

ದೇಶದ ಅತಿ ದೊಡ್ಡ ಬ್ಯಾಂಕ್ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾದ ರಿಸ್ಕ್ ಮ್ಯಾನೇಜ್ಮೆಂಟ್ ಆ್ಯಂಡ್ ಫ್ರಾಡ್ ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಡಿಜಿಟಲ್ ವಿಭಾಗದಲ್ಲಿ ಅನುಭವವುಳ್ಳ ಸೂಕ್ತ ಅಭ್ಯರ್ಥಿಗಳು ಹಾಗೂ ಎಂಎಸ್ಎಂಇ ಕ್ರೆಡಿಟ್ ಅಧಿಕಾರಿಗಳ ನೇಮಕಕ್ಕೆ ಆದ್ಯತೆ ನೀಡಲಾಗಿದೆ. 1 ವರ್ಷ ಪ್ರೊಬೆಷನರಿ ಅವಧಿ ಇರುತ್ತದೆ. ಆನ್ಲೈನ್ ಅರ್ಜಿಗಳಿಗೆ ಮಾತ್ರ ಅವಕಾಶವಿದೆ. ದೇಶದ ಯಾವುದೇ ಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ಧಿರಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಅಲ್ಲಿಸುವಂತೆ ಸೂಚಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸುವುದಾಗಿ 1.5 ಲಕ್ಷ ರೂ.ನ ಸೇವಾ ಬಾಂಡ್ ಸಲ್ಲಿಸಬೇಕು. ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹುದ್ದೆ ವಿವರ
* ಮ್ಯಾನೇಜರ್ (ಡಿಜಿಟಲ್ ವಂಚನೆ ವಿಭಾಗ)- 15
* ಕ್ರೆಡಿಟ್ ಆಫೀಸರ್ (ಎಂಎಸ್ಎಂಇ ವಿಭಾಗ)- 40
* ಕ್ರೆಡಿಟ್ ಎಕ್ಸ್ಪೋರ್ಟ್/ ಇಂಪೋರ್ಟ್ ಬಿಜಿನೆಸ್-20
* ಫೋರೆಕ್ಸ್ ಅಕ್ವಿಜಿಷನ್ ಆ್ಯಂಡ್ ರಿಲೇಷನ್ಷಿಪ್ ಮ್ಯಾನೇಜರ್ (ಕಾರ್ಪೊರೇಟ್ ಕ್ರೆಡಿಟ್ ವಿಭಾಗ)-30
ಶೈಕ್ಷಣಿಕ ಅರ್ಹತೆ: ಯಾವುದೇ ಪದವಿ, ಬಿ.ಇ, ಬಿ.ಟೆಕ್ (ಕಂಪ್ಯೂಟರ್ ಸೈನ್ಸ್)/ಐಟಿ/ ಡೇಟಾ ಸರ್ವಿಸ್ ಅಥವಾ ವಿಜ್ಞಾನ ವಿಭಾಗದಲ್ಲಿ ತತ್ಸಮಾನ ಪದವಿ ಬಿಎಸ್ಸಿ, ಬಿಸಿಎ, ಎಂಸಿಎ, ಸ್ನಾತಕೋತ್ತರ ಪದವಿ/ಮ್ಯಾನೇಜ್ಮೆಂಟ್ನಲ್ಲಿ ಡಿಪ್ಲೊಮಾ, ಸಿಎ/ಸಿಎಂಎ/ಸಿಎಫ್ಎ ಪದವಿ ಹೊಂದಿದವರಿಗೆ ಆದ್ಯತೆ. ಹುದ್ದೆಗಳಿಗೆ ಅನುಗುಣವಾಗಿ 2&3 ವರ್ಷ ವೃತ್ತಿ ಅನುಭವ ಕೇಳಲಾಗಿದೆ.
ವೇತನ: ಕನಿಷ್ಠ 48,170 ರೂ.ಗಳಿಂದ ಗರಿಷ್ಠ 89,890 ರೂ.ವರೆಗೆ ನಿಗದಿ
ವಯೋಮಿತಿ: ಹುದ್ದೆಗೆ ಅನುಗುಣವಾಗಿ ಕನಿಷ್ಠ 24 ರಿಂದ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ನೀಡಲಾಗುವುದು.
ಅರ್ಜಿ ಶುಲ್ಕ: ಎಸ್ಸಿ/ಎಸ್ಟಿ , ಅಂಗವಿಕಲ, ಮಹಿಳಾ ಅಭ್ಯರ್ಥಿಗಳಿಗೆ 100 ರೂ. ಹಾಗೂ ಇತರೆ ವರ್ಗದವರಿಗೆ 600 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ 24.03.2022
ಅಧಿಸೂಚನೆಗೆ: https://bit.ly/3CqQsGk
ಮಾಹಿತಿಗೆ: http://www.bankofbaroda.in