More

    ಕೊಡವ ಮದುಮಗ ಗಡ್ಡ ಬಿಡುವಂತಿಲ್ಲ, ಮದ್ವೆಗಳಲ್ಲಿ ಮದ್ಯ ನಿಷಿದ್ಧ, ಬಿಚ್ಚುತಲೆ ಹೆಂಗಳೆಯರಿಗೆ ನೋ ಎಂಟ್ರಿ!

    ಕೊಡಗು: ಪ್ರಕೃತಿಯ ಆರಾಧಕರೆಂದೇ ಪ್ರಖ್ಯಾತರಾದವರು ಕೊಡವರು. ಇಂಥ ಕೊಡವ ಸಮುದಾಯದ ವೇಷಭೂಷಣಗಳ ಅಂದವೇ ಬೇರೆ, ಅವರ ಮದುವೆ ಸಂಪ್ರದಾಯವೂ ಅಷ್ಟೇ ವಿಶಿಷ್ಟ, ವಿಶೇಷ. ಇಂಥ ಕೊಡವರ ಮದುವೆಗೆ ಇದೀಗ ಕೆಲವು ಷರತ್ತು ವಿಧಿಸಲಾಗಿದ್ದು, ಇದು ಕೊಡವ ಸಮುದಾಯದಲ್ಲಿ ಸಂಚಲನ ಸೃಷ್ಟಿಸಿದೆ.

    ಕೊಡಗಿನಲ್ಲಿ ಮದ್ಯ ಸೇವನೆ ಕಾಮನ್‌. ಅದೇ ರೀತಿ ಮದುವೆಗಳಲ್ಲಿಯೂ ಶ್ಯಾಂಪೇನ್‌ ಹಾರಿಸುವುದು ಎಂದರೆ ಕೆಲವರಿಗೆ ಬಲು ಇಷ್ಟ, ಇದು ಇಲ್ಲದೆಯೇ ಮದುವೆಗೆ ಬೆಲೆಯೇ ಇಲ್ಲ ಎನ್ನುವುದು ಕೆಲವರ ಅನಿಸಿಕೆ. ಆದರೆ ಭಾರತೀಯ ಸಂಪ್ರದಾಯ ಬಿಟ್ಟು ಬ್ರಿಟಿಷ್‌ ಸಂಪ್ರದಾಯವನ್ನು ನಾವು ಅಳವಡಿಸಿಕೊಳ್ಳುವುದು ಸರಿಯಲ್ಲ ಎಂದಿರುವ ಸಮುದಾಯದ ಮುಖ್ಯಸ್ಥರು ಇದೀಗ ಎಲ್ಲದ್ದಕ್ಕೂ ಬ್ರೇಕ್‌ ಹಾಕಿ ರೂಲ್ಸ್‌ ಮಾಡಿದ್ದಾರೆ.

    ಈ ನಿಯಮದ ಅನ್ವಯ, ಮದುವೆಗಳಲ್ಲಿ ಶ್ಯಾಂಪೇನ್‌ ಹಾರಿಸುವುದು, ಕೇಕ್‌ ಕಟ್‌ ಮಾಡುವುದು ನಿಷಿದ್ಧ. ಸದ್ಯ ಇದನ್ನು ಕೊಡಗಿನ ಪೊನ್ನಂಪೇಟೆ ಕೊಡವ ಸಮಾಜ ಮತ್ತು ವಿರಾಜಪೇಟೆ ಕೊಡವ ಸಮಾಜಗಳು ವಿವಾಹ ಸಮಾರಂಭಗಳಲ್ಲಿ ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲದೇ, ಮದುವೆ ನಿಶ್ಚಿತಾರ್ಥ ಆದ ತಕ್ಷಣ ಮದುಮಗ ಗಡ್ಡವನ್ನು ಕ್ಲೀನ್‌ ಆಗಿ ಶೇವ್ ಮಾಡಬೇಕು, ಯಾವುದೇ ಕಾರಣಕ್ಕೂ ಮದುವೆಯ ದಿನ ಮದುಮಗನಿಗೆ ಗಡ್ಡ ಇರಬಾರದು ಎಂದು ನಿಯಮ ಮಾಡಲಾಗಿದೆ.
    ಇನ್ನು ಮದುಮಗಳ ವಿಷಯಕ್ಕೆ ಬರುವುದಾದರೆ, ಈಕೆಗೆ ಆಶಿರ್ವದಿಸಲು ಬರುವ ಮಹಿಳೆಯರು ಬಿಚ್ಚು ತಲೆಯಲ್ಲಿ ಅಂದರೆ ಕೂದಲು ಬಿಟ್ಟು ಬರುವಂತಿಲ್ಲ. ಕೂದಲು ಬಿಡುವುದು ಅಶುಭದ ಸಂಕೇತ, ಆದ್ದರಿಂದ ಸರಿಯಾಗಿ ಕೂದಲು ಕಟ್ಟಿಕೊಂಡು ಬಂದವರಷ್ಟೇ ಆಶೀರ್ವಾದ ಮಾಡಬಹುದು ಎಂದು ಕೊಡವ ಮುಖಂಡ ಎಂ. ಬಿ ದೇವಯ್ಯ ಹೇಳಿದ್ದಾರೆ.

    ಇದು ಸಮಾಜದಲ್ಲೀಗ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಪರ-ವಿರೋಧಗಳ ನಿಲುವು ವ್ಯಕ್ತವಾಗಿದೆ. ಇದರ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.

    ಹೈದರಾಬಾದ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ಇಸ್ಪಿಟ್‌ ದಂಧೆ: ಪ್ರಖ್ಯಾತ ನಟ ನಾಗಶೌರ್ಯ ತಂದೆಯೇ ಕಿಂಗ್‌ಪಿನ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts