ಮಾಸ್ಕ್‌ ಕೊಳ್ಳಲು ನೀವು ಪಿಂಚಣಿ ಹಣ ಕೊಟ್ಟಿಲ್ವಲ್ಲಾ... ಅದಕ್ಕಾಗಿಯೇ ಹಕ್ಕಿ ಗೂಡು ಕಟ್ಟಿಕೊಂಡೆ...

nest
Published on

ಹೈದರಾಬಾದ್: ಈಗ ಮಾಸ್ಕ್‌ ಎನ್ನುವುದು ಜೀವನದ ಅವಿಭಾಜ್ಯ ಅಂತವಾಗಿ ಹೋಗಿದೆ. ಮಾಸ್ಕ್‌ ಇಲ್ಲದೇ ಇದ್ದರೆ ದಂಡ ಕಟ್ಟುವ ಪರಿಸ್ಥಿತಿ ಇದೆ.

ಇಲ್ಲೊಬ್ಬ ಅಜ್ಜ ಇದೇ ಮಾಸ್ಕ್‌ನಿಂದಾಗಿ ಭಾರಿ ಸುದ್ದಿಯಾಗಿದ್ದಾನೆ. ಇದಕ್ಕೆ ಕಾರಣ, ಬಟ್ಟೆಯ ಬದಲು ಈ ವೃದ್ಧ ಹಕ್ಕಿಯ ಗೂಡನ್ನು ಮೂಗಿಗೆ, ಬಾಯಿಗೆ ಕಟ್ಟಿಕೊಂಡು ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾನೆ. ತೆಲಂಗಾಣದ ಮೆಹಬೂಬ್‌ ನಗರದ ನಿವಾಸಿ ಮೆಕಲಾ ಕೂರ್ಮಯ್ಯ ಎನ್ನುವ ಈ ವೃದ್ಧ ತಮಗೆ ಮಾಸ್ಕ್‌ ಕೊಳ್ಳಲು ಹಣ ಇಲ್ಲ, ಆದ್ದರಿಂದ ಹಕ್ಕಿಯ ಗೂಡನ್ನು ಕಟ್ಟಿಕೊಂಡು ಬಂದಿರುವುದಾಗಿ ಹೇಳಿದ್ದಾರೆ.

ಮೆಕಲಾ ಅವರಿಗೆ ಪಿಂಚಣಿ ಹಣ ಬರಬೇಕಿತ್ತು. ಆದರೆ ಅವರಿಗೆ ಅದಿನ್ನೂ ಬರಲಿಲ್ಲ. ಆದ್ದರಿಂದ ಪಿಂಚಣಿಗಾಗಿ ಸರ್ಕಾರಿ ಕಚೇರಿಗಳಿಗೆ ಭೇಟಿ ಕೊಟ್ಟು ಕೊಟ್ಟು ಸಾಕಾಗಿದೆ. ಈ ವೇಳೆ ಹಕ್ಕಿಯ ಗೂಡನ್ನು ಬಾಯಿ, ಮೂಗಿಗೆ ಕಟ್ಟಿಕೊಂಡಿರುವ ಅವರನ್ನು ಪೊಲೀಸರು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ನಾನೇನು ಮಾಡಲಿ ನಿಮ್ಮಿಂದ (ಸರ್ಕಾರದಿಂದ) ಪಿಂಚಣಿ ಹಣ ಬರಲಿಲ್ಲ. ಮಾಸ್ಕ್‌ ಕೊಳ್ಳಲು ದುಡ್ಡು ಇಲ್ಲ, ಅದಕ್ಕಾಗಿ ಹೀಗೆ ಮಾಡಿದ್ದೇನೆ ಎಂದಿದ್ದಾರೆ.

ಸದ್ಯ ಇವರ ಫೋಟೋ ಭಾರಿ ವೈರಲ್‌ ಆಗಿದ್ದು, ಇದಕ್ಕೆ ಪರ- ವಿರೋಧವಾಗಿ ಹಲವಾರು ಕಮೆಂಟ್‌ಗಳು ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net