ಮಮತಾಗೆ ಅಭಿನಂದನೆಗಳ ಮಹಾಪೂರ: ದೀದೀ ಓ ದೀದೀ ಅಂದೋರೆಲ್ಲಿ ಹೋದ್ರು ಎಂದು ಅಖಿಲೇಶ್‌ ವ್ಯಂಗ್ಯ

akhilesh
Published on

ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣೆಯ ಫಲಿತಾಂಶ ಬಹುತೇಕ ಮುಗಿಯುತ್ತಾ ಬಂದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಭಾರೀ ಮುನ್ನಡೆ ಸಾಧಿಸಿದ್ದು, ನಿರೀಕ್ಷೆಯಂತೆ ಗೆಲುವಿನತ್ತ ಹೆಜ್ಜೆ ಇಟ್ಟಿದೆ. ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಸುರಿಮಳೆಯಾಗುತ್ತಿದೆ.

ಈ ನಡುವೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಖಿಲೇಶ್‌ಶ್ ಯಾದವ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟು ಟ್ವೀಟ್‌ ಮಾಡಿದ್ದಾರೆ. ಮಮತಾ ಬ್ಯಾನರ್ಜಿಯವರಿಗೆ ಅಭಿನಂದನೆ ಸಲ್ಲಿಸಿರುವ ಸಲ್ಲಿಸಿರುವ ಅವರು, 'ದೀದೀ, ಓ ದೀದೀ' ಎಂದು ಮೂದಲಿಸಿದ್ದವರಿಗೆ ಜನರೇ ಉತ್ತರ ಕೊಟ್ಟಿದ್ದಾರೆ, ಈಗ ಅವರೆಲ್ಲಿ ಹೋದರು ಎಂದ್ದು ದೀದಿ ಜಿಯೋ ದೀದಿ (ದೀದಿ ನೀವು ದೀರ್ಘ ಕಾಲ ಬಾಳಿ) ಎಂದಿದ್ದಾರೆ.

ಒಟ್ಟು 292 ಸ್ಥಾನಗಳ ಪೈಕಿ, ಈಗಿನವರೆಗೆ ಟಿಎಂಸಿ 200ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಗೆಲುವಿಗೆ ಬೇಕಾದ ಬಹುಮತದ 147 ಮ್ಯಾಜಿಕ್ ನಂಬರ್ ದಾಟಿದೆ. ಬಿಜೆಪಿ 83 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದರೆ ಕಾಂಗ್ರೆಸ್‌ ಒಂದೇ ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಆದರೆ ಅದೇ ಇನ್ನೊಂದೆಡೆ, ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ನಡುವಿನ ಪೈಪೋಟಿ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net