ಒಂದೇ ರಾಜ್ಯದ ನಾಲ್ವರು ಶಾಸಕರನ್ನು ಬಲಿ ಪಡೆದ ಕರೊನಾ! ಬಿಜೆಪಿಯ ಗೋತಮ್‌ ಲಾಲ್‌ ಸಾವು

rajasthan MLA
Published on

ಜೈಪುರ: ರಾಜಸ್ಥಾನದಲ್ಲಿಯೂ ಕರೊನಾ ಹೆಮ್ಮಾರಿ ಇದಾಗಲೇ ಮೂವರು ಶಾಸಕರನ್ನು ಬಲಿ ಪಡೆದಿದ್ದು, ಇಂದು ಬಿಜೆಪಿಯ ಶಾಸಕ ಗೋತಮ್ ಲಾಲ್ ಮೀನಾ ಮೃಪಟ್ಟಿದ್ದಾರೆ.

ಜೈಪುರದ ಉದಯಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 56 ವರ್ಷದ ಗೋತಮ್‌ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಇದೀಗ ಧರಿಯಾವಾಡ ಕ್ಷೇತ್ರದ ಶಾಸಕರಾಗಿದ್ದರು.

ಕರೊನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು, ಆರೋಗ್ಯ ತೀವ್ರ ಹದಗೆಟ್ಟ ಕಾರಣ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ ಇಂದು ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ಹೇಳಿವೆ. ಮೃತರು ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾರೆ. ಇದಕ್ಕೂ ಮುನ್ನ ರಾಜಸ್ಥಾನದ ಕಾಂಗ್ರೆಸ್‌ನ ಶಾಸಕರಾದ ಕೈಲಾಶ್‌ ತ್ರಿವೇದಿ, ಗಜೇಂದ್ರ ಶಕ್ತಾವತ್‌ ಹಾಗೂ ಬಿಜೆಪಿ ಶಾಸಕ ಕಿರಣ್‌ ಮಹೇಶ್ವರಿ ಕರೊನಾದಿಂದಾಗಿ ಮೃತಪಟ್ಟಿದ್ದು, ಗೋತಮ್‌ ನಾಲ್ಕನೆಯವರಾಗಿದ್ದಾರೆ.

ಗೋತಮ್ ಲಾಲ್ ಮೀನಾ ಸಾವಿಗೆ ಸಿಎಂ ಅಶೋಕ್ ಗೆಹ್ಲೋಟ್, ಸ್ಪೀಕರ್ ಸಿಪಿ ಜೋಶಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪೂನಿಯಾ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net