

ಬಾಂಡಾ (ಉತ್ತರ ಪ್ರದೇಶ): ತನ್ನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ತಂದೆ ಹಾಗೂ ಆತನ ಸಹೋದರನಿಗೆ ಉತ್ತರ ಪ್ರದೇಶ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2016ರ ಮಾರ್ಚ್ 14ರಂದು ನಡೆದಿರುವ ಘಟನೆ ಇದಾಗಿದೆ. ನಾಲ್ಕು ವರ್ಷಗಳ ವಿಚಾರಣೆ ನಡೆಸಿದ ಕೋರ್ಟ್ ಇದೀಗ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ, 10 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
ವರ್ಷದ ಬಾಲಕಿ ಮೇಲೆ ಕಾಮುಕ ತಂದೆ ಹಾಗೂ ಅವನ ಸಹೋದರ ಸೇರಿ ಅತ್ಯಾಚಾರ ಎಸಗಿದ್ದ ಭಯಾನಕ ಘಟನೆ ಇದಾಗಿದೆ. ಈ ಘಟನೆ ತಿಳಿಯುತ್ತಿದ್ದಂತೇ ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಮನೆಗೆ ಧಾವಿಸಿ ಬಾಲಕಿಯನ್ನು ಬಚಾವ್ ಮಾಡಿದ್ದರು.
ಅತ್ಯಾಚಾರದ ಹಿನ್ನೆಲೆಯಲ್ಲಿ ತಂದೆ ಮತ್ತು ಆತನ ಸಹೋದರನ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪೈಲಾನಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಬಾಲಕಿಯ ಸುರಕ್ಷತೆಯ ದೃಷ್ಟಿಯಿಂದ ಈ ಇಬ್ಬರು ಕಾಮುಕರ ಹೆಸರನ್ನು ಸದ್ಯ ಬಹಿರಂಗಪಡಿಸಿಲ್ಲ.