

ತೈವಾನ್: ಕೆಲವೊಮ್ಮೆ ವೈದ್ಯಲೋಕವೇ ಅಚ್ಚರಿ ಪಡುವಂಥ ಘಟನೆಗಳು ನಡೆಯುತ್ತವೆ. ತಮ್ಮ ಕಣ್ಣುಗಳನ್ನು ತಾವೇ ನಂಬದಂಥ ಘಟನೆಗಳು ನಡೆಯುತ್ತವೆ.
ಅಂಥದ್ದೇ ಒಂದು ವಿಚಿತ್ರ ಎನ್ನುವ ಘಟನೆ ತೈವಾನ್ನಲ್ಲಿ ನಡೆದಿದ್ದು, ಅದೀಗ ಭಾರಿ ಸುದ್ದಿಯಾಗಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ ಅಪಘಾತದಿಂದಾಗಿ ಕೋಮಾಕ್ಕೆ ಹೋಗಿದ್ದ ಯುವಕನೊಬ್ಬ ಚಿಕನ್ ಫೆಲ್ಲೆಟ್ಸ್ ಹೆಸರು ಕೇಳುತ್ತಿದ್ದಂತೆಯೇ ಎದ್ದುಕುಳಿತಿದ್ದಾನೆ!
ಹೌದು. ಇದು ನಂಬುವುದು ಅಷ್ಟು ಸುಲಭದ ಮಾತಲ್ಲ. ಆದರೆ ವಿಚಿತ್ರ ಎನಿಸುವ ಈ ಘಟನೆ ನಡೆದಿದೆ. . ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಿಯು ಕೋಮಾಗೆ ಹೋಗಿದ್ದ. 18 ವರ್ಷದ ಈ ಯುವಕ 62 ದಿನ ಕೋಮಾದಲ್ಲಿ ಇದ್ದ.
ಇದನ್ನೂ ಓದಿ: ಡ್ರಗ್ಸ್ ಕೇಸ್: ಸಿನಿಮಾ ನಿರ್ಮಾಪಕನ ಪತ್ನಿ ಅರೆಸ್ಟ್
ಈತನ ಬಗ್ಗೆ ವೈದ್ಯರೇ ಆಸೆ ಬಿಟ್ಟಿದ್ದರು. ಎಲ್ಲಾ ಚಿಕಿತ್ಸೆ ನೀಡಿದರೂ ಕೋಮಾದಿಂದ ಅವನು ಹೊರಕ್ಕೆ ಬಂದಿರಲಿಲ್ಲ. ನಂತರ ಆತನ ಸಹೋದರನಿಗೆ ಅದೇನು ಎನ್ನಿಸಿತೋ ಗೊತ್ತಿಲ್ಲ. ಆತನ ಇಷ್ಟವಾದ ಖಾದ್ಯವಾದ ಚಿಕನ್ ಫಿಲೆಟ್ಸ್ ಹೆಸರು ಹೇಳಿದ್ದಾನೆ.
ಹೀಗೆ ಹೇಳುತ್ತಿದ್ದಂತೆಯೇ ಚಿಮು ಕಣ್ಣುಬಿಟ್ಟಿದ್ದಾನಂತೆ. ಇದನ್ನು ವೈದ್ಯರಿಗೆ ಸಹೋದರ ತಿಳಿಸಿದರೂ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲವಂತೆ! ಅಪಘಾತದಲ್ಲಿ ಬಲವಾಗಿ ಏಟುಬಿದ್ದಿದ್ದರಿಂದ ಆತನ ಶರೀರದ ಅನೇಕ ಭಾಗಗಳಿಗೆ ಗಾಯಗಳಾಗಿವೆ. ತಲೆಗೂ ಹೊಡೆತ ಬಿದ್ದ ಹಿನ್ನೆಲೆಯಲ್ಲಿ ಕೋಮಾಕ್ಕೆ ಜಾರಿದ್ದ. ನಾವು ಅನೇಕ ರೀತಿಯ ಚಿಕಿತ್ಸೆ ಕೊಟ್ಟರೂ ಆತ ಎಚ್ಚರವಾಗಿರಲಿಲ್ಲ. ಆದರೆ ಇದನ್ನು ನಂಬಲು ನಮಗೆ ಆಗುತ್ತಿಲ್ಲ ಎಂದಿದ್ದಾರೆ ವೈದ್ಯರು.