More

    ‘ನನಗೆ ಪದ್ಮಶ್ರೀ ಬಂದಿದೆ ಎಂದಾಗ ಕಣ್ಣೀರಾಗಿದ್ದಳು, ಪ್ರಶಸ್ತಿ ದಿನವೇ ಕಣ್ಮುಚ್ಚಿಬಿಟ್ಟಳು ಈ ಅಂಧನಿಗೆ ಬೆಳಕಾಗಿದ್ದ ನನ್ನ ಶಾಂತಾ…’

    ನವದೆಹಲಿ: ಕೆಲವೊಮ್ಮೆ ಬದುಕಿನಲ್ಲಿ ಎಂದಿಗೂ ಊಹಿಸದ ಘಟನೆಗಳು ನಡೆದೇ ಹೋಗುತ್ತವೆ. ಅಂಥದ್ದೇ ಒಂದು ದುರಂತದ ಕ್ಷಣ ಪದ್ಮಶ್ರೀ ಪುರಸ್ಕೃತ ಲೇಖಕನ ಬಾಳಲ್ಲೂ ನಡೆದಿದೆ. ದೃಷ್ಟಿಹೀನರಾದರೂ ಲೇಖನದ ಮೂಲಕ ಮಹಾಸಾಧನೆ ಮಾಡಿರುವ ಕೇರಳದ ಬಾಲನ್‌ ಪುಥೇರಿಯವರ ಬದುಕಿನ ದುರಂತವಿದು.

    ನೂರಾರು ಪುಸ್ತಕಗಳನ್ನು ಬರೆದು ಪದ್ಮಶ್ರೀ ಪಡೆದುಕೊಂಡಿರುವ ಬಾಲನ್‌ ಅವರಿಗೆ ದೆಹಲಿಯಿಂದ ಪ್ರಶಸ್ತಿ ಸ್ವೀಕಾರಕ್ಕೆ ಬುಲಾವ್‌ ಬಂದಿತ್ತು. ಇವರ ಪತ್ನಿ ಶಾಂತಾ ಎಂಟು ವರ್ಷಗಳಿಂದ ಕ್ಯಾನ್ಸರ್‌ ರೋಗಿಯಾಗಿದ್ದರು. ಆದರೆ ಅವರ ಸಾವು ಪ್ರಶಸ್ತಿ ಸ್ವೀಕಾರದ ದಿನವೇ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ದೃಷ್ಟಿ ಇಲ್ಲದ ಬಾಲನ್‌ ಅವರಿಗೆ ಪತ್ನಿ ಶಾಂತಾರೇ ಬೆನ್ನೆಲುಬಾಗಿದ್ದರು. ಪತಿಯ ಜತೆ ಪದ್ಮಶ್ರೀ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗುವ ಆಸೆ ಹೊತ್ತಿದ್ದರು. ಆದರೆ ಅದಾಗಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾಯಿತು.

    ‘ನನಗೆ ಪದ್ಮಶ್ರೀ ಬಂದಿದೆ ಎಂದಾಗ ಕಣ್ಣೀರಾಗಿದ್ದಳು, ಪ್ರಶಸ್ತಿ ದಿನವೇ ಕಣ್ಮುಚ್ಚಿಬಿಟ್ಟಳು ಈ ಅಂಧನಿಗೆ ಬೆಳಕಾಗಿದ್ದ ನನ್ನ ಶಾಂತಾ...’‘ನನಗೆ ಪದ್ಮಶ್ರೀ ಬಂದಿದೆ ಎಂದಾಗ ಕಣ್ಣೀರಾಗಿದ್ದಳು, ಪ್ರಶಸ್ತಿ ದಿನವೇ ಕಣ್ಮುಚ್ಚಿಬಿಟ್ಟಳು ಈ ಅಂಧನಿಗೆ ಬೆಳಕಾಗಿದ್ದ ನನ್ನ ಶಾಂತಾ...’‘ನನಗೆ ಪದ್ಮಶ್ರೀ ಬಂದಿದೆ ಎಂದಾಗ ಕಣ್ಣೀರಾಗಿದ್ದಳು, ಪ್ರಶಸ್ತಿ ದಿನವೇ ಕಣ್ಮುಚ್ಚಿಬಿಟ್ಟಳು ಈ ಅಂಧನಿಗೆ ಬೆಳಕಾಗಿದ್ದ ನನ್ನ ಶಾಂತಾ...’

    ಆದರೂ ಧೈರ್ಯ ತುಂಬಿದ ಪತ್ನಿ ಪತಿಯನ್ನು ದೆಹಲಿಗೆ ಕಳುಹಿಸಿದರು. ರಾಷ್ಟ್ರಪತಿ ಭವನದಲ್ಲಿದ್ದ ಇನ್ನೂ ಬಾಲನ್‌ ಪ್ರಶಸ್ತಿ ಸ್ವೀಕರಿಸಲಿಲ್ಲ. ಅದಾಗಲೇ ಪತ್ನಿಯ ಸಾವಿನ ಸುದ್ದಿ ಬಂತು. ಪ್ರಶಸ್ತಿ ಪಡೆಯದೇ ವಾಪಸಾಗಲು ನಿರ್ಧರಿಸಿದರು. ಆದರೆ ಇನ್ನೇನು ಕೆಲವೇ ನಿಮಿಷಗಳು ಇದ್ದುದರಿಂದ ಕುಟುಂಬಸ್ಥರು ಒತ್ತಾಯ ಮಾಡಿದ್ದರಿಂದ ಭಾರವಾದ ಮನಸ್ಸನ್ನು ಹೊತ್ತು ನಡುಗುವ ಕೈಯ್ಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.

    ಮಲಪ್ಪುರಂನ ಕೊಂಡೊಟ್ಟಿಯಲ್ಲಿ ಅದೇ ಹೊತ್ತಿಗೆ ಪತ್ನಿಯ ಅಂತ್ಯಸಂಸ್ಕಾರ ನಡೆದಿದೆ. ‘ನಿಮಗೆ ಪದ್ಮಶ್ರೀ ಪ್ರಶಸ್ತಿ ಬಂದಿದೆ ಎಂದು ಜನವರಿಯಲ್ಲಿ ಕರೆ ಬಂದಾಗ ನನಗಿಂತ ಹೆಚ್ಚು ಖುಷಿ ಪಟ್ಟದ್ದು ನನ್ನ ಪತ್ನಿ ಶಾಂತಾ. ಇಂಥ ಪ್ರಶಸ್ತಿ ಸಿಕ್ಕಿದ್ದರೆ ಕಣ್ಣೀರು ಹರಿಸಿದ್ದಳು. ಆದರೆ ಪ್ರಶಸ್ತಿ ಸ್ವೀಕರಿಸುವ ದಿನವೇ ಆಕೆ ಇಲ್ಲ ಎಂದು ನನಗೆ ಕರೆ ಬಂದಿದೆ. ಇದಕ್ಕಿಂತ ಬದುಕಿನಲ್ಲಿ ಇನ್ನೆಂಥ ದುರಂತ ಬೇಕು’ ಎಂದಿದ್ದಾರೆ ಬಾಲನ್‌.

    VIDEO: ಗುಂಡಿನ ದಾಳಿಯಲ್ಲಿ ಬರ್ಬರ ‘ಹತ್ಯೆ’ಯಾಗಿದ್ದ ಕುಸ್ತಿಪಟು ನಿಶಾ ಜಾಲತಾಣದಲ್ಲಿ ಪ್ರತ್ಯಕ್ಷ: ಪ್ಲೀಸ್ ನನ್ನ ನಂಬಿ ಎಂದ ತಾರೆ…

    ಕೊಡವ ಮದುಮಗ ಗಡ್ಡ ಬಿಡುವಂತಿಲ್ಲ, ಮದ್ವೆಗಳಲ್ಲಿ ಮದ್ಯ ನಿಷಿದ್ಧ, ಬಿಚ್ಚುತಲೆ ಹೆಂಗಳೆಯರಿಗೆ ನೋ ಎಂಟ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts