ಮುಸ್ಲಿಂ ಹೆಸರಲ್ಲಿ ಮಗುಕೊಟ್ಟು ಎಸ್ಕೇಪ್‌ ಆದ ಬಳ್ಳಾರಿಯ ಸಬ್ ರಿಜಿಸ್ಟ್ರಾರ್‌! ದೇಹ ಕೊಟ್ಟು ಉಪಕಾರ ಮಾಡಬಲ್ಲೆ ಎಂದಳಂತೆ ಆಕೆ?

registrar
Published on

ಬಳ್ಳಾರಿ: ತಾನೊಬ್ಬ ಮುಸ್ಲಿಂ, ಅವಿವಾಹಿತ ಎಂದು ಮುಸ್ಲಿಂ ಹೆಸರು ಹೇಳಿಕೊಂಡು ಮುಸ್ಲಿಂ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿ ನಂತರ ಮಗುವಾದ ಮೇಲೆ ಬಳ್ಳಾರಿ ಸಬ್ ರಿಜಿಸ್ಟ್ರಾರ್ ಪರಾರಿಯಾಗಿರುವುದಾಗಿ ಯುವತಿ ದೂರಿದ್ದಾರೆ.

ಮಗುವನ್ನು ಹಿಡಿದುಕೊಂಡು ತನಗೆ ನ್ಯಾಯ ಕೊಡಿಸಿ ಎಂದು ಯುವತಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

‘ಬಳ್ಳಾರಿ ಸಬ್ ರಿಸ್ಟ್ರಾರ್ ಉಮೇಶ್ ತಮ್ಮ ಹೆಸರನ್ನು ರೆಹಾನ್ ಅಹಮದ್ ಎಂದು ಹೇಳಿಕೊಂಡು ನನ್ನನ್ನು ನಂಬಿಸಿದರು.ತಾವು ಮೊದಲೇ ಮದುವೆಯಾಗಿರುವ ವಿಷಯ ಕೂಡ ಹೇಳಿರಲಿಲ್ಲ. ಅವರನ್ನು ನಾನು ನಂಬಿದೆ. ಅವರ ಪತ್ನಿ ಹಾಗೂ ಮಕ್ಕಳ ಜತೆ ನಾನು ನೋಡಿದ್ದೆ. ಆಗ ಆಕೆ ತನ್ನ ಅತ್ತಿಗೆ ಹಾಗೂ ಅವರ ಮಕ್ಕಳು ಎಂದು ಉಮೇಶ್‌ ಪರಿಚಯಿಸಿದ್ದರು’ ಎಂದು ಯುವತಿ ಆರೋಪಿಸಿದ್ದಾರೆ.

ಪತಿಗೆ ಮೊದಲೇ ಮದುವೆಯಾಗಿದ್ದು, ಮಕ್ಕಳಾಗಿರುವ ವಿಷಯ ನಂತರ ನನಗೆ ತಿಳಿಯಿತು. ನಾನು ಅವರ ಬಳಿ ಈ ವಿಷಯ ಕೇಳಿದಾಗ ಹತ್ತು‌ ಕೋಟಿ ವರದಕ್ಷಿಣೆ ಕೊಡು ಎಂದು ಬೆದರಿಕೆ ಹಾಕಿದರು ಎಂದಿರುವ ಯುವತಿ, ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಸಬ್ ರಿಜಿಸ್ಟ್ರಾರ್ ವಿರುದ್ಧ ದಾಖಲಿಸಿದ್ದಾರೆ. ಸದ್ಯ ಉಮೇಶ್ ತಲೆಮರೆಸಿಕೊಂಡಿದ್ದಾರೆ.

ಆದರೆ ಉಮೇಶ್‌ ಹೇಳುವುದೇ ಬೇರೆ. ಅವರು ಈ ಮೊದಲೇ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು. ಅದರಲ್ಲಿ ಅವರು ಹೇಳಿದ್ದು ಏನೆಂದರೆ, ‘ಈಕೆ ಮೊದಲು ಪಬ್‌ನಲ್ಲಿ ಮಾಡೆಲ್‌ ಆಗಿದ್ದಳು. ಅಲ್ಲಿ ನನಗೆ . ಪರಿಚಯವಾಯಿತು. ನನ್ನ

ಬಳಿಯಿಂದ ಒಂದು ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಳು. ನಂತರ ನಿಮ್ಮ ಸಹಾಯಕ್ಕೆ ನನ್ನ ಬಳಿ ಕೊಡಲು ದೇಹ ಬಿಟ್ಟು ಬೇರೆ ಏನು ಇಲ್ಲ, ದೇಹ ಕೊಟ್ಟು ಉಪಕಾರ ಮಾಡಬಲ್ಲೆ ಎಂದಿದ್ದಳು. ನನ್ನ ಜತೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ. ನಂತರ ಲೈಂಗಿಕ ಕ್ರಿಯೆ ನಡೆಸಿದ ವೀಡಿಯೋಗಳನ್ನು ಯುಟ್ಯೂಬ್ ಹಾಕುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದಾಳ.ಈಕೆಯ ಜತೆಗೆ ಯುವತಿ ಹಾಗೂ ಅವರ ಕುಟುಂಬ ಸದಸ್ಯರಾದ ಇಸ್ಮಾಯಿಲ್, ಜರೀನಾ, ಮಹಮದ್ ತಲೀಬ್ ಸೇರಿ 33.5 ಲಕ್ಷ ಸುಲಿಗೆ ಮಾಡಿದ್ದಾರೆ ಎಂದಿದ್ದಾರೆ. ಆದ್ದರಿಂದ ಇದರ ಸತ್ಯಾಸತ್ಯತೆಯ ಬಗ್ಗೆ ಬಳ್ಳಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net