮನೋಭಾವದವರು. ಅತ್ತೆ-ಮಾವಂದಿರೂ ಒಳ್ಳೆಯವರು. ಇವರ ಅಣ್ಣಂದಿರು ಅಮ್ಮ ಎಲ್ಲ ತುಂಬ ಒಳ್ಳೆಯವರು. ನನ್ನ ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೇ ಟಾಪರ್. ದ್ವಿತೀಯ ಪಿಯುಸಿಯಲ್ಲಿ ಶೇ.95ರಷ್ಟು ಅಂಕಗಳಿಸಿದ್ದಾಳೆ. ನನ್ನ ಮಗ ಉತ್ತಮ ಚೆಸ್ ಆಟಗಾರ. ಇದೆಲ್ಲದರ ಹಿಂದೆ ಅವರ ತಂದೆಯ ಶ್ರಮ ಸಾಕಷ್ಟಿದ್ದಾರೆ.

    ಹೀಗಿದ್ದೂ ನನಗೇನು ಸಮಸ್ಯೆ ಎಂದು ಅರ್ಥ ಆಗ್ತಿಲ್ಲ. ಸರಿಯಾಗಿ ಮಾತಾಡಕ್ಕೆ ಬರಲ್ಲ. ಸೊಕ್ಕು ಜಾಸ್ತಿ. ನನ್ನೇ ಅನುಸರಿಸೋ ಈ ಮಕ್ಕಳಿಗೂ ಕಮ್ಯುನಿಕೇಷನ್ ಪ್ರಾಬ್ಲಮ ಆಗುತ್ತೆ ಅನ್ನೋ ಆತಂಕ. ಮಾತಾಡಿದ್ರೆ ಅತಿ ಮಾತಾಡ್ತೀನಿ. ಏನೇ ಮಾತಾಡಿದ್ರೂ ತಪ್ಪೇ ಆಗಿರುತ್ತೇ. ಯಾರದ್ದಾದರೂ ಮುಖ ನೆನಪಿರಲ್ಲ. ಸಂದರ್ಭೋಚಿತವಾಗಿ ಮಾತಾಡಲು ಹಿಂದಿನ ವಿಷಯಗಳು ನೆನಪಿರೋಲ್ಲ. ಹೀಗಾಗಿ ಇದಕ್ಕೆ ಮೆಡಿಸನ್ ಇರಬಹುದು ಅನ್ನೋ ಆಸೆ. ಆದ್ರೆ ಯಾರಿಗೆ ಹೇಳ್ಕೋಬೇಕು ಗೊತ್ತಾಗಲ್ಲ. ಎಲ್ಲರೂ ನಾನು ಹೀಗೆ ಅಂತ ಒಪ್ಪಿಕೊಳ್ತಾರೆ.

    ಹೀಗೇ ಇದ್ರೆ ಹುಚ್ಚಿ ಆಗ್ಬಿಡ್ತೀನಾ? ವಟ ವಟ ಮಾತಾಡ್ಕೊಳ್ಳೋದ್ಯಾಕೆ ಅಂತ ಸೋಡಿಯಂ ಲೆವೆಲ್​ ಟೆಸ್ಟ್ ಮಾಡೋಣ ಅಂತ ಮಾಡಿಸಿದ್ರು ಯಜಮಾನ್ರು. ಅದು ನಾರ್ಮಲ್​ ಲಿಮಿಟ್‍ನಲ್ಲಿ ಇದೆ. ನಾನು ಎಲ್ಲರ ಜತೆ ಸಹಜವಾಗಿ ನಗ್‍ನಗ್ತಾ ಇರ್ತಿಲ್ಲ. ವಿದ್ಯಾರ್ಥಿಗಳ ಜತೆಗೂ ತುಂಬ ರಿಸರ್ವ್​ ಆಗಿ ಇರ್ತೀನಿ. ಮೊದಲಿಂದ್ಲೂ ನಂಗೆ ಸ್ನೇಹಿತರು ಕಡಿಮೆ. ಒಮ್ಮೊಮೆ ಓವರ್ ಆಗಿ, ಜೋರಾಗಿ ಮಾತಾಡಿ, ಅಸಹಜವಾಗಿ ಬಿಡತ್ತೆ. ಈಗೀಗ ಬೇರೆಯವರ ತಪ್ಪು ಹುಡ್ಕೋಕೆ ಶುರು ಮಾಡಿದೀನಿ. ಅಕ್ಕ, ಓರಗಿತ್ತಿ, ತಮ್ಮ, ನಾದಿನಿ, ಅಪ್ಪ, ಅಮ್ಮ ಎಷ್ಟು ಕಾಳಜಿ ಮಾಡ್ತಾರೆ. ನಾನು ಅವರ ಸಣ್ಣ ಪುಟ್ಟ ಮಿಸ್ಟೇಕಿಗೆ ನಿಷ್ಠುರವಾಗಿ ಕಚ್ಚಾಡ್ತೀನಿ (ಅಕ್ಕ, ಗಂಡ, ಅಮ್ಮ) ಗಂಡನ ಮನೆಯವರ ಜತೆ ಭಾಳ ನಾಜೂಕಾಗಿ ಇರ್ತೀನಿ. ಹೀಗೆ ಮಾಡಿದ್ರೆ ಎಷ್ಟು ದಿನ ಎಷ್ಟು ವರ್ಷ ಅಂತ ತಾಳ್ಕೊತಾರೆ. ಯಾಕೆ ಹೀಗೆ ಮಾಡ್ತೀನಿ? ಬುದ್ದಿ ಇಷ್ಟು ಕಡಿಮೆ
    ಆದ್ರೆ ಮುಂದೆ ನನ್ನ ಮಕ್ಕಳು ನನಗೆ ಬೆಲೆ ಕೊಡ್ತಾರಾ? ಈ ನನ್ನ ಸಮಸ್ಯೆಗೆ ಪರಿಹಾರ ಇದೆಯಾ?

    ಖಂಡಿತ ಇದೆ. ನಿಮ್ಮ ಈ ಪತ್ರದಲ್ಲಿ ಯಾವಾಗಿನಿಂದ ನಿಮಗೆ ಈ ಸಮಸ್ಯೆ ಶುರುವಾಯಿತು ಎನ್ನುವ ವಿವರ ಇಲ್ಲ. ನಿಮ್ಮ ಮಕ್ಕಳ ವಿದ್ಯೆಯ ಪ್ರಮಾಣವನ್ನು
    ಗಮನಿಸಿದರೆ ಬಹುಶಃ ನಿಮಗೆ `ಮೆನೋಪಾಸ್’ ಪ್ರಾರಂಭವಾಗಿರಬಹುದು. ನಲವತ್ತನೇ ವಯಸ್ಸಿನಿಂದ ಐವತ್ತರವರೆಗೆ ಮಹಿಳೆಯರಿಗೆ ಈ `ಮೆನೋಪಾಸ್’
    ಅವಧಿ ಇರುತ್ತದೆ. ಆಗ ನಡವಳಿಕೆಯಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ.

    ಅಲ್ಲದೆ ನೀವು ಉದ್ಯೋಗಸ್ಥೆಯೂ ಆಗಿರುವುದರಿಂದ ಮನೆ ಮತ್ತು ಉದ್ಯೋಗದ ಒತ್ತಡವನ್ನು ತಡೆಯುವ ಶಕ್ತಿ ನಿಮ್ಮ ಮಿದುಳಿಗೆ ಕುಂಠಿತವಾಗಿರಬಹುದು. ಹೀಗಾದಾಗ
    ನಮ್ಮಲ್ಲಿನ ಆತ್ಮಸ್ಥೈರ್ಯ ಕುಸಿಯುತ್ತ ಹಿಂಜರಿಕೆಗಳು ಪ್ರಾರಂಭವಾಗುತ್ತದೆ. ಅದಕ್ಕೆ ನಿಮಗೆ `ಹುಚ್ಚಿ ಆಗ್ತಾ ಇದೀನಾ’ ಅನ್ನುವ ಭಯ ಕಾಡುತ್ತಿದೆ. ನೀವು ಈ ಪರಿಯಲ್ಲಿ ಚಿಂತಿಸುವ ಅಗತ್ಯ ಖಂಡಿತ ಇಲ್ಲ. ಇವೆಲ್ಲಕ್ಕೂ ಪರಿಹಾರಗಳಿವೆ. ವಿಜ್ಱಆನ ಮತ್ತು ವೈದ್ಯಕೀಯ ಸೇವೆ ಈ ಕಾಲದಲ್ಲಿ ಎಷ್ಟೊಂದು ಪ್ರಗತಿಪರವಾಗಿದೆ ಎಂದರೆ, ದೈಹಿಕ ಮತ್ತು ಮಾನಸಿಕ ವೇದನೆಗಳಿಗೆ ಎಲ್ಲ ರೀತಿಯ ಪರಿಹಾರವನ್ನು ಕಂಡುಕೊಂಡಿವೆ. ನೀವೀಗ ಮೊದಲು ವೈದ್ಯರನ್ನು (ಗೈನಕಾಲಜಿಸ್ಟ್) ಭೇಟಿ ಮಾಡಿ. ನಿಮ್ಮ ತಿಂಗಳ
    ಋತುಸ್ರಾವದ ಬಗ್ಗೆ ಸರಿಯಾದ ತಪಾಸಣೆ ಮಾಡಿಸಿ.

