

ಮುಂಬೈ: ಹಿಂದಿನ ಬಿಗ್ಬಾಸ್ ಷೋನಲ್ಲಿ ಭಾಗವಹಿಸಿದ್ದ ನಟಿ, ಪಂಜಾಬಿ ಗಾಯಕಿ ಸಾರಾ ಗುರ್ಪಾಲ್ ಇದೀಗ ಕಣ್ಣಿಗೆ ಗಾಯ ಮಾಡಿಕೊಂಡು ನರಳಾಡುತ್ತಿದ್ದಾರೆ.
14 ವಾರಗಳವರೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಾರಾ ಇದೀಗ ಎಲಿಮಿನೇಟ್ ಆಗಿದ್ದಾರೆ. ಆದರೆ ಕೊನೆಯ ಟಾಸ್ಕ್ ಒಂದರಲ್ಲಿ ತಮ್ಮ ಪ್ರತಿಸ್ಪರ್ಧಿ ನಿಕ್ಕಿ ತಂಬೀಲಿಯಾ ಅಕ್ರಿಲಿಕ್ ಅವರ ಉಗುರು ತಗುಲಿಸಿಕೊಂಡಿರುವ ಕಾರಣ, ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ.
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕುರಿತಾಗಿ ಇರುವ ಟಾಸ್ಕ್ನಲ್ಲಿ ಉಗುರು ತಗುಲಿತ್ತು. ಈ ಟಾಸ್ಕ್ನಲ್ಲಿ ಸೀಟು ಬದಲಾವಣೆ ವೇಳೆ ನಿಕ್ಕಿ ಅವರ ಉದ್ದನೆಯ ಉಗುರು ಇವರ ಕಣ್ಣುಹೊಕ್ಕಿತ್ತು. ಇದೀಗ ಕಣ್ಣು ಕೆಂಪಗೆ ಊದಿಕೊಂಡಿದ್ದು, ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದೇ ಸಮಯದಲ್ಲಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಯಾರನ್ನು ಹಾಕಬೇಕು ಎಂದು ಇತರ ಹಿರಿಯ ಪ್ರತಿಸ್ಪರ್ಧಿಗಳಾದ ಸಿದ್ಧಾರ್ಥ್ ಶುಕ್ಲಾ, ಗೌಹರ್ ಖಾನ್ ಮತ್ತು ಹಿನಾ ಖಾನ್ ಅವರನ್ನು ಕೇಳಿದಾಗ ಅವರು ಸಾರಾ ಹೆಸರು ಹೇಳಿದ್ದರು. ಆದ್ದರಿಂದ ಈಕೆಯನ್ನು ಹೊರಕ್ಕೆ ಹಾಕಲಾಗಿತ್ತು.
ಈಕೆಯನ್ನು ಬಿಗ್ಬಾಸ್ ಮನೆಯಿಂದ ಹೊರಹಾಕಿರುವುದಕ್ಕೆ ಆಕೆಯ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಬಿಗ್ಬಾಸ್ನ ಈ ಸೀಸನ್ ಬಹು ವಿವಾದಕ್ಕೆ ಕಾರಣವಾಗಿದೆ. ಇದರ ಮಧ್ಯೆಯೇ, ವಿವಾದಿತ ನಟಿ ಎಂದೇ ಕರೆಸಿಕೊಂಡಿರುವ ಸಾರಾ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದಿರುವುದೂ ಅಲ್ಲದೇ, ಕಣ್ಣಿಗೆ ಗಾಯ ಮಾಡಿಕೊಂಡಿರುವುದಕ್ಕೆ ದುಃಖ ತೋಡಿಕೊಂಡಿದ್ದಾರೆ.
ಅಮೆರಿಕ ಮೂಲದ ಸಂಗೀತಗಾರ ತುಷಾರ್ ಕುಮಾರ್ ಅವರನ್ನು ಗುಟ್ಟಾಗಿ ಮದುವೆಯಾಗಿ ಅದನ್ನು ಮರೆಮಾಚಿ ವಿವಾಹಕ್ಕೆ ಕಾರಣವಾಗಿದ್ದಾರೆ ಸಾರಾ.