ಗುಂಡು ಹಾರಿಸಿಕೊಂಡು ಶಾಸಕನ ಮಗ ಆತ್ಮಹತ್ಯೆ: ಸಾಯುವ ಮುನ್ನ ಗೆಳೆಯರಿಗೆ ಕರೆ ಮಾಡಿದ್ದ ಯುವಕ

suicide1
Published on

ಜಬಲ್​ಪುರ್​: ಕಾಂಗ್ರೆಸ್​ ಶಾಸಕನ ಮಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿದೆ.

16 ವರ್ಷದ ವೈಭವ್‌ ಆತ್ಮಹತ್ಯೆ ಮಾಡಿಕೊಂಡವ. ಈಗ ಜಬಲ್‌ಪುರದ ಬಾರ್ಗಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸಂಜಯ್​ ಯಾದವ್​ ಅವರ ಮಗ. ದ್ವಿತೀಯ ಪಿಯುಸಿ ಓದುತ್ತಿದ್ದ ವೈಭವ್‌ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಸ್ನಾನದ ಕೋಣೆಗೆ ಹೋಗಿ ಈ ರೀತಿ ಮಾಡಿಕೊಂಡಿದ್ದಾನೆ. ಗುಂಡಿನ ಶಬ್ದ ಕೇಳುತ್ತಲೇ ಧಾವಿಸಿದ ಕುಟುಂಬಸ್ಥರು ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಆತ ಅದಾಗಲೇಪ್ರಾಣ ಕಳೆದುಕೊಂಡಿದ್ದ.

ಆತ್ಮಹತ್ಯೆಯ ಮುನ್ನ ತನ್ನೆಲ್ಲಾ ಸ್ನೇಹಿತರಿಗೆ ಕರೆ ಮಾಡಿದ್ದ ವೈಭವ್‌. ಇಷ್ಟು ದಿನ ತನ್ನ ಜತೆಗೆ ಕಳೆದಿರುವುದಕ್ಕೆ ಹಾಗೂ ತನ್ನ ಸ್ನೇಹಿತರಾಗಿರುವುದಕ್ಕೆ ಧನ್ಯವಾದ ಹೇಳಿದ್ದಾನೆ. ಕೊನೆಗೆ ನನ್ನ ಸಾವಿಗೆ ನಾನೇ ಕಾರಣ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಸಾವಿಗೆ ನಿಖರ ಕಾರಣ ಏನು ಎನ್ನುವುದು ಕುಟುಂಬಸ್ಥರಿಗೂ ತಿಳಿದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ‍ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net