    ನಂತರ ಒಮ್ಮೆ ಮನೋವೈದ್ಯರನ್ನು ಭೇಟಿ ಮಾಡಿ. (ಹುಚ್ಚು ಹಿಡಿದಿದೆ ಎನ್ನುವ ತಪ್ಪು ಕಲ್ಪನೆಯನ್ನು ಮೊದಲು ದೂರ ಮಾಡಿಕೊಳ್ಳಿ) ಈ ವೈದ್ಯರು ನಮಗೆ ಕೆಲವು ಥೆರಪಿಗಳನ್ನು ನೀಡುತ್ತ ನಿಮ್ಮ ಆತ್ಮಬಲವನ್ನು ಹೆಚ್ಚಿಸುತ್ತಾರೆ. ನೀವಾಗಿಯೇ ಏನೇನೋ ಕಲ್ಪನೆ ಮಾಡಿಕೊಂಡು ಕೊರಗುವ ಬದಲು ನಿಮ್ಮ ಸುತ್ತ ಇರುವ ಸಕಾರಾತ್ಮಕ ಶಕ್ತಿಯನ್ನು ಗಮನಿಸುತ್ತ ಸುಖಿಸುವುದು ಒಳ್ಳೆಯದಲ್ಲವೇ?

    ನಿಮ್ಮ ಗಂಡ ಒಳ್ಳೆಯವರು, ನಿಮ್ಮ ಮಕ್ಕಳು ಜಾಣರು, ನಿಮ್ಮ ತೌರುಮನೆಯ ಜನ ನಿಮ್ಮ ಸಂಸಾರವನ್ನು ಆದರಿಸುತ್ತಾರೆ, ನಿಮ್ಮ ಅತ್ತೆ ಮನೆಯ ಜನ ಅಭಿಮಾನಿಗಳು. ಇಷ್ಟೆಲ್ಲ ಯಾವ ಹೆಣ್ಣಿಗೆ ಲಭಿಸಿರುತ್ತದೆ ಹೇಳಿ? ಇವೆಲ್ಲವೂ ಭಗವಂತ ಕೊಟ್ಟಿರುವ ಸುಫಲಗಳವೇ? ಇದನ್ನು ಅನುಭವಿಸುತ್ತ ಆ ದೇವರಿಗೆ ಕೃತಜ್ಞತೆಗಳನ್ನೂ ಸಲ್ಲಿಸುವುದನ್ನು
    ಬಿಟ್ಟು ಇಲ್ಲದ್ದನ್ನು ಹಚ್ಚಿಕೊಂಡು ಕೊರಗಿದರೆ, ಇವೆಲ್ಲ ಕೊಟ್ಟಿರುವ ಆ ದೇವನಿಗೂ ಬೇಸರವಾಗುವುದಿಲ್ಲವೇ? ಹೇಳಿ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಮಗಳು ಯಾರನ್ನೋ ಇಷ್ಟಪಟ್ಲು, ಹೆಂಡ್ತಿನೂ ಅವಳ ತಾಳಕ್ಕೆ ಕುಣೀತಿದ್ದಾಳೆ- ಅವನನ್ನು ಅಳಿಯ ಅಂತ ಹೇಗೆ ಒಪ್ಲಿ ಮೇಡಂ?

    ಪತ್ನಿಗೆ ಕೋಪ ಬಂದಾಗ ಒದೀತಾಳೆ, ಸೌಟಿನಿಂದ ಹೊಡೀತಾಳೆ, ಸಂಶಯ ಪಿಶಾಚಿ ಬೇರೆ- ನಾ ಏನು ಮಾಡಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts