VIDEO: ಏಷ್ಯಾದ ದೊಡ್ಡ ಸರೋವರ ತೆಹ್ರಿ ಬಿರುಗಾಳಿಗೆ ಅಲ್ಲೋಲ ಕಲ್ಲೋಲ- ಬೋಟ್​ಗಳಿಗೆ ಹಾನಿ

boat
Published on

ತೆಹ್ರಿ (ಉತ್ತರಾಖಂಡ): ಏಷ್ಯಾದ ಅತಿದೊಡ್ಡ ಸರೋವರಗಳಲ್ಲಿ ಒಂದಾಗಿರುವ ಉತ್ತರಾಖಂಡ್​ನ ತೆಹ್ರಿ ಸರೋವರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.

ಇಲ್ಲಿ ಬೀಸುತ್ತಿರುವ ರಭಸವಾದ ಗಾಳಿ, ಮಳೆಗೆ ಸರೋವರದಲ್ಲಿನ ಬೋಟುಗಳು ಚೆಲ್ಲಾಪಿಲ್ಲಿಯಾಗಿವೆ. ಈ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ಬೋಟ್​ಗಳಿಗೆ ಹಾನಿಯಾಗಿದೆ. 2016ರ ನಂತರ ಎರಡನೇ ಬಾರಿಗೆ ಇಂತಹ ಬಿರುಗಾಳಿ ಅಪ್ಪಳಿಸಿದ್ದು, ಸಾಕಷ್ಟು ಹಾನಿ ಉಂಟುಮಾಡಿದೆ.

ಇಷ್ಟೇ ಅಲ್ಲದೇ 30ಕ್ಕೂ ಅದಿಕ ಬೋಟ್‌ಗಳ ಇಂಜಿನ್‌ಗಳು ಜಲಾವೃತವಾಗಿವೆ ಎಂದು ಬೋಟ್ ನಿರ್ವಾಹಕರು ತಿಳಿಸಿದ್ದಾರೆ. ಸಂಜೆ ವೇಳೆಗೆ ಕೋಟಿಕಾಲೋನಿಯ ಬೋಟಿಂಗ್ ಪಾಯಿಂಟ್‌ನಲ್ಲಿ ನಿಲ್ಲಿಸಲಾಗಿದ್ದ ಹತ್ತಾರು ಬೋಟ್‌ಗಳಿಗೆ ಭಾರೀ ಹಾನಿಯಾಗಿದೆ.

ಜಿಲ್ಲಾಡಳಿತ ಕೂಡಲೇ ನಮ್ಮ ಸಹಾಯಕ್ಕೆ ಬರಬೇಕೆಂದು ಬೋಟ್ ಚಾಲಕರು ಒತ್ತಾಯಿಸಿದ್ದಾರೆ. ಬಿರುಗಾಳಿ ಬೀಸುತ್ತಿದ್ದ ವೇಳೆ ಬೋಟ್​ನಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಬೋಟ್ ಚಾಲಕರು ಬಹಳ ಶ್ರಮಪಟ್ಟು ಕಾಪಾಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ: ಕೃಪೆ Khabar Uttarakhand

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net