ಸಚಿನ್​ ಮಗಳನ್ನು ಮದುವೆಯಾದ್ರಾ ಶುಭ್​ಮನ್​ ಗಿಲ್​?: ಹೌದು ಎನ್ನುತ್ತಿದೆ ಗೂಗಲ್​..!

Sara
Published on

ನವದೆಹಲಿ: ಗೂಗಲ್​ನಲ್ಲಿ ಅಘ್ಘಾನಿಸ್ತಾನ ಕ್ರಿಕೆಟಿಗ ರಶೀದ್​ ಖಾನ್ ಪತ್ನಿಯ ಹೆಸರನ್ನು ಹುಡುಕಿದ್ರೆ ಈಗಲೂ ಅನುಷ್ಕಾ ಶರ್ಮಾ ಹೆಸರು​ ಬರುತ್ತೆ. ಈ ಸುದ್ದಿ ಎರಡು ದಿನಗಳ ಹಿಂದೆ ಭಾರಿ ವೈರಲ್​ ಸಹ ಆಗಿತ್ತು. ಇದೀಗ ಇದೇ ಸಾಲಿಗೆ ಕೋಲ್ಕತ ನೈಟ್​ ರೈಡರ್ಸ್​ ತಂಡದ ಆಟಗಾರ ಶುಭ್​ಮನ್​​ ಗಿಲ್ ಸೇರಿಕೊಂಡಿದ್ದಾರೆ.

ಹೌದು, ಗೂಗಲ್​ನಲ್ಲಿ ಶುಭ್​ಮನ್​ ಗಿಲ್​ ಪತ್ನಿಯ ಹೆಸರು ಸರ್ಚ್​ ಮಾಡಿದ್ರೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಮಗಳು ಸಾರಾ ತೆಂಡೂಲ್ಕರ್​ ಹೆಸರು ಕಂಪ್ಯೂಟರ್​ ಅಥವಾ ಮೊಬೈಲ್​ ಪರದೆಯ ಮೇಲೆ ತೋರುತ್ತದೆ. ಅದಕ್ಕೆ ಕಾರಣವೂ ಇದೆ.

ಅಂದಹಾಗೆ ಇಬ್ಬರು ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರವೂ ಹೆಚ್ಚು ಪ್ರಚಲಿತದಲ್ಲಿದ್ದರೆ ಅದನ್ನೇ ಗೂಗಲ್​ ತನ್ನ ಪರದೆಯಲ್ಲಿ ತೋರಿಸುತ್ತದೆ. ಶುಭಮನ್​ ಹಾಗೂ ಸಾರಾ ವಿಚಾರದಲ್ಲಿಯೂ ಇದೇ ಆಗಿರುವುದು. ಕೆಲ ದಿನಗಳ ಹಿಂದೆ ಶುಭ್​ಮನ್​ ಮತ್ತು ಸಾರಾ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಇಬ್ಬರ ನಡುವೆ ಪ್ರೇಮಾಂಕುರವಾಗಿ ಎನ್ನಲಾಗುತ್ತಿದೆ. ಡೇಟಿಂಗ್​ ಕೂಡ ನಡೆಸುತ್ತಿದ್ದಾರೆಂಬ ಸುದ್ದಿಯಾಗಿದೆ. ಶುಭ್​ಮನ್​, ಸಚಿನ್​ ಅಳಿಯನಾಗ್ತಾರೆ ಎಂಬ ಚರ್ಚೆಯು ನಡೆದಿದೆ.

ಇದರ ನಡುವೆ ಸಾರಾ, ಶುಭ್​ಮನ್​ ಫೀಲ್ಡಿಂಗ್​ ಮಾಡುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ ಹೃದಯದ ಎಮೋಜಿ ಹಾಕಿದ್ದರು. ಇದೀಗ ಪೋಸ್ಟ್​ ಡಿಲೀಟ್​ ಮಾಡಿದ್ದರೂ ಸಹ ಸ್ಕ್ರೀನ್​ಶಾಟ್​ ಹರಿದಾಡುತ್ತಿದೆ. ಇದಕ್ಕೂ ಮುಂಚೆ ಶುಭ್​ಮನ್ ಹೊಸ​ ರೇಂಜ್​ ರೋವರ್​ ಕಾರು ಖರೀದಿಸಿದ್ದಾಗ ಸಾರಾ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದರು.

ಈ ಎಲ್ಲ ಸುದ್ದಿ ಹೆಚ್ಚು ಹರಿದಾಡಿದ್ದರಿಂದ ಗೂಗಲ್​ನಲ್ಲಿ ಶುಭ್​ಮನ್ ಪತ್ನಿ​ ಕುರಿತಾಗಿ ಸಾರಾ ಫಲಿತಾಂಶ ಬಂದಿದೆ. ಆಘ್ಘಾನ್​ ಕ್ರಿಕೆಟಿಗ ರಶೀದ್​ ವಿಚಾರವಾಗಿಯೂ ಗೂಗಲ್​ನಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್​ ಮೇಲೆ ಕ್ಲಿಕ್ಕಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net