

ಉತ್ತರ: ಸಾಮಾನ್ಯವಾಗಿ ಐದು ವರ್ಷಗಳ ಒಳಗಿನ ವಯಸ್ಸಿನ ಮಗುವಿನ ಕಸ್ಟಡಿಯನ್ನು ತಾಯಿಗೇ ಕೊಡುತ್ತಾರೆ .ನೀವು ನ್ಯಾಯಾಲಯದಲ್ಲಿ ಜಿ. ಅಂಡ್. ಡಬ್ಲ್ಯೂಸಿ ಪ್ರಕರಣ ದಾಖಲಿಸಿ, ಅದರಲ್ಲಿ ಮಧ್ಯಂತರ ಅರ್ಜಿ ಹಾಕಿ. ತಿಂಗಳಲ್ಲಿ ಇಷ್ಟು ಬಾರಿ ನನಗೆ ಯಾವುದಾದರೂ ತಟಸ್ಥ ಸ್ಥಳದಲ್ಲಿ ಮಗುವನ್ನು ನೋಡಲು , ಅದರೊಡನೆ ಕಾಲ ಕಳೆಯಲು ಅವಕಾಶ ಮಾಡಿಕೊಡಿ ಎಂದು ಅರ್ಜಿ ಹಾಕಿ.
ನ್ಯಾಯಾಲಯ ನಿಮ್ಮ ಅರ್ಜಿಯನ್ನು ಸಾಮಾನ್ಯವಾಗಿ ಪುರಸ್ಕರಿಸುತ್ತದೆ. ಕೋರ್ಟಿಗೆ ಹೋಗುವುದು ಬೇಡ ಎನ್ನಿಸಿದರೆ, ನಿಮ್ಮ ತಾಲ್ಲೂಕಿನ ನ್ಯಾಯಾಲಯದಲ್ಲಿರುವ ʼಮಧ್ಯಸ್ಥಿಕಾ ಕೇಂದ್ರಕ್ಕೆʼ ನಿಮ್ಮಿಬ್ಬರ ಮಧ್ಯೆ ಇರುವ ಸಮಸ್ಯೆಯನ್ನು , ʼವ್ಯಾಜ್ಯ ಪೂರ್ವ ಮಧ್ಯಸ್ಥಿಕೆʼ ಮೂಲಕ ಪರಿಹರಿಸಿಕೊಡಿ ಎಂದು ಅರ್ಜಿ ಸಲ್ಲಿಸಿ. ಅಲ್ಲಿ ಇಬ್ಬರನ್ನೂ ಕರೆಯಿಸಿ ಮಾತಾಡಿ, ನಿಮ್ಮ ಸಮಸ್ಯೆ ಪರಿಹಾರವಾಗಲು ಸಹಾಯ ಮಾಡುತ್ತಾರೆ. ಆಗಲೂ ಪರಿಹಾರ ಸಿಗದಿದ್ದರೆ , ಆ ನಂತರ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ: