More

    ನನ್ನ ಪ್ರೇಯಸಿಗೆ ಕುಜ ದೋಷ- ಒಬ್ಬನೇ ಮಗನಾಗಿರುವ ನಾನೀಗ ಸಂದಿಗ್ಧಕ್ಕೆ ಸಿಲುಕಿದ್ದೇನೆ, ಪ್ಲೀಸ್‌ ದಾರಿ ತೋರಿ

    ನನ್ನ ಪ್ರೇಯಸಿಗೆ ಕುಜ ದೋಷ- ಒಬ್ಬನೇ ಮಗನಾಗಿರುವ ನಾನೀಗ ಸಂದಿಗ್ಧಕ್ಕೆ ಸಿಲುಕಿದ್ದೇನೆ, ಪ್ಲೀಸ್‌ ದಾರಿ ತೋರಿನಾನು ಬೆಂಗಳೂರಿನಿಂದ ಎಂ.ಟೆಕ್ ಪದವೀಧರ. ನನ್ನ ವಯಸ್ಸು 27. ನಾನು ಒಬ್ಬ ಹುಡುಗಿಯನ್ನು ಪ್ರೀತಿಸಿದೆ. ಅವಳು ನನ್ನ ಸಂಬಂಧದ ಹುಡುಗಿ. ನಾನು ಅವಳನ್ನು ಬಾಲ್ಯದಿಂದಲೇ ಬಲ್ಲೆ. ಅವಳು ಒಳ್ಳೆಯ ಹುಡುಗಿ. ನಾನು ಅವಳ ಕುಟುಂಬಕ್ಕೆ ಮದುವೆಯ ಪ್ರಸ್ತಾಪವನ್ನು ಇಟ್ಟುಕೊಂಡಿದ್ದೇನೆ. ಅವರು ನನ್ನ ಪ್ರಸ್ತಾವವನ್ನು ಒಪ್ಪಿಕೊಂಡರು. ನನ್ನ ಕುಟುಂಬದಿಂದಲೂ ಯಾವುದೇ ವಿರೋಧವಿಲ್ಲ.

    ಆದರೆ ಸಮಸ್ಯೆ ಅವಳ ಕುಂಡಲಿಯಲ್ಲಿದೆ. ಕೆಲವು ಸ್ಥಳೀಯ ಜ್ಯೋತಿಷಿಗಳು ಆಕೆಗೆ ಕುಜ ದೋಷ ಹೊಂದಿದ್ದಾಳೆ ಎಂದು ಹೇಳುತ್ತಾರೆ. ಕೆಲವು ಖ್ಯಾತ ಜ್ಯೋತಿಷಿಗಳು ಇದರಿಂದ ಏನೂ ಸಮಸ್ಯೆ ಇಲ್ಲ ಎಂದಿದ್ದಾರೆ. ನನಗೀಗ ಸಂಕಷ್ಟ ಎದುರಾಗಿದೆ. ಮದುವೆಯಾಗಲು ಭಯ. ನನ್ನ ಹೆತ್ತವರಿಗೆ ನಾನು ಒಬ್ಬನೇ ಮಗ. ಹೀಗೆಂದು ಅವಳನ್ನು ಬಿಡುವುದು ಕಷ್ಟ. ನಾನು ಏನು ಮಾಡಲಿ. ದಯವಿಟ್ಟು ನನಗೆ ಸಹಾಯ ಮಾಡಿ.

    ಉತ್ತರ: ನೀವು ವೇದಗಳನ್ನಾಗಲೀ ಪ್ರಾಚೀನ ಗ್ರಂಥಗಳನ್ನಾಗಲೀ ನೋಡಿಲ್ಲವೆನಿಸುತ್ತದೆ. ನಮ್ಮ ಪ್ರಾಚೀನರು ಜಾತಕವನ್ನೇ ನೋಡುತ್ತಿರಲಿಲ್ಲ. ರಾಮಾಯಣದಲ್ಲಿ ರಾಮ ಸೀತೆಗಾಗಲೀ , ಮಹಾಭಾರತದಲ್ಲಿ ದ್ರೌಪದಿ ಪಾಂಡವರಿಗಾಗಲೀ ಜಾತಕ ನೋಡಿದ್ದು ಕೇಳಿದ್ದೀರಾ? ಇದು ಯಾವುದೋ ಕಾಲದಲ್ಲಿ ಗ್ರೀಕರಿಂದ ಬಂದ ಬಳುವಳಿ.

    ಇಂದಿನ ಜ್ಯೋತಿಷಿಗಳು ಹಣ ಮಾಡಲು ಇದನ್ನು ಪಣವಾಗಿ ಬಳಸುತ್ತಿದ್ದಾರೆ. ಹೆಣ್ಣನ್ನು ಹೀನಗಳೆಯಲು ಇವೆಲ್ಲಾ ಹುನ್ನಾರ. ಹೆಣ್ಣಿಗೆ ಮಾತ್ರ ಕುಜದೋಷ, ಅತ್ತೆಯಿಲ್ಲದ ಮನೆ ಇತ್ಯಾದಿ. ಗಂಡಿಗೆ ಮಾತ್ರ ಏನೂ ಇಲ್ಲ. ನಕ್ಷತ್ರ ಗ್ರಹ ಇವೆಲ್ಲಾ ಮನುಷ್ಯನನ್ನು ಬಾಧಿಸುವುದಾದರೆ ಹೆಣ್ಣನ್ನು ಮಾತ್ರ ಯಾಕೆ. ನಕ್ಷತ್ರ ಗ್ರಹಗಳಿಗೂ ಗಂಡನ್ನು ಕಂಡರೆ ಭಯವೇ? ವಿದ್ಯಾವಂತರಾಗಿ ಈ ಮೂಢನಂಬಿಕೆಗಳನ್ನು ಪಾಲಿಸುತ್ತಾರಲ್ಲ ? ನಿಮಗೆ ವೈಜ್ಞಾನಿಕ ದೃಷ್ಟಿ ಇರಬೇಕಲ್ಲವೇ? ನಾನು ಯಾವ ಜಾತಕವನ್ನೂ ನೋಡದೇ ಮದುವೆಯಾಗಿ 54 ವರ್ಷ ಸಂಸಾರ ಮಾಡಿದೆ. ನನ್ನ ಮಗ ಮಗಳಿಗೂ ಯಾವ ಜಾತಕವನ್ನೂ ನೋಡದೇ ಮದುವೆಮಾಡಿ ಅವರು 30 ವರ್ಷಗಳಿಂದ ದಂಪತಿಗಳು ಸುಖವಾಗಿ ಆರೋಗ್ಯವಾಗಿಯೇ ಇದ್ದಾರೆ. ದಾಂಪತ್ಯಕ್ಕೆ ಬೇಕಾಗಿರುವುದು ಪರಸ್ಪರರಲ್ಲಿ ಗೌರವ ಮತ್ತು ಅಂತಃಕರಣಗಳಷ್ಟೇ. ಪುರಂದರದಾಸರೇ ಹೇಳಿಲ್ಲವೇ? ‘ ರವಿಚಂದ್ರ ಬುಧನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ’ ಅಂತ. ದೇವರನ್ನು ನಂಬಿ ಸಾಕು ಜಾತಕವನ್ನಲ್ಲ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗೆ ಇಲ್ಲಿ ಕ್ಲಿಕ್ಕಿಸಿ:
    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಅವನನ್ನು ಬಿಟ್ಟುಬಿಟ್ರೆ ಸತ್ತೇಹೋಗಿಬಿಡ್ತಾನೆ ಅಂತ ಮೂರ್ಖರ ಹಾಗೆ ಹೇಳ್ತಿದ್ದಿಯಲ್ಲಾ! ಏನ್‌ ಹೇಳೋದು ನಿಮ್ಮಂಥವರಿಗೆ?

    ಹೆಣ್ಣುಬಾಕ ಗಂಡನನ್ನು 35 ವರ್ಷ ಸಹಿಸಿಕೊಂಡ್ಯಲ್ಲಮ್ಮಾ… ಆತ ವಾಪಸ್‌ ಬಂದ್ರೆ ಖಂಡಿತಾ ದಾಂಪತ್ಯ ಜೀವನ ಬೇಡ…

    ಹೆಣ್ಣುಮಕ್ಕಳನ್ನು ಕಂಡರೆ ನಿಮ್ಮ ಮನಸ್ಸು ದುರ್ಬಲವಾಗುವುದೇಕೆ? ಹಿಂದೆ ಮುಂದೆ ಯೋಚನೆ ಮಾಡಬೇಕಲ್ವೆ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts