

ಕೊಚ್ಚಿ (ಕೇರಳ): ಸೋಲಾರ್ ಹಗರಣ ಕೇಸ್ಗೆ ಸಂಬಂಧಿಸಿದಂತೆ ಮಹಿಳಾ ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದರುವ ಆರೋಪ ಹೊತ್ತ ಕಾಂಗ್ರೆಸ್ನ ಘಟಾನುಘಟಿಗಳ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ. ಸಿಬಿಐ ಇವರ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ.
ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಸಂಸದರಾದ ಅಡೂರ್ ಪ್ರಕಾಶ್, ಹಿಬಿ ಈಡನ್ ಮತ್ತು ಕಾಂಗ್ರೆಸ್ ಶಾಸಕ ಎ.ಪಿ. ಅನಿಲ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಇವರು ಕಾಂಗ್ರೆಸ್ ಮುಖಂಡರಾದರೆ ಎಫ್ಐಆರ್ನಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ ಎ.ಪಿ. ಅಬ್ದುಲ್ಲಕುಟ್ಟಿ ಹೆಸರೂ ಇದೆ.
ಸೋಲಾರ್ ಹಗರಣ ಕೇಸ್ಗೆ ಸಂಬಂಧಿಸಿದಂತೆ ಇವರ ವಿರುದ್ಧ ಮಹಿಳೆ ದೂರು ದಾಖಲು ಮಾಡಿದ್ದರು. ಸೌರ ಯೋಜನೆಗಳ ಬಗ್ಗೆ ತಿಳಿಸಲು ತಾನು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾಗ, ಅವರು ಲೈಂಗಿಕ ಕಿರುಕುಳಕ್ಕೆ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದರು.
ಈ ಮೊದಲು ರಾಜ್ಯ ಸರ್ಕಾರ, ಈ ಪ್ರಕರಣ ಸಿಬಿಐಗೆ ವಹಿಸಿತ್ತು. ಇದೀಗ ಎಫ್ಐಆರ್ ದಾಖಲು ಮಾಡಿಕೊಂಡಿರುವ ಅಧಿಕಾರಿಗಳು ತಿರುವನಂತಪುರ ಮತ್ತು ಕೊಚ್ಚಿಯ ಮುಖ್ಯ ನ್ಯಾಯಾಲಯಗಳಿಗೆ ಎಫ್ಐಆರ್ ಪ್ರತಿ ಸಲ್ಲಿಸಿದ್ದಾರೆ.