ಚಿಕನ್​ ಪ್ರಿಯರಿಗೆ ಭಾರಿ ಶಾಕ್​! ಮಾಂಸದ ಬೆಲೆ ದಿಢೀರ್​ ಗಗನಕ್ಕೆ- ಜನರು ಕಂಗಾಲು

chicken
Published on

ಹೈದರಾಬಾದ್​: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ನಡುವೆಯೇ ತರಕಾರಿ ಬೆಲೆಗಳೂ ಗಗನ ಮುಟ್ಟಿವೆ. ಇದು ಸಸ್ಯಾಹಾರಿಗಳನ್ನು ಆತಂಕಕ್ಕೆ ತಳ್ಳಿದ್ದರೆ, ಇದೀಗ ಮಾಂಸಾಹಾರಿಗಳೂ ಹುಬ್ಬೇರಿಸುವಂತಾಗಿದೆ. ಏಕೆಂದರೆ ಒಂದು ಕೆ.ಜಿ. ಚಿಕನ್​ ಬೆಲೆ 300 ರೂಪಾಯಿ ಆಗಿದೆ.

ಇದು ಸದ್ಯ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈ ಪರಿಯಲ್ಲಿ ಬೆಲೆ ಏರಿಕೆ ಆಗಿದ್ದು, ಇದರ ಪ್ರಭಾವ ನೆರೆಯ ಕರ್ನಾಟಕದಲ್ಲಿಯೂ ಆಗುವ ಎಲ್ಲಾ ಸಾಧ್ಯತೆಗಳಿವೆ. ಹೈದರಾಬಾದ್​ ಮತ್ತು ತೆಲಂಗಾಣದಲ್ಲಿ ಚಿಲ್ಲರೆ ಕೋಳಿ ಅಂಗಡಿಗಳಲ್ಲಿ ಕಿಲೋ ಸ್ಕಿನ್ ಲೆಸ್ ಚಿಕನ್ 300 ರೂ.ವರೆಗೆ ಮಾರಾಟವಾಗುತ್ತದೆ. ಸ್ಕಿನ್​ ಇರುವ ಚಿಕನ್​ 280 ರೂಪಾಯಿ ಆಗಿದೆ. ಇದರ ಬೆಲೆ ಕೇಳಿ ಹೌಹಾರಬಾರದು ಎನ್ನುವ ಕಾರಣಕ್ಕೆ ಕೆಲವು ಗ್ರಾಹಕರು 1 ಕೆಜಿ ಕೋಳಿಗೆ 4 ಮೊಟ್ಟೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಕರೊನಾದಿಂದಾಗಿ ಹಲವಾರು ಮದುವೆಗಳು ಮುಂದೂಡಿಕೆ ಆಗಿದ್ದವು, ಜತೆಗೆ ಹಲವು ಸಮಾರಂಭಗಳನ್ನೂ ಮುಂದೂಡಲಾಗಿತ್ತು. ಇದೀಗ ಅವುಗಳೆಲ್ಲವೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿಕನ್​ಗೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವುದು ಚಿಕನ್ ಸೆಂಟರ್​ಗಳ ಮಾಲೀಕರ ಅಭಿಪ್ರಾಯ.

ಈ ಬಾರಿ ಬಿಸಿಲಿನ ಝಳ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕೋಳಿ ಉತ್ಪಾದನೆ ಕಡಿಮೆಯಾಗಿರುವುದೂ ಇದಕ್ಕೆ ಕಾರಣ ಎನ್ನಲಾಗಿದೆ. ಇವೆಲ್ಲವುಗಳ ಹೊರತಾಗಿ ಇನ್ನೊಂದು ವಾದವಿದೆ. ಅದೇನೆಂದರೆ, ಕೋಳಿ ಫಾರಂಗಳು ರೈತರಿಂದ ಬಹುರಾಷ್ಟ್ರೀಯ ಕಂಪನಿಗಳ ಕೈ ಸೇರಿದ್ದರಿಂದ ಪ್ರತಿ ಬೇಸಿಗೆಯಲ್ಲಿ ಕೋಳಿ ಬೆಲೆ ಏರಿಕೆಯಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳು ಉದ್ದೇಶಪೂರ್ವಕವಾಗಿ ಬೇಸಿಗೆಯಲ್ಲಿ ಹಕ್ಕಿಯನ್ನು ಮೊಟಕುಗೊಳಿಸಿ ಬೆಲೆ ಏರಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net