ನನ್ನ ಸಾವಿಗೆ ನಟ ಸಾಹಿಲ್‌ ಕಾರಣ- ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ‘ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್‌’

sahilkhan
Published on

ಮುಂಬೈ: ಮಿಸ್ಟರ್ ಇಂಡಿಯಾ ಬಾಡಿ ಬಿಲ್ಡರ್ ಪ್ರಶಸ್ತಿ ಪಡೆದು ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿರುವ ಮನೋಜ್ ಪಾಟೀಲ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ತನ್ನ ಸಾವಿಗೆ ನಟ ಸಾಹಿಲ್‌ ಖಾನ್‌ ಅವರೇ ಕಾರಣ ಎಂದು ನೋಟ್‌ನಲ್ಲಿ ಬರೆದಿಟ್ಟಿರುವ ಮನೋಜ್‌, ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಮುಂಬೈನ ಕೂಪರ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಕೆಲವು ದಿನಗಳಿಂದ ನಟ ಸಾಹಿಲ್ ಖಾನ್ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಸಾಯದೇ ಬೇರೆ ದಾರಿ ಇಲ್ಲ. ತುಂಬಾ ನೊಂದುಕೊಂಡಿದ್ದೇನೆ. ಆದ್ದರಿಂದಾಗಿ ನಾನು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದೇನೆ ಎಂದು ನೋಟ್‌ನಲ್ಲಿ ಮನೋಜ್‌ ಉಲ್ಲೇಖಿಸಿದ್ದಾರೆ.

ಅಷ್ಟಕ್ಕೂ ನಟ ಸಾಹಿಲ್‌ ಖಾನ್‌ಗೆ ಇವರ ಮೇಲೆ ಏಕೆ ದ್ವೇಷ ಎಂಬ ಬಗ್ಗೆ ಈ ಹಿಂದೆ ವಿವರಿಸಿದ್ದ ಮನೋಜ್‌. ನಾನು ಮಿಸ್ಟರ್ ಇಂಡಿಯಾ ಆದ ನಂತರ ಮಿಸ್ಟರ್​ ಒಲಂಪಿಯಾದಲ್ಲಿ ಭಾಗವಹಿಸಲು ಸಜ್ಜಾಗುತ್ತಿದ್ದೇನೆ. ಸಾಹಿಲ್ ಖಾನ್ ಕೂಡ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸಿದ್ದಾರೆ. ಆದ್ದರಿಂದ ಸ್ಪರ್ಧೆಯಲ್ಲಿ ನಾನು ಭಾಗವಹಿಸದಂತೆ ಮಾಡುವುದೇ ಅವರ ಉದ್ದೇಶ. ಇದರಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net