More

    ನೋಟ್‌ಗಳ ಮೇಲೆ ನೇತಾಜಿ ಚಿತ್ರ ಯಾಕೆ ಪ್ರಿಂಟ್‌ ಮಾಡಬಾರದು? ಕೇಂದ್ರದ ನಿಲುವು ಕೇಳಿದ ಹೈಕೋರ್ಟ್‌

    ಕೋಲ್ಕತ: ಕರೆನ್ಸಿ ನೋಟುಗಳ ಮೇಲೆ ಗಾಂಧಿ ಚಿತ್ರ ಇರುವಂತೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿತ್ರವನ್ನು ಏಕೆ ಪ್ರಿಂಟ್‌ ಮಾಡಬಾರದು ಎಂಬುದಾಗಿ ಕೋಲ್ಕತಾ ಹೈಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

    ನೇತಾಜಿ ಅವರು ಸ್ವಾತಂತ್ರ್ಯಕ್ಕಾಗಿ ನಡೆಸಿರುವ ಹೋರಾಟ, ಅವರ ದೇಶಭಕ್ತಿ, ಅವರ ಹೋರಾಟದ ಅಣುಅಣುವನ್ನೂ ತೀರಾ ಹತ್ತಿರದಿಂದ ಬಲ್ಲ ಸ್ವಾತಂತ್ರ್ಯಹೋರಾಟಗಾರ 94 ವರ್ಷದ ಹರೇಂದ್ರನಾಥ ಬಿಸ್ವಾಸ್​ ಎಂಬುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಈ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದೆ.

    ದೇಶಕ್ಕಾಗಿ ಜೀವತೆತ್ತ ನೇತಾಜಿ ಅವರ ಭಾವಚಿತ್ರವನ್ನು ನೋಟ್‌ಗಳಲ್ಲಿ ಮುದ್ರಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಬಿಸ್ವಾಸ್‌ ಅವರು ಈ ಅರ್ಜಿಯಲ್ಲಿ ಕೋರಿದ್ದಾರೆ. ಸುಭಾಷ್​ ಚಂದ್ರ ಬೋಸ್​ ಅವರು ಸ್ವಾತಂತ್ರ್ಯಕ್ಕಾಗಿ ಮಾಡಿರುವ ಹೋರಾಟ ಅಪಾರವಾದುದು. ಆದರೆ ಯಾವ ಕೇಂದ್ರ ಸರ್ಕಾರಗಳೂ ಅವರಿಗೆ ಸರಿಯಾದ ಮಾನ್ಯತೆ ನೀಡಲಿಲ್ಲ. ಅವರ ಹೋರಾಟ, ತ್ಯಾಗವನ್ನು ಎಂದಿಗೂ ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆದ್ದರಿಂದ ನೋಟಿನಲ್ಲಿ ಗಾಂಧಿಯಂತೆ ಅವರ ಭಾವಚಿತ್ರ ಪ್ರಿಂಟ್‌ ಮಾಡುವ ಮೂಲಕ ಅವರಿಗೆ ನಮನ ಸಲ್ಲಿಸಬೇಕಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

    ಇದಕ್ಕೆ ಸಂಬಂಧಿಸಿದಂತೆ ಎಂಟು ವಾರಗಳಲ್ಲಿ ಉತ್ತರ ನೀಡುವಂತೆ ಕೋರ್ಟ್‌ ಕೇಂದ್ರಕ್ಕೆ ಹೇಳಿದೆ.

    ಕಿಸ್‌ ಕೊಟ್ಟು ಇಡಿ ಬಲೆಗೆ ಬಿದ್ದ ನಟಿ ಜಾಕ್ವೆಲಿನ್‌: ಜಯಲಲಿತಾ, ಅಮಿತ್‌ ಷಾ ಹೆಸರು ಕೇಳಿ ಸಿಕ್ಕಾಕ್ಕೊಂಡ ಮೋಹಕ ತಾರೆ!

    ರೈಲು ವಿಳಂಬದಿಂದ ಕೆಪಿಎಸ್‌ಸಿ ಪರೀಕ್ಷೆ ತಪ್ಪಿಸಿಕೊಂಡ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts