More

    ಸಂಚಾರ ನಿಯಮಗಳನ್ನು ಪಾಲಿಸುವುದು ಅಗತ್ಯ

    ಕೋಲಾರ: ಪ್ರತಿಯೊಬ್ಬರೂ ಅಗತ್ಯವಾಗಿ ರಸ್ತೆ ಸುರಕ್ಷತೆ ನಿಯಮಗಳನ್ನು ಅರಿತು ಪಾಲಿಸಬೇಕು ಎಂದು ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಜಗದೀಶ್​ ತಿಳಿಸಿದರು.

    ನಗರದ ಮಿನಿ ಕ್ರೀಡಾಂಗಣದಲ್ಲಿ ಬುಧವಾರ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪಾದಚಾರಿಗಳು ರಸ್ತೆಯ ಬಲಬದಿಯಲ್ಲಿ ನಡೆಯಬೇಕು ಹಾಗೂ ಸುರಕ್ಷತಾ ನಡಿಗೆ ನಿಯಮ ಪಾಲಿಸಬೇಕು ಎಂದು ಹೇಳಿದರು.
    ಜೀವ ಅಮೂಲ್ಯವಾಗಿದ್ದು, ಇದನ್ನು ಅರಿತು ಪ್ರತಿಯೊಬ್ಬರು ವಾಹನ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟ್​ ಧರಿಸಬೇಕು. ನೀವುಗಳು ದುಡುಕಿ ಮಾಡುವ ಒಂದು ಸಣ್ಣ ತಪ್ಪಿನಿಂದ ಒಂದು ಜೀವ ಹೋಗುವುದರ ಜತೆಗೆ ಅವರ ಸಂಸಾರ ಬೀದಿಗೆ ಬರುತ್ತದೆ. ಇದಕ್ಕೆ ಹೊಣೆಗಾರರು ನೀವೇಯಾಗುತ್ತಿರಿ. ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳನ್ನು ಕಾಪೋರ್ರೇಷನ್​ ಅವರು ತೆರವುಗೊಳಿಸಿ ಸಾರ್ವಜನಿಕರ ಸುಗುಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
    ಶಾಲಾ&ಕಾಲೇಜುಗಳ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮತ್ತು ಅಮಲು ಪದಾರ್ಥಗಳನ್ನು ಮಾರಾಟ ಮಾಡುವುದು ಮತ್ತು ಸೇವಿಸುವುದು ಕಂಡುಬಂದಲ್ಲಿ ಕೂಡಲೇ ಪೊಲೀಸ್​ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
    ಕಾರ್ಯಪಾಲಕ ಅಭಿಯಂತ ರಾಮಮೂರ್ತಿ ಮಾತನಾಡಿ, ಯಾವುದೇ ವಾಹನ ಚಲಾಯಿಸುವಾಗ ಮೊಬೈಲ್​ನಲ್ಲಿ ಮಾತನಾಡದೆ ರಸ್ತೆಯ ಮೇಲೆ ಗಮನವಿಟ್ಟು ವಾಹನ ಚಲಾಯಿಸಬೇಕು. ದ್ವಿಚಕ್ರ ವಾಹನದಲ್ಲಿ 3 ರಿಂದ 4 ಜನ ಸಂಚಾರ ಮಾಡುವುದು ನಿಷೇಧವಾಗಿದ್ದು, ಆದರೂ ವಿದ್ಯಾರ್ಥಿಗಳು ಇದನ್ನು ಗಮನಿಸದೆ ವಾಹನ ಚಲಾಯಿಸಿ ಅಪಘಾತಕ್ಕೀಡಾಗುತ್ತಿದ್ದಾರೆ. ಪಾಲಕರು ಈ ಬಗ್ಗೆ ಸಂಚಾರ ನಿಯಮದ ಅರಿವು ನೀಡಬೇಕು ಎಂದರು.
    ಪ್ರಾದೇಶಿಕ ಸಾರಿಗೆ ಕಚೇರಿ ನಯಾಜ್​ ಪಾಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಾಹನಗಳ ಚಾಲಕರ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಕೆ.ವಿ ಸುರೇಶ್​ ಕುಮಾರ್​ ಮಾತನಾಡಿದರು. ಹಿರಿಯ ವಾಹನ ನಿರೀಕ್ಷಕ ಗೋಪಾಲಕೃಷ್ಣ, ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು.
    ಲಾರಿ, ಆಟೋ ಹಾಗೂ ಖಾಸಗಿ ವಾಹನಗಳಲ್ಲಿ ಅಪಘಾತ ರಹಿತ ಚಾಲನೆ ಮಾಡಿದ ವಾಹನ ಚಾಲಕರಿಗೆ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾರಿಗೆ ಸುರಕ್ಷತೆ ಕುರಿತ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
    ಚಿನ್ನದ ಪದಕ ಪಡೆದವರು:
    ಬಸ್​ ಚಾಲಕ ಮುನ್ನಾವರ್​ ಪಾಷಾ, ಟೆನಿಂಗ್​ ತರಬೇತುದಾರ ಎ.ಅರುಣ್​, ಲಾರಿ ಚಾಲಕ ಅಜ್ಮಲ್​ಪಾಷಾ, ಟ್ಯಾಕ್ಸಿ ಚಾಲಕ ರಾಮಾಂಜಿ, ಆಟೋಚಾಲಕ ನಾರಾಯಣ ಅಯ್ಯರ್​
    ಬೆಳ್ಳಿ ಪದಕ ಪಡೆದವರು:
    ಟೆನಿಂಗ್​ ಶಾಲೆಯ ಮುನಿರಾಜು, ಬಸ್​ ಚಾಲಕ ಶಫೀವುಲ್ಲಾ, ಲಾರಿ ಚಾಲಕ ನೂರ್​ ಪಾಷಾ, ಟಾಕ್ಸಿ ಚಾಲಕ ಪಿ.ಭಾಸ್ಕರ್​ ಆಟೋ ಚಾಲಕರಾದ ನವೀದ್​ ಪಾಷಾ ಮತ್ತು ವೆಂಕಟೇಶ್​ ಪ್ರಸಾದ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts