ಇದು ಅರುಣಾ ಕಹಾನಿ! ಸಿನಿಮಾ ಹೆಸರಲ್ಲಿ ವಂಚಿಸಿದ್ದ ಯುವತಿಯೀಗ ಸಿನಿಮಾದಲ್ಲೇ 'ಮಿಂಚಿಂಗ್'​...

aruna kumari
ನಾಗವರ್ಧನ್​ ಹಾಗೂ ಅರುಣಾ ಕುಮಾರಿ
Published on

ಬೆಂಗಳೂರು: ಸದ್ಯ ಎಲ್ಲೆಲ್ಲೂ ಚಿತ್ರರಂಗದದವರ ಮೇಲಾಗುತ್ತಿರುವ ವಂಚನೆ ಪ್ರಕರಣದ್ದೇ ಸುದ್ದಿ. ನಟ ದರ್ಶನ್​ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಈ ಸುದ್ದಿಯ ಬೆನ್ನಲ್ಲೇ ಕೇಳಿಬಂದಿದ್ದರು ಅರುಣಾ ಕುಮಾರಿ ಹೆಸರು. ದರ್ಶನ್ ಅವರ ಆಸ್ತಿ ಪತ್ರಗಳನ್ನು ನಕಲು ಮಾಡಿ​ ಅವರಿಗೆ ಮೋಸ ಮಾಡಿದ್ದಾರೆ ಎಂಬ ಗಂಭೀರ ಆರೋಪ ಇವರ ಮೇಲಿದೆ. ಮಾತ್ರವಲ್ಲದೇ ಈ ಹಿಂದೆ ಇದೇ ಅರುಣಾ ಉದ್ಯಮಿ ನಾಗವರ್ಧನ್​ ಅವರಿಗೂ ವಂಚನೆ ಮಾಡಿದ್ದರು ಎನ್ನಲಾಗಿದ್ದು, ಇದೀಗ ಈ ಪ್ರಕರಣ ಕುತೂಹಲ ಘಟಕ್ಕೆ ತಲುಪಿದೆ.

ಅದೇನೆಂದರೆ ಅರುಣಾಳಿಂದ ವಂಚನೆಗೆ ಒಳಗಾಗಿದ್ದಾರೆ ಎನ್ನಲಾದ ಉದ್ಯಮಿ ನಾಗವರ್ಧನ್​ ಇದೀಗ ಅರುಣಾ ಕುರಿತು ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ತೆಲುಗಿನ ಶ್ರೀಮಂತುಡು ಚಿತ್ರವನ್ನು ಕನ್ನಡದಲ್ಲಿ ಶ್ರೀಮಂತ ಎಂದು ರಿಮೇಕ್ ಮಾಡೋದಾಗಿ ನಂಬಿಸಿ ನಾಗವರ್ಧನ್​ರನ್ನು ಅರುಣಾ ವಂಚಿಸಿದ್ದರು ಎನ್ನಲಾಗಿದೆ.

ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ಮಾಡಿದ್ದ ನಾಗವರ್ಧನ್​, ನಾಗವರ್ಧನ್​​ 2015ರಲ್ಲಿ ಅರುಣಾ ಕುಮಾರಿ ವಂಚನೆ ಮಾಡಿದ್ದಾರೆ. ಫೇಸ್​ಬುಕ್​ ಮೂಲಕ ಪರಿಚಯ ಮಾಡಿಕೊಂಡು, ಹೈ ಫ್ರೊಫೈಲ್ ಇದ್ದೇನೆ ಎಂದು ಹೇಳಿಕೊಂಡಿದ್ದರು. ಬಳಿಕ 10-12ಕೋಟಿ‌ ಮೊತ್ತದ ಪ್ರಾಜೆಕ್ಟ್ ತೋರಿಸಿದ್ದರು. ಲ್ಯಾಂಡ್ ತೋರಿಸಿ ನಿರ್ಮಾಣ ಕಾರ್ಯಕ್ಕೆ ಬಂದರು. ಮೊದಲು ಸಿನಿಮಾ ಮಾಡುವುದಾಗಿ ಪರಿಚಯ ಮಾಡಿಕೊಂಡರು, ನಂತರ ಮೋಸ ಮಾಡಿದರು ಎಂದಿದ್ದರು.

ಈಗ ಅರುಣಾ ಕುಮಾರಿಯ ವಂಚನೆ ಪ್ರಕರಣಗಳು ಒಂದೊಂದಾಗಿ ತೆರೆದುಕೊಳ್ಳುತ್ತಿರುವ ಹಿನ್ನಲೆ, ಅರುಣಾ ಕುಮಾರಿ ಕುರಿತೇ ಸಿನಿಮಾ ಮಾಡಲು ನಾಗವರ್ಧನ್ ಚಿಂತನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net