

ಮುಂಬೈ: ಗಂಗೂಬಾಯಿ ಕಥಿಯಾವಾಡಿ ಭರ್ಜರಿ ಯಶಸ್ಸಿನ ನಂತರ ಬಾಲಿವುಡ್ ನಟಿ ಆಲಿಯಾ ಭಟ್ ಭಾರಿ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಅದ್ಭುತ ಅಭಿನಯದ ನಂತರ ಆಲಿಯಾಗೆ ಹಲವಾರು ಅವಕಾಶಗಳು ಅರಸಿ ಬರುತ್ತಿವೆ.
ಬಾಲಿವುಡ್ ನಟಿ ಆಲಿಯಾ ಭಟ್ ಅಭಿನಯಕ್ಕೆ ಮನಸೋತು ವಿದೇಶದ ಸಿನಿಮಾ ಪ್ರೇಕ್ಷಕರು ಕೂಡ ಗಂಗೂಬಾಯಿ ಚಿತ್ರ ನೋಡಿದ ನಂತರ ಚಿತ್ರಮಂದಿರದಲ್ಲೇ ಸರಿ ಸುಮಾರು ಎಂಟು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಯಾಗಿದೆ. ಜರ್ಮನ್ ದೇಶದ ಬೆರ್ಲಿನ್ ನಗರದ ಚಿತ್ರಮಂದಿರದಲ್ಲಿ ಯಾವ ಸ್ಟಾರ್ ನಟನಿಗೂ ಸಿಗದ ಮೆಚ್ಚುಗೆ ಆಲಿಯಾ ಭಟ್ಗೆ ವ್ಯಕ್ತವಾಗಿದೆ.
ಚಿಕ್ಕವಯಸ್ಸಿನಲ್ಲಿಯೇ ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಗೆದ್ದು ಬೀಗುತ್ತಿರುವ ಆಲಿಯಾ ಇದೀಗ ಹಾಲಿವುಡ್ಗೆ ಹಾರುವ ತಯಾರಿ ನಡೆಸಿದ್ದಾರೆ. . ‘ವಂಡರ್ ವುಮೆನ್’ ಸಿನಿಮಾಗಳಲ್ಲಿ ನಟಿಸಿರುವ ಗಾಲ್ ಗಡೋಟ್ ಅವರೊಂದಿಗೆ ಆಲಿಯಾ ನಟಿಸಿಲಿದ್ದಾರೆ. ಓಟಿಟಿಯ ದೈತ್ಯ ಸಂಸ್ಥೆ ನೆಟ್ಫ್ಲಿಕ್ಸ್ ನಿರ್ಮಾಣ ಮಾಡುತ್ತಿದೆ.
ನೆಟ್ಫ್ಲಿಕ್ಸ್ನ ‘ಹಾರ್ಟ್ ಆಫ್ ಸ್ಟೋನ್’ ತಂಡ ಸೇರಲಿದ್ದಾರೆ. ಜೋಯಾ ಅಖ್ತರ್ ನಿರ್ದೇಶಿಸಿದ ಅವರ 2019 ರ ಚಲನಚಿತ್ರ ‘ಗಲ್ಲಿ ಬಾಯ್’ ಆ ವರ್ಷದ ಬರ್ಲಿನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಥಮ ಪ್ರದರ್ಶನಗೊಂಡಿತ್ತು.ಈ ಸಿನಿಮಾ ವಿಶ್ವದಾದ್ಯಂತ $25M (ಸುಮಾರು 193 ಸಾವಿರ ಕೋಟಿ ರೂ) ಗಳಿಸಿದೆ. ಈ ಚಲನಚಿತ್ರವು ಈಗ ಅಮೆಜಾನ್ ಪ್ರೈಮ್ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ. ಇದೀಗ ಆಲಿಯಾ ಹಾಲಿವುಡ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಅಂದಹಾಗೆ 'ಗಂಗೂಬಾಯಿ ಕಥಿಯಾವಾಡಿ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂಪಾಯಿ ಬಾಚಿಕೊಂಡಿದೆ.