More

    ಮಗಳು ಯಾರನ್ನೋ ಇಷ್ಟಪಟ್ಲು, ಹೆಂಡ್ತಿನೂ ಅವಳ ತಾಳಕ್ಕೆ ಕುಣೀತಿದ್ದಾಳೆ- ಅವನನ್ನು ಅಳಿಯ ಅಂತ ಹೇಗೆ ಒಪ್ಲಿ ಮೇಡಂ?

    ಮಗಳು ಯಾರನ್ನೋ ಇಷ್ಟಪಟ್ಲು, ಹೆಂಡ್ತಿನೂ ಅವಳ ತಾಳಕ್ಕೆ ಕುಣೀತಿದ್ದಾಳೆ- ಅವನನ್ನು ಅಳಿಯ ಅಂತ ಹೇಗೆ ಒಪ್ಲಿ ಮೇಡಂ?ಪ್ರಶ್ನೆ: 52 ವರ್ಷದ ನನಗೆ ಒಬ್ಬಳೇ ಮಗಳು. ನಮ್ಮ ಪಂಗಡದಲ್ಲಿ ಹೆಣ್ಣು ಮಕ್ಕಳನ್ನು ಹೆಚ್ಚಿನ ಓದಿಗೆ ಕಳಿಸುವುದಿಲ್ಲ. ಆದರೂ ನಮ್ಮ ಮನೆಯವರೆಲ್ಲರ ಅಭಿಪ್ರಾಯಕ್ಕೆ ವಿರುದಟಛಿವಾಗಿ ನನ್ನ ಮಗಳನ್ನು ಇಂಜಿನಿಯರಿಂಗ್ ಓದಿಸಿದೆ. ಒಳ್ಳೆ ಉದ್ಯೋಗವನ್ನು ಪಡೆದಿದ್ದಾಳೆ. ಅವಳಿಗೀಗ 25 ವರ್ಷ. ಈಗ ನೋಡಿದರೆ ಅವಳು ಕ್ಲಾಸ್‍ಮೇಟ್‍ನನ್ನು ಪ್ರೀತಿಸುತ್ತಿದ್ದಳಂತೆ. ಅವನೂ ಬಿ.ಇ ಓದಿ ಒಳ್ಳೆ ಕೆಲಸದಲ್ಲಿದ್ದಾನೆ.

    ಆದರೆ ಅವನು ನಮ್ಮ ಜಾತಿಯಲ್ಲ. ಮದುವೆಯಾದರೆ ಅವನನ್ನೇ, ಇಲ್ಲದಿದ್ದರೆ ಮದುವೆಯೇ ಬೇಡ ಎಂದು ಹಠ ಹಿಡಿದಿದ್ದಾಳೆ. ನನ್ನ ಮಾನ ಹೋಗುತ್ತಿದೆ. ಬೇರೆ ಜಾತಿಯವನನ್ನು ಅಳಿಯನೆಂದು ಹೇಗೆ ಒಪ್ಪುವುದು? ಅವಳ ಮಕ್ಕಳನ್ನು ನಾಳೆ ಹೇಗೆ ನಮ್ಮ ಮನೆಗೆ ಸೇರಿಸುವುದು? ಜಾತಿಯಲ್ಲದವರಿಗೆ ಹೇಗೆ ನನ್ನ ಆಸ್ತಿಯನ್ನೆಲ್ಲಾ ಕೊಡುವುದು? ನನಗಂತೂ ಇದೇ ಚಿಂತೆಯಲ್ಲಿ ಹಗಲು ನೆಮ್ಮದಿಯಿಲ್ಲ, ರಾತ್ರಿ ನಿದ್ರೆಯಿಲ್ಲ.
    ನನ್ನ ಹೆಂಡತಿಯೂ ಮಗಳ ಮಾತಿನಂತೇ ಕುಣಿಯುತ್ತಾಳೆ.‘ ನಮ್ಮ ಜಾತಿಯಲ್ಲಿ ಹೆಚ್ಚು ಓದಿದ ಹುಡುಗ ಸಿಗುವುದಿಲ್ಲ, ಇವನು ಓದಿದ್ದಾನೆ, ಒಳ್ಳೆಯವನು, ಒಳ್ಳೆ ಕೆಲಸದಲ್ಲಿದ್ನೆದಾ, ನಮ್ಮ ಮಗಳು ಸುಖವಾಗಿರುತ್ತಾಳೆ ಅಂತ ವಾದಿಸುತ್ತಾಳೆ. ನನಗೆ ನೆಮ್ಮದಿಯೇ ಇಲ್ಲವಾಗಿದೆ. ಏನು ಮಾಡಲಿ?

    ಉತ್ತರ: ನಿಮ್ಮ ಕಾಗದ ಓದಿ ಅಳಬೇಕೋ ನಗಬೇಕೋ ಗೊತ್ತಾಗುತ್ತಿಲ್ಲ. ಅಲ್ಲ ನೀವಿನ್ನೂ ಯಾವ ಶತಮಾನದಲ್ಲಿದ್ದೀರಿ ಸ್ವಾಮಿ? ಇವತ್ತು ಹೆಣ್ಣು ಮಕ್ಕಳು ಏನೆಲ್ಲಾಸಾಧನೆಗಳನ್ನು ಮಾಡುತ್ತಿದ್ದಾರೆ. ನೀವು 200 ವರ್ಷಗಳ ಹಿಂದೆ ಜನ ಯೋಚನೆ ಮಾಡುತ್ತಿದ್ದಂತೆ ಮಾಡಿದರೆ, ಈ ಯುಗಕ್ಕೆ ಬರುವುದು ಯಾವಾಗ? ನಮ್ಮ ಮಕ್ಕಳೇನು ಸೂತ್ರದ ಗೊಂಬೆಯೇ? ದೊಡ್ಡವರು ಹೇಳಿದ್ದನ್ನು ಚಾಚೂ ತಪ್ಪದ ಹಾಗೆ ಕೇಳಬೇಕೆಂದರೆ, ಆ ಹೇಳುವ ಮಾತುಗಳು ಅವರಿಗೂ ಒಪ್ಪಿತವಾಗಬೇಕಲ್ಲ?

    ನೀವೇ ಬರೆದಿರುವ ನಿಮ್ಮ ಹೆಂಡತಿಯ ಮಾತುಗಳನ್ನು ಗಮನಿಸಿ. ಅವರು ನಿಜಕ್ಕೂ ಜಾಣೆ. ಮಗಳ ಭವಿಷ್ಯದ ಬಗ್ಗೆ ಕಾಳಜಿಯುಳ್ಳವರು. ಇಷ್ಟು ಓದಿರುವ ಹುಡುಗಿ ಜಾತಿಯ ಕಾರಣಕ್ಕೆ ವಿದ್ಯಾವಂತನಲ್ಲದವನನ್ನು ಬಲವಂತಕ್ಕೆ ಮದುವೆಯಾದರೆ ಅವಳು ಸುಖವಾಗಿರುತ್ತಾಳೆಯೇ? ಬಹಳ ವರ್ಷಗಳಿಂದ ಜತೆಗಿದ್ದು ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಪರಸ್ಪರ ಪ್ರೀತಿಸಿ ಮದುವೆಯಾಗಲು ಹೊರಟಿರುವ ಜೋಡಿ ಮುಂದೆ ಸುಖವಾಗಿಯೇ ಇರುತ್ತಾರೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು.

    ಜಾತಿ ಗೀತಿಯೆಲ್ಲಾ ಯಾವುದೋ ಕಾಲಕ್ಕೆ ಆ ಸಮಾಜದಲ್ಲಿ ಅವರವರು ಮಾಡುವ ಕೆಲಸಗಳಿಗೆ ತಕ್ಕಂತೆ ನಿರ್ಮಿಸಿಕೊಂಡರು. ಮಡಿಕೆ ಮಾಡುವವನು ಕುಂಬಾರ, ಕಬ್ಬಿಣದ ಕೆಲಸ ಮಾಡುವವನು ಕಮ್ಮಾರ ಇತ್ಯಾದಿ.

    ಈಗಿನ ಸಮಾಜದ ಸ್ಥಿತಿಗತಿಯೇ ಬೇರೆಬೇರೆಯಾಗಿಹೋಗಿದೆ. ಎಲ್ಲರೂ ವಿದ್ಯಾವಂತರಾಗಿ ಉದ್ಯೋಗವಂತರಾಗಿ ಬದುಕನ್ನು ಕಟ್ಟಿಕೊಳ್ಳುತ್ತಿರುವಾಗ ಜಾತಿಯೆಂದು ಕೊರಗುವುದು ಅರ್ಥಹೀನವಲ್ಲವೇ? ಇಷ್ಟಕ್ಕೂ ಎಷ್ಟೋ ಸಾವಿರ ಸಾವಿರ ಜನ ಹೀಗೆ ಮದುವೆಯಾಗಿದ್ದಾರೆ ಮತ್ತು ಸುಖವಾಗಿ ಬಾಳುತ್ತಿದ್ದಾರೆ ಕೂಡ. ನೀವು ನಿಮ್ಮ ಮಗಳ ಆಯ್ಕೆಯನ್ನು ಗೌರವಿಸಿ, ಅವಳೂ ನಿಮ್ಮನ್ನು ಗೌರವಿಸುತ್ತಾಳೆ. 25 ವರ್ಷದ ಮೆಜಾರಿಟಿಗೆ ಬಂದ ಹುಡುಗಿ ತನಗಿಷ್ಟವಾದವನನ್ನು ಮದುವೆಯಾಗಲು ಹಕ್ಕಿದೆ. ಅವಳ ಸ್ವಾತಂತ್ರ್ಯವನ್ನು ಹೆತ್ತವರಾಗಲೀ, ಹಳ್ಳಿಯವರಾಗಲೀ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಸುಮ್ಮನೇ ಖುಷಿಯಾಗಿ ಮದುವೆ ಮಾಡಿ. ಹಳ್ಳಿಯ ಜನ ನಾಲ್ಕು ದಿನ ಆಡಿಕೊಳ್ಳಬಹುದು. ನಂತರ ಅವರೇ ಸುಮ್ಮನಾಗುತ್ತಾರೆ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ನಾನು ಇಷ್ಟಪಟ್ಟಾಕೆ ಬೇರೆ ಮದ್ವೆಯಾಗಲಿದ್ದು, ನನ್ನ ಜತೆ ಸೇರಲೂ ಸಿದ್ಧಳಿದ್ದಾಳೆ- ನಾನು ಒಪ್ಪಿದರೆ ತಪ್ಪಾ?

    ಸಿಡಿ ಕೇಸ್​ನಲ್ಲಿ ಸಿಕ್ಕಾಕೊಂಡಿರೋ ಆಂಟಿ ನನ್ನನ್ನು ಪ್ರೀತಿಸ್ತೇನೆ ಅಂತ ದುಂಬಾಲು ಬಿದ್ದಿದ್ದಾಳೆ- ಹೇಗೆ ತಪ್ಪಿಸಿಕೊಳ್ಳಲಿ?

    ಎರಡನೆಯ ಮದುವೆಯಾಗಿದ್ದೇ ತಪ್ಪಾಯ್ತಾ? ಗಂಡನ ಪ್ರೀತಿಗಾಗಿ ಹಂಬಲಿಸುತ್ತಿರುವ ನನಗೇಕೇ ಈ ಹಿಂಸೆ ಮೇಡಂ?

    ನನಗೂ ಮದುವೆಯಾಗುವ ಆಸೆ… ಆದರೆ ನನ್ನ ಈ ಸಮಸ್ಯೆ… ಡಿಪ್ರೆಷನ್​ಗೆ ಹೋಗ್ತಿರೋ ನನಗೆ ದಾರಿ ತೋರಿ…

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts