ವಿಶ್ವದ ಅತ್ಯಂತ ದುಬಾರಿ ಟೀಪೌಡರ್‌ ಇದು: ಅಸ್ಸಾಂನ ಮನೋಹರಿ ಗೋಲ್ಡ್‌ ಟೀ ಎಷ್ಟಕ್ಕೆ ಸೇಲ್‌ ಆಯ್ತು ಗೊತ್ತಾ?

Manohari
Published on

ಗುಹಾವಟಿ: ಅಸ್ಸಾಂ ಎಂದರೆ ನೆನಪಾಗುವುದು ಚಹ. ಬಗೆಬಗೆ ರೂಪದ ಚಹಗಳಿಗೆ ಅಸ್ಸಾಂ ಪ್ರಸಿದ್ಧಿ ಪಡೆದಿದೆ. ಇವುಗಳಲ್ಲಿ ಬಲು ಟೇಸ್ಟಿ ಟೇಸ್ಟಿ ಎನಿಸಿರುವ, ಸಾಮಾನ್ಯ ಜನರಿಗೆ ಎಟುಕಟ ಚಹವೆಂದರೆ ಅದೇ ಮನೋಹರಿ ಗೋಲ್ಡ್​ ಟೀ. ಇಲ್ಲಿಯವರೆಗೆ ಕೆ.ಜಿ.ಗೆ 75 ಸಾವಿರ ರೂಪಾಯಿಗಳಂತೆ ಮಾರಾಟವಾಗುತ್ತಿದ್ದ ಈ ಟೀಪುಡಿ ಇಂದು 99,999 ರೂಪಾಯಿಗೆ ಮಾರಾಟವಾಗಿದೆ!

ಅತ್ಯಂತ ಸ್ವಾದಿಷ್ಟ ಭರಿತ ಚಹಾಪುಡಿಯೆಂದೇ ಪ್ರಸಿದ್ಧಿ ಪಡೆದಿರುವ ಮನೋಹರಿ ತನ್ನ ದಾಖಲೆಯನ್ನು ತಾನೇ ಮುರಿದಿದೆ. ಚಹಾಪುಡಿಯನ್ನು 75 ಸಾವಿರ ರೂಪಾಯಿ ಈ ಮೊದಲು ಗುಹಾವಟಿ ಮೂಲದ ವಿಷ್ಣು ಟೀ ಕಂಪನಿ ಖರೀದಿಸಿತ್ತು. ಇದೀಗ ಸೌರವ್​ ಟೀ ಟ್ರೇಡರ್ಸ್​ ಎಂಬ ಕಂಪನಿ 99,999ರೂ ಗೆ ಬಿಡ್‌ ಮಾಡಿ ಇದನ್ನು ಖರೀದಿಸಿದೆ.​ ಈ ಮೂಲಕ ವಿಶ್ವದ ಅತ್ಯಂತ ದುಬಾರಿ ಟೀ ಪೌಡರ್‌ ಎಂದು ಪ್ರಸಿದ್ಧಿ ಗಳಿಸಿದೆ.

ಆನ್‌ಲೈನ್‌ ಮೂಲಕ ವಿದೇಶಗಳಿಗೂ ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಮಾರಾಟವಾಗುತ್ತಿದ್ದು, ವಿದೇಶಿಗರು ಮುಗಿಬಿದ್ದು ಇದನ್ನು ಖರೀದಿ ಮಾಡುತ್ತಿದ್ದಾರೆ. ಅಲ್ಲಿ ಇದಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಮನೋಹರಿ ಗೋಲ್ಡ್​ ಚಹಾಪುಡಿಯನ್ನು ಎಳೆಯ ಎಲೆಗಳಿಂದ ಉತ್ಕೃಷ್ಟ ರೀತಿಯಲ್ಲಿ ತಯಾರಿಸಲಾಗುತ್ತದೆ. ಈ ಮಾದರಿಯ ಟೀ ಎಲೆಗಳು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೊರೆಯುತ್ತದೆ. ಆಗ ಕೀಳುವ ಎಳೆಯ ಎಲೆಯಿಂದ ಇದನ್ನು ತಯಾರು ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net