ರಿಲಯನ್ಸ್‌ನ ‘ಒನ್ ಸ್ಟಾಪ್ ಬ್ರೆಸ್ಟ್ ಕ್ಲಿನಿಕ್’ಗೆ ಚಾಲನೆ ನೀಡಿದ ನೀತಾ ಅಂಬಾನಿ

ಮುಂಬಯಿ: ‘ವಿಶ್ವ ಕ್ಯಾನ್ಸರ್ ದಿನ’ದ ಹಿನ್ನೆಲೆಯಲ್ಲಿ ಗುರುವಾರ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯಲ್ಲಿ ‘ಒನ್ ಸ್ಟಾಪ್ ಬ್ರೆಸ್ಟ್ ಕ್ಲಿನಿಕ್’ಗೆ ರಿಲಯನ್ಸ್ ಪ್ರತಿಷ್ಠಾನದ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಮುಕೇಶ್ ಅಂಬಾನಿ ಚಾಲನೆ ನೀಡಿದರು.

ಎರಡೇ ಗಂಟೆಗಳಲ್ಲಿ ಕಾಯಿಲೆಯ ಸಮಗ್ರ ತಪಾಸಣೆ ನಡೆಸುವುದು ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸುವುದು ಈ ನೂತನ ಕ್ಲಿನಿಕ್‌ನ ವಿಶೇಷವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮವೆಂದು ಸಾಬೀತಾಗಿರುವ ಚಿಕಿತ್ಸಾ ಕ್ರಮಗಳು, ರೋಗಿಯನ್ನು ಕೇಂದ್ರೀಕರಿಸಿರುವ ಆರೋಗ್ಯಸೇವೆಗಳು, ಪರಿಣಿತ ವೈದ್ಯರ ಸೇವೆ ಇಲ್ಲಿ ಲಭ್ಯವಿದೆ. ದೇಶದಲ್ಲಿಯೇ ಇಂತಹ ಕ್ಲಿನಿಕ್ ಇದೇ ಮೊದಲನೆಯದು ಎಂದು ಹೇಳಲಾಗಿದೆ. ಲಂಡನ್‌ನ ಪ್ರತಿಷ್ಠಿತ ಗಯ್ಸ ಆಸ್ಪತ್ರೆಯ ಬ್ರೆಸ್ಟ್ ಟ್ಯೂಮರ್ ಗ್ರೂಪ್‌ನ ಅಧ್ಯಕ್ಷ ಡಾ. ಅಶುತೋಷ್ ಕೊಠಾರಿ ಅವರ ಸಹಯೋಗ ಈ ಕ್ಲಿನಿಕ್‌ಗೆ ಇದೆ.

‘‘ಇದು ಕೇವಲ ಕ್ಯಾನ್ಸರ್ ಚಿಕಿತ್ಸಾ ವಿಭಾಗ ಅಲ್ಲ, ದೇಶದಲ್ಲಿಯೇ ವಿಶಿಷ್ಟವಾದ ಚಿಕಿತ್ಸಾ ಕೇಂದ್ರ. ಬೇರೆ ಯಾವುದೇ ಆಸ್ಪತ್ರೆಯಲ್ಲಿ ಇಷ್ಟು ಅತ್ಯಾಧುನಿಕವಾದ ಕ್ಯಾನ್ಸರ್ ಚಿಕಿತ್ಸಾ ವಿಧಾನಗಳು ಲಭ್ಯವಿಲ್ಲ’’ ಎಂದು ನೀತಾ ಅಂಬಾನಿ ಈ ಸಂದರ್ಭದಲ್ಲಿ ಹೇಳಿದರು.

ಸರ್ ಎಚ್‌ಎನ್ ರಿಲಯನ್ಸ್ ಪ್ರತಿಷ್ಠಾನ ಆಸ್ಪತ್ರೆಯ ಮಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ತರಂಗ್ ಗ್ಯಾನ್‌ಚಂದಾನಿ ಮಾತನಾಡಿ, ‘‘ಸ್ತನ ಕಾನ್ಸರ್ ಇದೆ ಎಂಬುದು ಪತ್ತೆ ಆಗುತ್ತಿದ್ದಂತೆಯೇ ಮಹಿಳೆಯರು ಅನುಭವಿಸುವ ಯಾತನೆ ಅಪಾರ. ಅಂತಹವರಿಗೆ ಈ ಕ್ಲಿನಿಕ್ ವರದಾನವಾಗಲಿದೆ. ಸ್ತನ ಕ್ಯಾನ್ಸರನ್ನು ಬೇಗ ಪತ್ತೆ ಹಚ್ಚುವ, ಕೌನ್ಸೆಲಿಂಗ್ ಮಾಡುವ, ಚಿಕಿತ್ಸೆ ನೀಡುವ ಎಲ್ಲ ವ್ಯವಸ್ಥೆ ಇಲ್ಲಿದೆ’’ ಎಂದು ತಿಳಿಸಿದರು.

ಇದೇ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ನಿರ್ದೇಶಕ ಡಾ. ವಿಜಯ್ ಹರಿಭಕ್ತಿ ಮಾತನಾಡಿ, ‘‘ಸ್ತನ ಕಾನ್ಸರ್ ಪತ್ತೆಯಾಗುತ್ತಿದ್ದಂತೆಯೇ ಮಹಿಳೆಯರಿಗೆ ಚಿಕಿತ್ಸೆಯ ಸಮಗ್ರ ಮಾಹಿತಿಯ ಅವಶ್ಯಕತೆ ಇರುತ್ತದೆ. ಈ ದಿಸೆಯಲ್ಲಿ ಮಹಿಳೆಯರಿಗೆ ಈ ಕ್ಲಿನಿಕ್‌ನಿಂದ ಸಾಕಷ್ಟು ಸಹಾಯ ದೊರೆಯುತ್ತದೆ’’ ಎಂದು ಹೇಳಿದರು.

ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

ಟಾಯ್ಲೆಟ್​ನಲ್ಲಿ ಚಿರತೆ-ನಾಯಿ ಲಾಕ್: ನಾಯಿ ಎದುರಿಗಿದ್ರೂ ಚಿರತೆ ಫುಲ್ ಸೈಲೆಂಟ್‌! ಮುಂದೇನಾಯ್ತು?

ಮಕ್ಕಳಿಬ್ಬರು ನೀರುಪಾಲು! ಅಯ್ಯೋ ಮಕ್ಕಳೇ… ಎಂದು ಚೀರಾಡುತ್ತಾ ಬಂದ ಅಮ್ಮ-ಚಿಕ್ಕಮ್ಮನೂ ಬದುಕಲಿಲ್ಲ

Share This Article

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…

Chanakya Niti: ದಾಂಪತ್ಯ ಜೀವನ ಸುಂದರವಾಗಿರಲು 4 ವಿಷಯಗಳನ್ನು ಅನುಸರಿಸಿ….

ಬೆಂಗಳೂರು:  ವಿದ್ವಾಂಸರಲ್ಲಿ ಚಾಣಕ್ಯರು ( Chanakya Niti ) ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

Tamarind Juice : ಹುಣಸೆ ಹಣ್ಣಿನ ರಸದ ಅದ್ಭುತ ಪ್ರಯೋಜನಗಳಿವು…

ಬೆಂಗಳೂರು:  ಹುಣಸೆಹಣ್ಣು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಹುಣಸೆಹಣ್ಣು ಸ್ವಲ್ಪ ಸಿಹಿ ಮತ್ತು ಸ್ವಲ್ಪ…