ಕೂದಲು ಹರಡಿಕೊಂಡಿದ್ದ ಸುಂದರಿ ಸಿಕ್ಕಿದ್ಲು... ಕೆಳಗೆ ನೋಡಿದ್ರೆ... ಸ್ಪರ್ಧಿಗಳನ್ನು ಬೆಚ್ಚಿಬೀಳಿಸಿದ ಆರ್ಯವರ್ಧನ್ ಗುರೂಜಿ!

aryavardhan
Published on

ಬೆಂಗಳೂರು: ವೂಟ್​ ಸೆಲೆಕ್ಟ್​ನಲ್ಲಿ 24 ಗಂಟೆ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಒಟಿಟಿ ಕನ್ನಡ-1' ದಿನದಿನಕ್ಕೂ ಹೊಸ ರೂಪದಲ್ಲಿ ಬರುತ್ತಿದೆ. ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಗಳು ಇಲ್ಲಿಗೆ ಸೆಲೆಕ್ಟ್​ ಆಗಿದ್ದು, ಅವರಲ್ಲಿ ಗಮನ ಸೆಳೆಯುತ್ತಿರುವವರ ಪೈಕಿ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್​ ಗುರೂಜಿ ಕೂಡ ಒಬ್ಬರು.

ನಂಬರ್ ಅಂದ್ರೆ ನಾನು. ನಾನು ಅಂದ್ರೆ ನಂಬರ್ ಎನ್ನುತ್ತಲೇ ಸಂಖ್ಯಾಶಾಸ್ತ್ರದ ಮೂಲಕ ಭವಿಷ್ಯ ನುಡಿಯುವಲ್ಲಿ ಖ್ಯಾತಿ ಪಡೆದಿರುವ ಆರ್ಯವರ್ಧನ್​ ಗುರೂಜಿಯ ಲುಕ್​ ಮೊದಲ ದಿನವೇ ಚೇಂಜ್​ ಆಗಿದೆ. ಮೀಸಿ-ಗಡ್ಡ ಬೋಳಿಸಿಕೊಂಡು ಡಿಫರೆಂಟ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಗುರೂಜಿ. ನಟ, ರಾಜಕಾರಣಿ ಅರ್ಜುನ್ ರಮೇಶ್ ಅವರು ಆರ್ಯವರ್ಧನ್​ ಅವರ ಗಡ್ಡ ಬೋಳಿಸಿದ್ದಾರೆ. ‘ಮೀಸೆ ಕತ್ತರಿಸಬೇಡಿ. ಕೆಂಪೇಗೌಡ ಸುದೀಪ್ ರೀತಿ ಕಾಣುತ್ತಿದ್ದೀರಿ’ ಎಂದು ತಮಾಷೆಯನ್ನೂ ಮಾಡಿದ್ದಾರೆ. ಅವರ ಹೊಸ ಲುಕ್ ಸಾಕಷ್ಟು ವೈರಲ್ ಆಗುತ್ತಿದೆ.

ದೆವ್ವಕ್ಕೇ ಲೈನ್​ ಹೊಡೆದಿದ್ದೆ:

ತಮ್ಮ ಬಗ್ಗೆ ಬಿಗ್​ಬಾಸ್​ ಮನೆಯಲ್ಲಿ ಹೇಳಿಕೊಂಡಿರುವ ಗುರೂಜಿ, ದೆವ್ವಕ್ಕೇ ಲೈನ್​ ಹೊಡೆದಿರುವ ವಿಷಯ ಪ್ರಸ್ತಾಪಿಸಿ ಎಲ್ಲರ ಹುಬ್ಬೇರಿಸಿದರು. ಮೂರು ಬಾರಿ ದೆವ್ವ ನೋಡಿರುವುದಾಗಿ ಅವರು ಹೇಳಿಕೊಂಡರು.

ಈ ವಿಷಯವನ್ನು ಅವರು ಸ್ವಾರಸ್ಯಕರವಾಗಿ ವಿವರಿಸಿದ್ದು ಹೀಗೆ: ನನಗೆ ಸಿನಿಮಾ ನೋಡುವ ಹುಚ್ಚು ಜಾಸ್ತಿ ಇತ್ತು. ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಬೆಂಗಳೂರಿನ ಊರ್ವಶಿ ಟಾಕೀಸ್​ನಲ್ಲಿ ಸಿನಿಮಾ ನೋಡಿ ವಿಲ್ಸನ್ ಗಾರ್ಡನ್‌ನಲ್ಲಿ ಸೈಕಲ್ ಮೇಲೆ ನಾನು, ನನ್ನ ಗೆಳೆಯನ ಜತೆ ಹೋಗುತ್ತಿದ್ದೆ. ಆಗ ಸುಂದರ ದೆವ್ವ ಕಂಡೆ. ಅದಕ್ಕೆ ಲೈನ್​ ಹೊಡೆದೆ. ಬಜಾರ್‌ನಲ್ಲಿ ಎಲ್ಲವೂ ಸಿಗತ್ತೆ, ದೆವ್ವವೂ ಸಿಗತ್ತೆ ಎಂದರು.

ಕೊನೆಗೆ ಈ ವಿಷಯದ ಬಗ್ಗೆ ಸವಿಸ್ತಾರವಾಗಿ ಹೇಳಿದ ಗುರೂಜಿ, ಒಂದು ಹುಡುಗಿ ಅಲ್ಲಿ ಹೋಗುತ್ತಿದ್ದಳು. ಅವಳ ಕೂದಲು ಹಾರಾಡುತ್ತಿತ್ತು. ಅವಳು ಸ್ವರ್ಗದಿಂದ ಭೂಮಿಗಿಳಿದ ಅಪ್ಸರೆ ರೀತಿ ಇದ್ದಳು. ನಂತರ ನಮ್ಮ ದೃಷ್ಟಿ ಕೆಳಕ್ಕೆ ಹೋದಾಗ ನೋಡಿ ಬೆಚ್ಚಿಬಿದ್ದೆವು. ಏಕೆಂದರೆ ಅವಳಿಗೆ ಕಾಲೇ ಇರಲಿಲ್ಲ. ನಾವು ಸತ್ತೆವೊ, ಬಿದ್ದೆವೋ ಎಂದು ಓಡಿಬಂದೆವು ಎಂದ ಗುರೂಜಿ, ಇಲ್ಲಿಯವರೆಗೂ ನಾನು 3 ಬಾರಿ ದೆವ್ವ ನೋಡಿದ್ದೇನೆ ಎಂದರು. ಇದನ್ನು ಕೇಳಿ ಬಿಗ್​ಬಾಸ್ ಸ್ಪರ್ಧಿಗಳು ಗಾಬರಿಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net